ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗಡಿಗಳ ವ್ಯವಸ್ಥೆ

0

Get real time updates directly on you device, subscribe now.


ಅಂಗಡಿಗಳ ವೈಶಿಷ್ಟ್ಯತೆ: ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋಈತ್ಸವಕ್ಕೆ ದಿನಗಣನೆ ಆರಂಭವಾಗಿದ್ದು,ಸಂಸ್ಥಾನ ಮಹಾರಥೋತ್ಸವದ ಅಂಗವಾಗಿ ಶ್ರೀ ಗವಿಮಠದ ಆವರಣದ ಮುಂಭಾಗದಲ್ಲಿ ಸುಮಾರು ೧೨ ಎಕರೆ ವಿಸ್ತೀರ್ಣದ ಮೈದಾನದಲ್ಲಿ ೯೦೦ ರಿಂದ ೧೦೦೦ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ವೈವಿಧ್ಯಮಯವಾದ ಅಂಗಡಿ-ಮುಂಗಟ್ಟುಗಳು ತೆರೆಯುವ ಕಾರ್ಯಗಳು ಭರದಿಂದ ಸಾಗಿವೆ. ಈ ಎಲ್ಲ ಅಂಗಡಿ ಮುಂಗಟ್ಟುಗಳು ಶ್ರೀಮಠದ ಕಂಬಗಳಂತೆ ಕಾಣುವ ೪ ವಿಶಿಷ್ಟ ಮಹಾದ್ವಾರಗಳನ್ನು ಶ್ರೀಗವಿಮಠದ ಸಂಸ್ಥಾಪಕ ಶಿವಯೋಗಿಗಳಾದ ರುದ್ರಮುನಿ ಮಹಾಸ್ವಾಮಿಗಳು, ಶಿವಶಾಂತವೀರ ಮಹಾಸ್ವಾಮಿಗಳು, ಮರಿಶಾಂತವೀರ ಮಹಾಸ್ವಾಮಿಗಳು ಹಾಗೂ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಲಿವೆ. ಜಾತ್ರಾ ಸಮಯದಲ್ಲಿ ಅವು ಅತ್ಯಾಕರ್ಷಕವಾಗಿ ನೋಡುಗರ ಕಣ್ಮನಗಳನ್ನು ಸೆಳೆಯುವವು.

ಅಂಗಡಿಗಳ ಶಿಸ್ತು ಮತ್ತು ನೀಲನಕ್ಷೆ:
ಈ ಬೃಹತ್ ಮಹಾದ್ವಾರಗಳ ಮುಖೇನ ಜನರಿಗೆ ರಹದಾರಿ ಕಲ್ಪಿಸಿದೆ. ಈ ವಿಶಾಲ ಆವರಣದಲ್ಲಿ ಪ್ರತಿವರ್ಷ ಜಾತ್ರೆ ಆವರಣದ ಮಳಿಗೆಗಳಲ್ಲಿ ೧೨ ಸಾಲುಗಳಿದ್ದು, ಪ್ರತಿ ಸಾಲುಗಳ ಮಧ್ಯ ಜನಸಂದಣಿ ಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದೆ.ಪ್ರತಿ ಸಾಲಿನಲ್ಲಿರುವ ಅಂಗಡಿಗಳಿಗೆ ಕ್ರಮ ಬದ್ದವಾದ ಕ್ರಮ ಸಂಖ್ಯೆಯನ್ನು ಸಹ ಕೊಡಲಾಗಿದೆ.
ಮಿಠಾಯಿ ಅಂಗಡಿಗಳ ಸಾಲುಗಳು,ಬಳೆ ಅಂಗಡಿಗಳ ಸಾಲುಗಳು,ಹೋಟೆಲುಗಳ ಸಾಲುಗಳು,ಸ್ಟೇಷನರಿ ಅಂಗಡಿಗಳ ಸಾಲುಗಳು,ಹಣ್ಣು ಹಾಗೂ ಜ್ಯೂಸ್ ಅಂಗಡಿಗಳ ಸಾಲುಗಳು,ಕಬ್ಬಿಣ ಸಾಮಾನುಗಳ ಅಂಗಡಿಗಳ ಸಾಲುಗಳು,ಬಾಂಡೆ ಅಂಗಡಿಗಳ ಸಾಲುಗಳು,ಜೋಕಾಲಿ ಆಟ ಆಡುವ ಸಾಲುಗಳು,ಕೃಷಿ ಪ್ರದರ್ಶನ,ಫಲ ಪುಷ್ಪ ಪ್ರದರ್ಶನ ಸ್ನಾನ ಮತ್ತು ಶೌಚಾಲಯಗಳ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಪೋಲಿಸ್ ಚೌಕಿ,ತುರ್ತು ಚಿಕಿತ್ಸಾ ಘಟಕ, ಮಕ್ಕಳಿಗೆ ಹಾಲುಣಿಸುವ ಕೇಂದ್ರ, ವೃದ್ಧ ಹಾಗೂ ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿ ಇತ್ಯಾದಿ ವ್ಯವಸ್ಥೆ ಮಾಡಲಾಗಿದೆ.
ಸ್ವಚ್ಚತೆಯ ಆಗರ:
ಕೊಪ್ಪಳ ನಗರಸಭೆ ಜಾತ್ರೆಯ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ ಮಾಡುವಲ್ಲಿ ಶ್ರೀ ಗವಿಮಠದೊಂದಿಗೆ ಕೈಜೊಡಿಸುತ್ತದೆ. ಈ ಜಾತ್ರಾ ಮಳಿಗೆಗಳ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಅಂಗಡಿಕಾರರಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಕಾಯ್ದುಕೊಳ್ಳಲು ಈ ಮಳಿಗೆಗಳ ಉಸ್ತುವಾರಿ ಸಮಿತಿ ನಿರ್ದೇಶಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಿಗೆ ೯೮೪೫೪೫೨೩೦೫, ೮೩೧೦೯೧೬೨೨೯, ೯೫೧೩೬೯೧೩೩೩, ೯೯೪೫೦೧೧೫೮೧ ಸಂಪರ್ಕಿಸಲು ಗವಿಮಠದ ಪ್ರಕಟಣೆ ತಿಳಿಸಿದೆ

Get real time updates directly on you device, subscribe now.

Leave A Reply

Your email address will not be published.

error: Content is protected !!