ಜೆಡಿಎಸ್ ನಗರ ಘಟಕ ಅದ್ಯಕ್ಷರಾಗಿ ಸೋಮನಗೌಡ ನೇಮಕ
ಕೊಪ್ಪಳ, 09- ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷದ ನಗರ ಘಟಕಕ್ಕೆ ಅಧ್ಯಕ್ಷರಾಗಿ ಸೋಮನಗೌಡ ಯರದಿಹಾಳ ನೇಮಕವಾಗಿದ್ದಾರೆ.
ಕೊಪ್ಪಳ ನಗರಘಟಕಕ್ಕೆ ಜೆಡಿಎಸ್ ನಗರಾಧ್ಯಕ್ಷರನ್ನಾಗಿ ನೇಮಕಮಾಡಿ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಆದೇಶ ಹೊರಡಿಸಿದ್ದು ನಗರದಲ್ಲಿ ಪಕ್ಷ ಸಂಘಟಿಸುವಂತೆ ಸೂಚಿಸಿದ್ದಾರೆ.
ಸನ್ಮಾನ : ಜೆಡಿಎಸ್ ಪಕ್ಷದ ನಗರ ಘಟಕಕ್ಕೆ ಅಧ್ಯಕ್ಷರಾಗಿ ಸೋಮನಗೌಡ ಯರದಿಹಾಳ ಅವರನ್ನು ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ ಚಂದ್ರಶೇಖರ ಸನ್ಮಾನಿಸಿ ಆದೇಶ ಪತ್ರ ನೀಡಿದ್ದು ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರವೀಣ್ ಇಟಗಿ, ಸಿರಾಜ್ ಅಹ್ಮದ್, ವೆಂಕಟೇಶ್ ಸುಂದರಂ, ರಮೇಶ್ ಡಂಬ್ರಳ್ಳಿ, ವಿರೇಶ್ ಗೌಡ ಬಗನಾಳ, ಮಂಜುನಾಥ್ ಕುಣಿಕೇರಿ, ಸುಧಾಕರ್ ಎಂ, ಶ್ರೀನಿವಾಸ್ ಗೊಂದಾಳೆ, ಪರುಶುರಾಮ ಮೇಘರಾಜ ಇತರರು ಇದ್ದರು.