ಗೃಹಲಕ್ಷ್ಮಿಯರು ಜೀವ ಸಮೇತ ಮರಳಿ ಮನೆಗೆ ಬರುವ ಗ್ಯಾರಂಟಿಯೇ ಇಲ್ಲ- ಹೇಮಲತಾ ನಾಯಕ್
ಕೊಪ್ಪಳ : ರಾಜ್ಯದ ಬಳ್ಳಾರಿ, ಯಾದಗಿರಿ, ಕೊಪ್ಪಳ, ದಾವಣಗೆರೆ, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಯಲ್ಲಿ ಬಾಣಂತಿಯರ, ನವ ಶಿಶುಗಳ ಸರಣಿ ಸಾವನ್ನಪ್ಪಿರುವುದು ಖಂಡನೀಯ, ಈ ಸರಕಾರದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಗೃಹಲಕ್ಷ್ಮಿಯರು ಜೀವ ಸಮೇತ ಮರಳಿ ಮನೆಗೆ ಬರುವ ಗ್ಯಾರಂಟಿಯೇ ಇಲ್ಲ, ಆರೋಗ್ಯ ಸಚಿವರಿಗೆ ಈ ಮಾಹಿತಿ ಇರಲಿಲ್ಲವೇ ವೈದ್ಯಕ್ಷೇತ್ರದಲ್ಲಿ ಅಗಾಧ ಮುನ್ನಡೆ ಸಾಧಿಸಿರುವ ಈ ಆಧುನಿಕ ಕಾಲದಲ್ಲಿಯೂ ಮಹಿಳೆಯರು ಆಸ್ಪತ್ರೆಗಳಲ್ಲಿ ಜೀವ ಚೆಲ್ಲುತ್ತಿರುವುದು ರಾಜ್ಯಕ್ಕೆ ಗೌರವ ತರುವ ವಿಚಾರವಲ್ಲ, ಮಹಿಳೆಯರಿಗೆ ಗುರುಲಕ್ಷ್ಮಿ ಗ್ಯಾರಂಟಿ ಕೊಟ್ಟು ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತೇವೆ ಎನ್ನುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ, ಆದರೆ ಆಸ್ಪತ್ರೆಗಳಲ್ಲಿ ಇದೇ ಸರ್ಕಾರದ ಅವಧಿಯಲ್ಲಿ ಗೃಹಲಕ್ಷ್ಮೀಯರ ಮಾರಣ ಹೋಮ ಆಗುತ್ತಿದೆ, ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.
ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆ ಪೂರ್ಣ ಸಿಎಂ ಹದಿಗೆಟ್ಟಿದೆ ಆಸ್ಪತ್ರೆಗಳು ಸಾವಿನ ಕೂಪಗಳಾಗಿವೆ, ಕಳಪೆ ಔಷಧಿಗಳಿಂದ ಗೃಹ ಲಕ್ಷ್ಮಿಯರು ಬಲಿಯಾಗುತ್ತಿದ್ದಾರೆ, ಈ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ತಪ್ಪಿಸ್ಥರನ್ನು ಶಿಕ್ಷೆಗೋಳ ಪಡಿಸುವಂತೆ ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರು ಮಾತನಾಡಿ ಗುತ್ತೇದಾರ್ ಸಚಿನ್ ಪಂಚಾಳ ಅವರ ಆತ್ಮಕ್ಕೆ ಪ್ರಕರಣವು ರಾಜ್ಯ ಮಾತ್ರವಲ್ಲ ದೇಶದಾದ್ಯಂತ ಸುದ್ದಿಯಾಗಿದೆ ಅವರು ಬರೆದಿಟ್ಟಿರುವ ಡೆತ್ ನೋಟಿನಲ್ಲಿ ಕಿರುಕುಳದ ಉಲ್ಲೇಖವಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ರಾಜ್ಯಕ್ಕೆ ಆತ್ಮಹತ್ಯೆ ಭಾಗ್ಯವನ್ನು ದಯಪಾಲಿಸಿದೆ, ಸಚಿನ್ ಸಾವಿನ ಪ್ರಕರಣದ ಸಂಬಂಧ ಮುಖ್ಯಮಂತ್ರಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದು ದುರ್ಘಟನೆ ಸಿಬಿಐ ತನಿಖೆಗೆ ನೀಡಬೇಕು, ಸಚಿನ್ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು, ಪ್ರಿಯಾಂಕ್ ಖರ್ಗೆ ಕೂಡಲೇ ರಾಜನಾಮೆ ನೀಡಬೇಕು ಎಂದು ಹೇಳಿದರು.
