ಗವಿಸಿದ್ಧೇಶ್ವರ ಸ್ವರ ಸಂಚಾರ ಕಲಾತಂಡದಿಂದ ಮಾಸಿಕ ಕಾರ್ಯಕ್ರಮ
ಕೊಪ್ಪಳ- ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದಿಂದ ನಿರಂತರವಾಗಿ ಕಳೆದ ೧೪ ವ?ದಿಂದ ನಡೆದುಕೊಂಡು ಬರುತ್ತಿರುವ ಪ್ರತಿ ತಿಂಗಳ ಗವಿಸಿದ್ಧೇಶ್ವರ ಸ್ವರ ಸಂಚಾರ ಕಲಾತಂಡದಿಂದ ಮಾಸಿಕ ಕಾರ್ಯಕ್ರಮ ದಿನಾಂಕ ೬.೦೧.೨೦೨೫ ರಂದು ಸಾಯಂಕಾಲ ೭.೩೦ ಗಂಟೆಗೆ ಕಿನ್ನಾಳದ ಗವಿಸಿದ್ದೇಶ್ವರ ಶರಣಬಳಗ ಆಯೋಜಿಸಿರುವ ಗವಿಸಿದ್ದೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಸ್ವರ ಸಂಚಾರ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿದವು.ಸ್ವರ ಸಂಚಾರ ಕಾರ್ಯಕ್ರಮದಲ್ಲಿ ವಚನ ಗಾಯನವನ್ನು ಚಂದನ ಹೊಸಪೇಟೆ,ಗವಿಸಿದ್ಧೇಶ್ವರ ಭಕ್ತಿಗೀತೆಗಳನ್ನು ಶ್ರೀಗೌರಿ.ಎಂ.ಪಾಟೀಲ್, ಹಿಂದುಸ್ತಾನಿ ಗಾಯನ ಪುನೀತ್ ಡಣಾಪುರ್, ಭಾವಗೀತೆ ಕೆ.ಸಾಯಿಸಮರ್ಥ್, ತತ್ವಪದ ಕೆ.ಸನ್ನಿಧಿ ನಡೆಸಿಕೊಟ್ಟರು.ಗವಿಸಿದ್ಧೇಶ್ವರ ಪುರಾಣವನ್ನು ಪಂಪಣ್ಣ ಎಲಿಗಾರ ಅವರಿಂದ ನಡೆಯಿತು.ಗ್ರಾಮದ ಹಿರಿಯರಾದ ಸಂಗಪ್ಪ ಚಕ್ರಸಾಲಿ ಶಿಕ್ಷಕರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು.ವೈಷ್ಣವಿ ಕಮ್ಮಾರ ನಿರೂಪಿಸಿದರು. ಗಂಗಾಧರ ಅರಳಿಕಟ್ಟಿ ವಂದಿಸಿದರು. ಕಲಾತಂಡದ ಸಂಗೀತ ನಿರ್ದೇಶಕರು ಹಾಗೂ ಮಾರ್ಗದರ್ಶಕರಾದ ವೀರೇಶ ಹಿಟ್ನಾಳ್ ಹಾಗೂ ಗ್ರಾಮದವರಾದ ವೆಂಕಟರಾವ್ ದೇಸಾಯಿ, ಶರಣ ಭಕ್ತ ಬಳಗದ ಸದಸ್ಯರು ಹಾಗೂ ಗ್ರಾಮದ ಅನೇಕ ಭಕ್ತ ಬಳಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.