ಗವಿಮಠದ ಮಹಾದಾಸೋಹಕ್ಕೆ ಹರಿದು ಬರುತ್ತಿರುವ ರೊಟ್ಟಿ ಹಾಗೂ ದವಸ,ಧಾನ್ಯಗಳು
.
ಕೊಪ್ಪಳ : ದಕ್ಷೀ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದ ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಸದ್ಭಕ್ತರಿಂದ ದವಸ-ಧಾನ್ಯ, ಕಟ್ಟಿಗೆ, ರೊಟ್ಟಿಗಳನ್ನು ಶ್ರೀಮಠಕ್ಕೆ ತಂದು ಅರ್ಪಿಸುತಿದ್ದಾರೆ. ಇಂದುಕೊಪ್ಪಳ ತಾಲೂಕಿನ ಟಣಕನಕಲ್ಲ ಗ್ರಾಮದ ಸದ್ಭಕ್ತರಿಂದ ೭೦ ಪಾಕೇಟ್ ಸಜ್ಜೆ,ನೆಲ್ಲು.ಮೆಕ್ಕೆಜೋಳ,ಅಕ್ಕಿ ಮತ್ತು ಇತರ ದವಸ ಧಾನ್ಯಗಳನ್ನು ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ ಭಾವ,ಸಡಗರದೊಂದಿಗೆ ಶ್ರೀಗವಿಮಠಕ್ಕೆ ಆಗಮಿಸಿ ಮಹಾದಾಸೋಹಕ್ಕೆ ಸಲ್ಲಿಸಿದರು. ಇದರಿಂದಾಗಿ ಗವಿಮಠದಲ್ಲಿ ರೊಟ್ಟಿಗಳ ಸಪ್ಪಳ ಆರಂಭವಾಗಿದೆ. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.