ಹೊಸ ವರ್ಷದಲ್ಲಿ ಸಕಾರಾತ್ಮಕವಾಗಿ ಪರಿವರ್ತನೆಯಾಗುವ ದೃಢಸಂಕಲ್ಪ ಮಾಡೋಣ

0

Get real time updates directly on you device, subscribe now.

Koppal ಹೊಸ ವರ್ಷದಲ್ಲಿ ಸಕಾರಾತ್ಮಕವಾಗಿ ಪರಿವರ್ತನೆಯಾಗುವ ದೃಢಸಂಕಲ್ಪ ಮಾಡೋಣ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ  ತಿಳಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿದ ಹೊಸ ವರ್ಷ ಆಚರಣೆ ಕಾರ್ಯಕ್ರಮವನ್ನು ಹೊಸ ವರ್ಷದ ಪಾಕೆಟ್ ಕ್ಯಾಲೆಂಡರ್ ಅನಾವರಣಗೊಳಿಸಿ ಮಾತನಾಡುತ್ತಾ ವರ್ಷ ಹೇಗೆ ಬದಲಾಗುತ್ತದೆಯೋ ಹಾಗೆ ನಾವು ಸಹ ನಮ್ಮ ಮನಸ್ಸಿನ ವಿಚಾರಗಳನ್ನು ನೆಗೆಟಿವ್ ನಿಂದ ಪಾಸಿಟಿವ್ ಗೆ ಬದಲಾವಣೆ ಮಾಡಿಕೊಳ್ಳಲೇಬೇಕು ಸಿಟ್ಟು, ಈರ್ಷೆ,ದ್ವೇಷ, ಅಸೂಯೆ, ಅಹಂಕಾರ ತುಂಬಿದ ವಿಚಾರಗಳು ಪರಿವರ್ತನೆಯಾಗಿ ಆತ್ಮಿಕ ಸ್ನೇಹ, ಪ್ರೀತಿ, ಶಾಂತಿ, ಸದ್ಭಾವನೆ ತುಂಬಿದ ವಿಚಾರಗಳು ನಮ್ಮಲ್ಲಿ ಬರಬೇಕು ಇನ್ನೊಬ್ಬರಿಂದ ಗೌರವ ಪ್ರೀತಿಯನ್ನು ನಿರೀಕ್ಷಿಸುವ ಬದಲು ಮೊದಲು ನಾನೇ ಅವರಿಗೆ ಗೌರವ ಪ್ರೀತಿಯನ್ನು ನೀಡುವ ದಾತನ ಗುಣವನ್ನು ಈ ಹೊಸ ವರ್ಷದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ನಾವೆಲ್ಲಾ ಹಳೆ ವರ್ಷಕ್ಕೆ ಹೇಗೆ ವಿದಾಯವನ್ನು ನೀಡುತ್ತಿದ್ದೇವೆಯೋ ಹಾಗೆಯೇ ಹಳೆ ವರ್ಷದ ದುಃಖದ ಮಾತು ಘಟನೆಗಳಿಗೂ ವಿದಾಯವನ್ನು ನೀಡಿ ಮನಸ್ಸು ಪ್ರಶ್ನೆ ಚಿತ್ತವಾಗುವ ಬದಲು ಪ್ರಸನ್ನ ಚಿತ್ತವಾಗಿರಲಿ ಎಂದರು ನಮ್ಮ ಮನಸ್ಸಿನ ಖುಷಿಯನ್ನು ಯಾವುದೇ ವ್ಯಕ್ತಿ ವಸ್ತುಗಳಿಗೆ ಅವಲಂಬನೆ ಮಾಡಿಕೊಳ್ಳಬಾರದು ನಮ್ಮ ಮನಸ್ಸಿನ ರಿಮೋಟ್ ಕಂಟ್ರೋಲ್ ನಮ್ಮ ಕೈಯಲ್ಲಿಯೇ ಇರಬೇಕು ಎಂದರು.
ಆಂತರಿಕ ಮಾನಸಿಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ ಅಧ್ಯಾತ್ಮ ಜ್ಞಾನ ಮತ್ತು ಮೆಡಿಟೇಶನ್ ಅತ್ಯವಶ್ಯಕ ಆದ್ದರಿಂದ ಜನವರಿ 5ನೇ ತಾರೀಖಿನಿಂದ ಒಂದು ವಾರ ಸಂಜೆ 5:30 ಗಾಗಿ ರಾಜಯೋಗ ಶಿಬಿರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ, ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಡಾII ಶಿಲ್ಪಾ ಬಾಚಲಾಪುರ್, ಹೇಮಾ, ಉಮೇಶ್ ಮುಂಡರಗಿ, ವೀರಯ್ಯ, ಮಹಾಬಲೇಶ್ವರ್, ಶರ್ಮ ಉಪಸ್ಥಿತರಿದ್ದರು. ಬಿಕೆ ಸ್ನೇಹ ಸ್ವಾಗತಿಸಿದರು ಸಾಮೂಹಿಕ

Get real time updates directly on you device, subscribe now.

Leave A Reply

Your email address will not be published.

error: Content is protected !!