ಬಿಜೆಪಿ ಎಸ್ .ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ್ ಮಾತನಾಡಿ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ರಾಜಕೀಯವಾಗಿ, ಮತ್ತು ಅವರ ವಿಚಾರಗಳನ್ನು ಗೌರವಿಸುವಲ್ಲಿ ಕಾಂಗ್ರೆಸ್ ಪಾರ್ಟಿ ನಿರಂತರವಾಗಿ ತೊಂದರೆ ಮಾಡುತ್ತಾ ಬಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿ ಸಾಮಾಜಿಕ ಅಸ್ಪೃಶ್ಯತೆ ಒಳಗೊಂಡಿರತಕ್ಕಂತ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಿ ಕತ್ತಲೆಯಲ್ಲಿ ಬದುಕುವ ಜನರನ್ನು ಮುಖ್ಯ ವಾಹಿನಿಗೆ ತರಲು ನಿರಂತರ ಪರಿಶ್ರಮವನ್ನು ಪಟ್ಟರು ಆದರೆ ಕಾಂಗ್ರೆಸ್ ಪಕ್ಷ ಇವರನ್ನು ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಅವರ ವಿಚಾರಧಾರೆಗಳನ್ನು ಪರಿಗಣಿಸದೆ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದರು.
ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಹಾಗೂ ಮೃತಪಟ್ಟ ನಂತರವೂ ಕಾಂಗ್ರೆಸ್ಸಿಗರು ಅವಮಾನಿಸಿದ್ದನ್ನು ದೇಶದ ಜನತೆಗೆ ಗೊತ್ತಾಗಿದೆ. ದೇಶದ ದಲಿತ ಶೋಷಿತ ಹಿಂದುಳಿದ ಸಮುದಾಯಗಳಿಗೆ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ಸಿಗರು ಯಾವ ರೀತಿ ನಡೆಸಿಕೊಂಡಿದ್ದಾರೆ,
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ, ಬಾಬಾ ಸಾಹೇಬರು ಮೃತಪಟ್ಟ ನಂತರ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ ಆದರೆ ನೆಹರು ಕುಟುಂಬಕ್ಕೆ ನೂರಾರು ಎಕರೆ ಕಾಂಗ್ರೆಸ್ ಭೂಮಿ ಕೊಟ್ಟಿದ್ದೆ ಕೊಟ್ಟಿದ್ದೇಕೆ, ಇತ್ತೀಚಿಗೆ ಭಾರತ ದೇಶದ ಯುವಕರು ಕಾರ್ಮಿಕರು ರೈತರು ಎಲ್ಲಾ ಸಮುದಾಯದ ವ್ಯಕ್ತಿಗಳು ನರೇಂದ್ರ ಮೋದಿಜಿಯವರ ಪಾರದರ್ಶಕ ಆಡಳಿತ ದೇಶದ ಭದ್ರತೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯ ಹಾದಿಯಲ್ಲಿ ಆಡಳಿತವನ್ನು ನೀಡುತ್ತಿರುವುದರಿಂದ ದೇಶದ ಜನರು ಸ್ವಯಂ ಪ್ರೇರಿತರಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಹಾಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರ ಈ ಬೂಟಾಟಿಕೆ ಹೇಳಿಕೆಗಳು ಯಾವುದೇ ಕಾರಣಕ್ಕೂ ಈ ದೇಶದ ಜನತೆ ಸಹಿಸುವುದಿಲ್ಲ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಸಾರ್ವಜನಿಕರು ತಕ್ಕ ಪಾಠ ಕಲಿಸಿದ್ದಾರೆ ಮುಂದೆಯೂ ಕೂಡ ಅವರಿಗೆ ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಹಾಗಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಯಾರು ಕಿವಿ ಕೊಡುವುದಿಲ್ಲ ಹಾಗಾಗಿ ಬಿಜೆಪಿ ಪಕ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಪ್ರತಿಯೊಬ್ಬರಿಗೂ ಸಂವಿಧಾನದ ಆಶಯದಡಿಯಲ್ಲಿ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಜಯಶ್ರೀ ಗೊಂಡಬಾಳ, ವಾಣಿಶ್ರೀ ಮಠದ, ರತ್ನಕುಮಾರಿ, ಬಿಜೆಪಿ ಮಾಧ್ಯಮ ವಕ್ತಾರ ಸೋಮಶೇಖರ್ ಗೌಡ ಸೋಮಣ್ಣ ಹಳ್ಳಿ, ಪ್ರಸಾದ್ ಗಾಳಿ ಉಪಸ್ಥಿತರಿದ್ದರು.