೭ನೇ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ಯ ಗಣೇಶ ಕೂದ್ರೋಳಿ ಜಾಗೃತಿ ಜಾದು ಸ್ಪರ್ಶ ಕಾರ್ಯಕ್ರಮ
ಗಂಗಾವತಿ: ನಗರದ ವಿಕಾಸ ಅಕಾಡೆಮಿ ಹಾಗೂ ಶ್ರೀ ಕೆಂದೋಳ್ಳೆ ರಾಮಣ್ಣ ಪದವಿಪೂರ್ವ ಹಾಗೂ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಪ್ರೌಢಶಾಲಾ ಭಾರತ ವಿಕಾಸ ಸಂಗಮ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೆಡಂ ಸಹಯೋಗದಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂದ್ರೋಳಿ ಗಣೇಶ ಅವರಿಂದ ಜಾಗೃತಿ ಜಾದೂ ಕಾರ್ಯಕ್ರಮ ನಡೆಯಿತು.
ವಿವಿಧ ಜಾದೂ ಮೂಲಕ ಜಾಗೃತಿ ಮೂಡಿಸಲಾಯಿತು. ಪ್ರತಿ ಜಿಲ್ಲೆಯಲ್ಲಿ ವಿವಿಧ ರೀತಿಯ ಕ್ರೀಡೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ೭ನೇ ಭಾರತಿಯ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಲು ತಾವು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾಡು-ನುಡಿ-ನೆಲ-ಜಲ-ಭಾ?-ಸಾಹಿತ್ಯ-ಸಂಸ್ಕೃತಿ-ಕಲೆ-ಸಾಹಿತ್ಯ-ಸಂಗೀತ ವಿವಿಧ ರೀತಿಯ ಶಿಕ್ಷಣ ದೊರೆಯುತ್ತಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕರಾದ ವೀರೇಶ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಬಸವರಾಜ ಪಾಟೀಲ ಸೇಡಂ ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಒಳ್ಳೆಯ ಕಾರ್ಯಕ್ರಮ ಆಯೋಜಿಸುವ ಮೂಲಕ ನಮ್ಮ ಭಾಗದ ಘನತೆ ಗೌರವ ಬೆಳಕಿಗೆ ಬಂದಿದೆ. ಜನೆವರಿ-೨೯ ರಿಂದ ಪ್ರೆಬುವರಿ ೬ ರವರೆಗೆ ೭ನೇ ಭಾರತಿಯ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಗಂಗಾವತಿ ತಾಲೂಕಿನ ಜನರು ಸಹಾಯ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಾಗೃತಿ ಜಾದೂಗಾರ ಕೂದ್ರೋಳಿರವರು ಹಾಗೂ ಎಸ್.ಕೆ.ಆರ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸರಾವ್ ಕಲ್ಯಾಣಿ, ಕಾಲೇಜಿನ ಪ್ರಾಚಾರ್ಯರಾದ ಶಿವಾನಂದ ಮೇಟಿ. ಎಸ್.ಕೆ.ಆರ್ ಸಮೂಹ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಮೋಹನ್, ಎಸ್.ಕೆ.ಆರ್ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಯಶವಂತ, ವೆಂಕಟೇಶ, ಉದ್ಯಮಿಗಳಾದ ಗುರುಶಾಂತಪ್ಪ ಪಟ್ಟಣಶೆಟ್ಟಿ, ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕರಾದ ವೀರೇಶ ಮ್ಯಾಗೇರಿ, ತಾಲೂಕ ಸಂಚಾಲಕರಾದ ಮಂಜುನಾಥ ಹೊಸಕೇರಾ, ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಮದ್ದಾನೆಪ್ಪ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ ಹಾಗೂ ಜಾದುಗಾರು ತಂಡದ ಸದಸ್ಯರಾದ ಕುಮಾರಿ ರೇಖಾ ವೆಂಕಟೇಶ್ ಮತ್ತು ಈ ಕಾರ್ಯಕ್ರಮದಲ್ಲಿ ಎಸ್.ಕೆ.ಆರ್ ಸಮೂಹ ಸಂಸ್ಥೆಯ ಸುಮಾರು ೧೩೦೦ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ವಂದನಾರ್ಪಣೆಯನ್ನು ಶಿವಾನಂದ ಮೇಟಿರವರು ವಂದಿಸಿದರು.