ಅಮಿತ್ ಶಾರಿಗೆ ಗೃಹ ಸಚಿವ ಸ್ಥಾನದಿಂದ ವಜಾ ಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

0

Get real time updates directly on you device, subscribe now.

 

ಕೊಪ್ಪಳ : ಡಾ : ಬಿ, ಆರ್,ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಪುಟದಿಂದ ವಜಾ ಗೊಳಿಸಲು ಒತ್ತಾಯಿಸಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಾಷ್ಟ್ರಪತಿ ಅವರಿಗೆ ಜಿಲ್ಲಾಧಿಕಾರಗಳ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ವಿಠ್ಠಲ್ ಚೌಗಲ್ ಅವರ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಂತರ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಬಸವೇಶ್ವರ ವೃತ್ತಕ್ಕೆ ತೆರಳಿ ಕೋರೆಗಾವ್ ವಿಜಯೋತ್ಸವದ ಘೋಷಣೆ ಕೂಗಿದರು.
ಮನವಿಯಲ್ಲಿ  ,ಡಾ: ಬಿ.ಆರ್.ಅಂಬೇಡ್ಕರ್ ಹೆಸರನ್ನು ಪದೇ ಪದೇ ಹೇಳುವುದೊಂದು ವ್ಯಸನ ಎಂದು ಸಂಸತ್ತಿನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದನ್ನು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಖಂಡಿಸಿದರು

ಅಮಿತ್ ಶಾ ಅಂಬೇಡ್ಕರರನ್ನು ಅವಹೇಳನ ಮಾಡಿದ್ದರ ಹಿಂದೆ ಇರುವುದು, ಮಾನವತೆ ಪ್ರಜಾತಂತ್ರ ನ್ಯಾಯದ ಕುರಿತು ಅವರ ಅಸಹನೆ. ಈ ಅಸಹನೆಯನ್ನು ವ್ಯಕ್ತಪಡಿಸಿದ ಅಮಿತ್ ಶಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಇದುವರೆಗೆ ಅಂತಹ ಕ್ರಮ ಆಗಿಲ್ಲ.ಈ ಹಿನ್ನೆಲೆಯಲ್ಲಿ ನಮ್ಮ ಸಂಘಟನೆಗಳು ಗೃಹ ಸಚಿವ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಪ್ರಧಾನಿ ನರೇಂದ್ರ ಮೋದಿ ವಜಾ ಮಾಡಬೇಕೆಂದು ಒತ್ತಾಯಿಸುತ್ತದೆ,ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿರುವ ಗೋಲ್ವಾಲ್ಕರ್ ಅವರ ಲೇಖನವನ್ನು ಆರೆಸ್ಸೆಸ್ ಮುಖಪತ್ರಿಕೆ ‘ಆರ್ಗನೈಸ‌ರ್’ನಿಂದ ಹಿಂಪಡೆದಿದ್ದೇವೆಂದು ಆರೆಸ್ಸೆಸ್ ಘೋಷಿಸಬೇಕು. ಇಲ್ಲವಾದರೆ, ಬಿಜೆಪಿಯು ಆರೆಸ್ಸಸ್ಸನ್ನು ಧಿಕ್ಕರಿಸಿ ಹೇಳಿಕೆ ನೀಡಬೇಕು.ಅಮಿತ್ ಶಾರನ್ನು ಸಂಪುಟದಿಂದ ವಜಾ ಗೊಳಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.
ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು,ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಕರಿಯಪ್ಪ ಗುಡಿಮನಿ, ಮಲ್ಲಿಕಾರ್ಜುನ್ ಹಲಗೇರಿ ಮುಂತಾದವರು ಮಾತನಾಡಿದರು.
ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಎಮ್,ಹೊಸಮನಿ ಮನವಿ ಓದಿ ಅರ್ಪಿಸಿದರು,
ಪ್ರತಿಭಟನಾ ಮೆರವಣಿಗೆಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘದ ಹುಲುಗಪ್ಪ ಎಮ್, ಹ್ಯಾಟಿ, ಕೆ,ವಿ,ಎಸ್ ರಾಜ್ಯ ಉಪಾಧ್ಯಕ್ಷ ಕೆ,ದುರ್ಗೇಶ್, ಯಮುನಾ ಚಳ್ಳೂರು, ಯಮನೂರು ಇಳಿಗನೂರು, ಕೌಸರ್ ಕೋಲ್ಕಾರ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಮಂಜುನಾಥ ಮಳ್ಳನವರ, ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ ಶಿವಕುಮಾರ್ ಡಿ, ನಡುವಿನಮನಿ, ಸುಭಾಷ್ ಎಮ್,ಹಕ್ಕಾಪುರ ಹನಕುಂಟಿ, ಸಂತೋಷ್ ಆರ್, ಕಳಸಣ್ಣವರ,ವೆಂಕಟೇಶ ಎಲ್, ಮಳ್ಳನವರ,ಯಮನೂರಪ್ಪ ಬಡ ಹಳ್ಳಿ,ಯಮನೂರಪ್ಪ ದೇವರಮನಿ,ಪ್ರವೀಣ್ ಎಚ್, ನಡುವಿನ ಮನಿ, ಬಸವರಾಜ್ ಬಿಕನಹಳ್ಳಿ, ಗುಡದಪ್ಪ ಎನ್, ಭಂಗಿ, ಕಾರ್ಮಿಕ ಸಂಘಟನೆ ಮುಖಂಡ ಬಸವರಾಜ್ ಪೂಜಾರ್ ನರೇಗಲ್, ಆಟೋ ಸಂಘಟನೆಯ ನಾಯಕ ಮಖಬೂಲ್ ರಾಯಚೂರು,
ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಬಂದೆ ನವಾಝ ಮನಿಯಾರ್, ಟಿಯುಸಿಐ ರಾಜ್ಯ ಕಾರ್ಯದರ್ಶಿ ಕೆ,ಬಿ,ಗೋನಾಳ, ಸಂಜಿವಪ್ಪ ಬಿ,ಹೊಸಳ್ಳಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ,ಪಾತ್ರೋಟಿ, ಜಿಲ್ಲಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ, ತಾಲೂಕಾ ಅಧ್ಯಕ್ಷ ನೂರ ಸಾಬ್ ಹೊಸಮನಿ,ಕವಲೂರು ಗ್ರಾಮ ಘಟಕದ ಅಧ್ಯಕ್ಷ ಪಾನಿಶಾ ಮಕಾಂದಾರ್, ಶಮಶುದ್ದೀನ್ ಮಕಾಂದಾರ್, ಹನುಮಂತ ಹನುಮಸಾಗರ,ಮಹೆಬೂಬ್ ಅಲಿ,ಹುಸೇನ್ ಬಾಷಾ ತಹಶೀಲ್ದಾರ್,ರಾಜಪ್ಪ ಚೌಹಾಣ್, ಜಾಫರ್ ಕುರಿ,ಯೋಗೇಶ್ ಬಿಕನಹಳ್ಳಿ, ವೀರೇಶ್ ಲಕಮಾಪುರ್, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ ಮಠ, ಗಾಳೆಪ್ಪ ಮುಂಗೊಲಿ, ಗಾಳೆಪ್ಪ ಬಿಕನಹಳ್ಳಿ, ನಜೀರ್ ಅಹ್ಮದ್ ಅಧೂನಿ, ಶೋಭಾ ಯಮನೂರಪ್ಪ, ಸಜ್ಜಾದ ಸಾಬ್ ಕವಲೂರ ಪಲ್ಟನ್, ಮಲ್ಲಿಕಾರ್ಜುನ್ ಪೂಜಾರ್ ಮುಂತಾದವರು ಭಾಗವಹಿಸಿದ್ದರು,

Get real time updates directly on you device, subscribe now.

Leave A Reply

Your email address will not be published.

error: Content is protected !!