ಜನವರಿ 6 ರ ಮುಷ್ಕರದಲ್ಲಿ ಯಾರೋ ಬಡಿಗೆ ಹಿಡ್ಕೋಬೇಡಿ ಅಹಿಂಸಾತ್ಮಕವಾಗಿ ಹೋರಾಟ ನಡೆಸಿ – ಅಲ್ಲಮ ಪ್ರಭು ಬೆಟ್ಟದೂರು.

0

Get real time updates directly on you device, subscribe now.

ಕೊಪ್ಪಳ :ಜನವರಿ 6 ರಂದು ನಡೆಯುವ ಮುಷ್ಕರದಲ್ಲಿ ಯಾರೋ ಬಡಿಗೆ ಹಿಡ್ಕೋಬೇಡ್ರಿ, ನಿಮ್ಮ ಗುಂಪು ಹೋಗಿ ನಮಸ್ಕಾರ ಮಾಡಿದರೆ ಸಾಕು ಹೋರಾಟಕ್ಕೆ ಬೆಂಬಲಿಸುತ್ತಾರೆ ಎಂದು ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಹೇಳಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಡಾ: ಬಿ,ಆರ್, ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಜನವರಿ 6 ರಂದು ನಡೆಯಲಿರುವ ಬೃಹತ್ ಮುಷ್ಕರದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಲ್ಲಮ ಪ್ರಭು ಬೆಟ್ಟದೂರು ಮುಂದುವರಿದು ಮಾತನಾಡಿ
ದಲಿತ ಸಂಘಟನೆಗಳಿಗೆ ತಪ್ಪು ಕಲ್ಪನೆಗಳು ಬರುತ್ತದೆ,ಯಾರೂ ಮಾಡಕ ಹೋಗಬೇಡಿ, ಅಹಂಸಾತ್ಮಕ ರೀತಿಯಲ್ಲೇ ನಮ್ಮ ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಲಿಕ್ಕೆ ಖಂಡಿತ ಸಾಧ್ಯವಿದೆ, ಅಂದು ಹನೊಂದು ಗಂಟೆ ಒಳಗಾಗಿ ಎಲ್ಲರೂ ಸೇರಿ ಪ್ರತಿಭಟನೆ ಪ್ರಾರಂಭಿಸೋಣ, ತಾವು ಯಾವ ರೀತಿಯಿಂದ ಈ ಹೋರಾಟಕ್ಕೆ ಪ್ರತಿಸ್ಪಂದನೆ ಕೊಡ್ತಾ ಇದ್ದೀರಿ, ಮುಂದೆ ನಡೆಯಲಿರತಕ್ಕಂತಹ ಅಣುಸ್ಥಾವರದ ವಿರುದ್ಧ, ಎಂಎಸ್‌ಪಿಎಲ್ ವಿಸ್ತರಣೆ ವಿರುದ್ಧವೂ ಇದೇ ಬಗೆಯ ಪ್ರತಿಸ್ಪಂದನೆ ಕೊಡಬೇಕು ಎಂದು ಕೋರಿದರು.
      ಮುಖಂಡ ಹನುಮೇಶ್ ಕಡೆಮನಿ ಮಾತನಾಡಿ ಹತ್ತು ಸಾವಿರ ಜನಕ್ಕೆ ಆಗುವಸ್ಟು ಪಲಾವ್ ಪೌಚ್ ಮಾಡಿಸುತ್ತಿದ್ದು,ಎಂಟು ಆಟೋಗಳ ಮೂಲಕ ಬೆಳಿಗ್ಗೆ 11:30ಯಿಂದ ಡಾ: ಬಿ,ಆರ್, ಅಂಬೇಡ್ಕರ್ ವೃತ್ತದ ಬಳಿ ಮತ್ತಿತರ ಕಡೆಗಳಲ್ಲಿ ಹಂಚಿಕೆ ಮಾಡಲಾಗುತ್ತದೆ,ನಾಲ್ಕೈದು ನೀರಿನ ಟ್ಯಾಂಕಗಳನ್ನು ಹಾಗೂ ಇಪ್ಪತ್ತು ಸಾವಿರ ನೀರಿನ ಪೌಚ್ ವ್ಯವಸ್ಥೆ ಮಾಡಲಾಗಿದೆ, ನೂರಾ ಐವತ್ತಕ್ಕೂ ಹೆಚ್ಚು ಬೈಕುಗಳ ವ್ಯವಸ್ಥೆ ಮಾಡಲಾಗುತ್ತಿದೆ, ಯಲಬುರ್ಗಾ ಕುಕುನೂರ ಸೇರಿ 140ಕ್ಕೂ ಹೆಚ್ಚು ಗಾಡಿ ವ್ಯವಸ್ಥೆ ಮಾಡಲಾಗುತ್ತಿದೆ, ಆಟೋದವರು, ವರ್ತಕರು ತಮ್ಮ ಅಂಗಡಿಗಳನ್ನು ಬಂದು ಮಾಡಿಕೊಂಡು ಸ್ವಯಂ ಪ್ರೇರಣೆಯಿಂದ ನಮ್ಮ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ, ಕುಕನೂರು ಯಲಬುರ್ಗಾ ದಿಂದ ಅಲ್ಪಸಂಖ್ಯಾತರು ಸ್ವತಃ ಗಾಡಿ ಮಾಡಿಕೊಂಡು ಬರುತ್ತಿದ್ದಾರೆ, ನ್ಯಾಯವಾದಿಗಳು ಬೆಂಬಲಿಸಬೇಕು, ಡಿಡಿಪಿಐಯವರಿಗೂ ಮನವಿ ಮಾಡಲಾಗಿದೆ,ಜನವರಿ 6 ರಂದು ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಸೇರಿ ವಾಹನಗಳ ಅಲ್ಲೇ ನಿಲ್ಲಿಸಿ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡು ತಾಲೂಕಾ ಪಂಚಾಯತ್ ಹತ್ತಿರದಿಂದ ಸಾಲಾರ್ ಜಂಗ್ ರಸ್ತೆಯಿಂದ ಡಾ:ಬಿ,ಆರ್,ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಶಾರದಾ ಟಾಕೀಸ್ ತಿರುವಿನಿಂದ ಗಡಿಯಾರ ಕಂಭ ಬಳಸಿಕೊಂಡು ಜವಾಹ ರಸ್ತೆ ಮೂಲಕ ಅಶೋಕ ವೃತ್ತಕ್ಕೆ ತಲುಪಿ ಸಭೆಯಾಗಿ ಮಾರ್ಪಾಡುತ್ತದೆ ಎಂದು ವಿವರಿಸಿದರು.
       ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ,ವಿ,ಕಣವಿ ಮಾತನಾಡಿ ನಮ್ಮ ವಕೀಲರ ಸಂಘದಿಂದ ಯಾವುದೇ ಜನಪರ ಚಳವಳಿಗಳಿರಲಿ ಅದರಲ್ಲಿ ನಾವು ಭಾಗವಹಿಸುತ್ತಿವೆ, ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತ್ನಾಡಿರುವುದನ್ನು ಖಂಡಿಸಿ ನಡೆಯುವ ಪ್ರತಿಭಟನೆಗೆ ಜನವರಿ 6 ರಂದು ನಾವೆಲ್ಲ ಬಂದು ನಿಮ್ಮ ಜೊತೆಗಿರುತ್ತೇವೆ ಎಂದು ಹೇಳಿದರು.
     ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಸಂವಿಧಾನದ ಅಡಿಯಲ್ಲಿ ಚುನಾವಣೆಯಲ್ಲಿ ಗೆದ್ದು ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಅದೇ ಸಂವಿಧಾನ ಬರೆದಂತಹ ಡಾ: ಬಿ,ಆರ್, ಅಂಬೇಡ್ಕರ್ ಅವರಿಗೆ ತಮಾಷೆಯಾಗಿ ಅವಮಾನ ಮಾಡಿದ್ದು,ನಾವು ಎಲ್ಲಿಯವರೆಗೆ ಸುಮ್ಮನಿರುತ್ತೇವೆ ಎಂದು ನೋಡುತ್ತಿದ್ದಾರೆ, ಅದು ಪಾರ್ಲಿಮೆಂಟ್ ನಲ್ಲಿ ಬಹಿರಂಗವಾಗಿ ಈ ರೀತಿ ಹೇಳುತ್ತಿದ್ದಾರೆ ಅಂದ್ರೆ ಮುಂದೆ ನಮ್ಮ ಪರಿಸ್ಥಿತಿ ಏನಿರಬಹುದು ಎಂದು ಇದೆ ಒಂದು ಉದಾಹರಣೆ, ತಾವೆಲ್ಲ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದೀರಿ ಸಂವಿಧಾನ ಅಷ್ಟೇ ಅಲ್ಲ, ನಮ್ಮ ಎಲ್ಲಾ ಧರ್ಮಗಳು, ಸಮಾಜಗಳಲ್ಲಿ ತುಳಿತಕ್ಕೊಳಗಾದ ಜನರ ಬಗ್ಗೆ ನಡೆಸುವ ಹೋರಾಟಕ್ಕೆ ನಿಮ್ಮ ಜೊತೆಗೆ ನಾನಿದ್ದೇನೆ, ಈ ಹೋರಾಟಕ್ಕೆ ನಮ್ಮ 31 ವಾರ್ಡ್ ಗಳಲ್ಲೂ ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ,ಹೋರಾಟಕ್ಕೆ ನನ್ನ ಕಡೆಯಿಂದ ಸಂಪೂರ್ಣ ಸಹಕಾರ ಇರುತ್ತದೆ ಎಂದು ಘೋಷಿಸಿದರು.
      ಸಭೆಯಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ, ರಾಮಣ್ಣ ಚೌಡಕಿ, ಚನ್ನಬಸಪ್ಪ, ಪರಶುರಾಮ್ ಕೆರೆಹಳ್ಳಿ, ಗವಿಸಿದ್ದಪ್ಪ ಬೆಲ್ಲದ್, ಸಿದ್ದರಾಮ್ ಹೊಸಮನಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೊಲಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ,ಪಾತ್ರೋಟಿ, ಕೆ,ಬಿ,ಗೋನಾಳ, ಟಿ,ರತ್ನಾಕರ್, ನಿಂಗಪ್ಪ ಜಿ,ಎಸ್,ಬೆಣಕಲ್ಲ. ಸಾವಿತ್ರಿ ಮುಜಂದಾರ್, ಹೊಸಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮೊಹಮ್ಮದ್ ಅಜೀಮ್, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ ಮಠ,ಶರಣಪ್ಪ ಓಜನಹಳ್ಳಿ, ಬಾಷು ಸಾಬ್ ಖತೀಬ್,ಮಾನವಿ ಪಾಷಾ, ಶಿವಪ್ಪ ಹಡಪದ್,ಮುದುಕಪ್ಪ ಹೊಸಮನಿ, ಸೈಯ್ಯದ್ ಹಯಾತ್ ಪೀರ್ ಹುಸೇನಿ (ಶೇರು), ಯಲ್ಲಪ್ಪ ಬಳಗಾನೂರ ಮುಂತಾದವರು ಭಾಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!