ನಾಗರಾಜ ಜುಮ್ಮನ್ನವರವರಿಗೆ ರಾಜ್ಯ ಹಿರಿಯ ಉಪಾಧ್ಯಕ್ಷ ಪಟ್ಟ

0

Get real time updates directly on you device, subscribe now.


ಕೊಪ್ಪಳ: ಸರಕಾರಿ ನೌಕರರ ಸಂಘದಕೊಪ್ಪಳ ಜಿಲ್ಲಾಘಟಕಕ್ಕೆ ಸತತ ಮೂರನೇ ಬಾರಿಜಿಲ್ಲಾಧ್ಯಕ್ಷರಾಗಿಆಯ್ಕೆಯಾದ ನಾಗರಾಜಜುಮ್ಮನ್ನವರಿಗೆ ಸರಕಾರಿ ನೌಕರರ ಸಂಘದರಾಜ್ಯ ಹಿರಿಯಉಪಾಧ್ಯಕ್ಷರ ಹುದ್ದೆ ಲಭಿಸಿದೆ.
ಬುಧವಾರ ಬೆಂಗಳೂರು ನಗರದಕಬ್ಬನಉದ್ಯಾನವನದ ಸರಕಾರಿ ನೌಕರರ ಭವನದಲ್ಲಿ ಸರಕಾರಿ ನೌಕರರ ಸಂಘದರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ನಾಗರಾಜಜುಮ್ಮನ್ನವರ ಹಿರಿತನವನ್ನು ಹಾಗೂ ಕಳೆದ ೨೨ ವರ್ಷಗಳಿಂದ ಅತ್ಯಂತ ಕ್ರಿಯಾಶೀಲವಾಗಿ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿರುವದನ್ನು ಮನಗಂಡುಸರಕಾರಿ ನೌಕರರ ಸಂಘದರಾಜ್ಯ ಹಿರಿಯಉಪಾಧ್ಯಕ್ಷರ ಹುದ್ದೆಯನ್ನು ನೀಡುವ ಮೂಲಕ ಸಂಘಟನೆಗೆ ಶ್ರಮವಹಿಸಿದ ನಾಯಕರನ್ನು ಗುರುತಿಸಿದಂತೆ ಆಗಿದೆ.
ಈ ಸಮಯದಲ್ಲಿ ಸರಕಾರಿ ನೌಕರರ ಸಂಘದರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ, ಗೌರವಾಧ್ಯಕ್ಷರಾದಎಸ್.ಬಸರಾಜ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಗಿರಿಗೌಡ್ರು, ಜಿಲ್ಲಾ ಕಾರ್ಯದರ್ಶಿಯಾದ ಶಿವಪ್ಪ ಜೋಗಿ, ವಿಕಲಚೇತನ ನೌಕರರ ಸಂಘದರಾಜ್ಯಾಧ್ಯಕ್ಷರಾದ ಬೀರಪ್ಪಅಂಡಗಿ, ನೌಕರರ ಸಂಘದ ನಿರ್ದೇಶಕರಾದ ಬಾಳಪ್ಪ ಕಾಳೆ, ಸಂಜೀವ, ಸುರೇಶ ಮೋರಗೇರಿ, ಕಾಶಪ್ಪ ಹಳ್ಳಿ, ಸುನೀಲ್,ವೆಂಕಟೇಶಕುಲಕರ್ಣಿ,ನಾಗರಾಜ ಕುಷ್ಟಗಿ,ಶ್ರೀನಿವಾಸ ಜನಾದ್ರಿಮುಂತಾದವರು ಹಾಜರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!