ಜನವರಿ 3 & 4 ರಂದು ಜಿಲ್ಲೆಯಲ್ಲಿ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಪ್ರಕ್ರಿಯೆ

0

Get real time updates directly on you device, subscribe now.

  2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆ, ವಸತಿ ನಿಲಯಕ್ಕೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಂಬಂದ ಜನವರಿ 3 ಮತ್ತು 4 ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

 ಕ್ರೀಡಾಶಾಲೆ, ವಸತಿ ನಿಲಯಕ್ಕೆ ಆಯ್ಕೆ ಪ್ರಕ್ರಿಯೆಯು 4ನೇ, 7ನೇ ಮತ್ತು 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ, ಬಾಲಕಿಯರಿಗೆ ಮಾತ್ರವಾಗಿದ್ದು, ಆಸಕ್ತಿ ಇರುವ ಕ್ರೀಡಾಪಟುಗಳು, ಪಾಲಕರು, ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
*ವಿಶೇಷ ಅರ್ಹತೆಗಳು:* ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಸ್ತುತ (4ನೇ ತರಗತಿಯವರಿಗೆ) 11 ವರ್ಷದ ಒಳಗಿನವರಿಗೆ ಕನಿಷ್ಟ 140 ಸೆ.ಮೀ ಎತ್ತರವಿರುವ ಬಾಲಕರು ಹಾಗೂ 140 ಸೆ.ಮೀ ಎತ್ತರವಿರುವ ಬಾಲಕಿಯರು. ವಾಲಿಬಾಲ್ ವಿಭಾಗಕ್ಕೆ 11 ವರ್ಷದ ಒಳಗಿನ ವರಿಗೆ (4ನೇ ತರಗತಿಯವರಿಗೆ) ಕನಿಷ್ಟ 145 ಸೆ.ಮೀ ಎತ್ತರವಿರುವ ಬಾಲಕರು ಹಾಗೂ 145 ಸೆ.ಮೀ ಎತ್ತರವಿರುವ ಬಾಲಕಿಯರು. ಅಥ್ಲೆಟಿಕ್ಸ್ ವಿಭಾಗದಲ್ಲಿ (ಪ್ರಸುತ್ತ 7ನೇ ತರಗತಿಯವರಿಗೆ) ಕನಿಷ್ಟ 165 ಸೆ.ಮೀ ಎತ್ತರವಿರುವ ಬಾಲಕರು ಹಾಗೂ 160 ಸೆ.ಮೀ ಎತ್ತರವಿರುವ ಬಾಲಕಿಯರು. ವಾಲಿಬಾಲ್ ವಿಭಾಗಕ್ಕೆ 14 ವರ್ಷದ ಒಳಗಿನ ವರಿಗೆ (7ನೇ ತರಗತಿಯವರಿಗೆ) 172 ಸೆ.ಮೀ ಎತ್ತರದ ಬಾಲಕರು ಹಾಗೂ 163 ಸೆ.ಮೀ ಎತ್ತರದ ಬಾಲಕಿಯರು.
ಬಾಸ್ಕೆಟ್ ಬಾಲ್ ವಿಭಾಗದಲ್ಲಿ ಕನಿಷ್ಟ 172 ಸೆ.ಮೀ ಎತ್ತರವಿರುವ ಬಾಲಕರು ಹಾಗೂ 162 ಸೆ.ಮೀ ಎತ್ತರವಿರುವ ಬಾಲಕಿಯರು ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ (ಪ್ರಸುತ್ತ 10ನೇ ತರಗತಿಯವರಿಗೆ) ಕನಿಷ್ಟ 170 ಸೆ.ಮೀ ಎತ್ತರವಿರುವ ಬಾಲಕರು ಹಾಗೂ 165 ಸೆ.ಮೀ ಎತ್ತರವಿರುವ ಬಾಲಕಿಯರು. ವಾಲಿಬಾಲ್ ವಿಭಾಗಕ್ಕೆ 17 ವರ್ಷದ ಒಳಗಿನ ವರಿಗೆ (10ನೇ ತರಗತಿಯವರಿಗೆ) 184 ಸೆ.ಮೀ ಎತ್ತರದ ಬಾಲಕರು ಹಾಗೂ 165 ಸೆ.ಮೀ ಎತ್ತರದ ಬಾಲಕಿಯರು. ಬಾಸ್ಕೆಟ್ ಬಾಲ್ ವಿಭಾಗದಲ್ಲಿ ಕನಿಷ್ಟ 184 ಸೆ.ಮೀ ಎತ್ತರವಿರುವ ಬಾಲಕರು ಹಾಗೂ 167 ಸೆ.ಮೀ ಎತ್ತರವಿರುವ ಬಾಲಕಿಯರು ಭಾಗವಹಿಸಬಹುದು.
ಆಯ್ಕೆ ಪ್ರಕ್ರಿಯೆ ಹೊರತುಪಡಿಸಿ ಇನ್ನುಳಿದ ಕ್ರೀಡೆಗಳಿಗೆ ಕನಿಷ್ಟ 165 ಸೆ.ಮೀ ಕಡ್ಡಾಯವಾಗಿರುತ್ತದೆ. ಆಯ್ಕೆ ಪ್ರಕ್ರಿಯೆ ನಡೆಯುವ ದಿನಾಂಕಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ 10.30 ಗಂಟೆಗೆ ಮೇಲೆ ತಿಳಿಸಿದ ಮೈದಾನಗಳಲ್ಲಿ ಹಾಜರಿರಬೇಕು. ಒಂದು ಕೇಂದ್ರದಲ್ಲಿ ಭಾಗವಹಿಸಲು ಅನಾನುಕೂಲವಾದಲ್ಲಿ ಬೇರೆ ಕೇಂದ್ರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರಸ್ತುತ ಸಾಲಿನಲ್ಲಿ 4, 7 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ ಧೃಡೀಕೃತ ಶಾಲಾ ಧೃಡೀಕರಣ ಪತ್ರ ಕಡ್ಡಾಯವಾಗಿರುತ್ತದೆ ಅಥವಾ ಜನನ ಪ್ರಮಾಣ ಪತ್ರವನ್ನು ತರಬೇಕು.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಖೋಖೋ ತರಬೇತುದಾರರಾದ ಎ.ಎನ್ ಯತಿರಾಜು ಮೊ.ಸಂ: 9448633146 ಮತ್ತು ರೋಹಿಣಿ ಪರ್ವತೀಕರ ಮೊ.ಸಂ: 8217324522, ವಾಲಿಬಾಲ್ ತರಬೇತಿದಾರ ಕಮಲ್ ಸಿಂಗ್ ಬಿಸ್ಟ್ ಮೊ.ಸಂ: 6360146300, ವಾಲಿಬಾಲ್ ತರಬೇತುದಾರ ಸುರೇಶ ಮೊ.ಸಂ: 9901527333, ವಾಲಿಬಾಲ್ ತರಬೇತುದಾರರಾದ ದೀಪಾ, ಅಥ್ಲೆಟಿಕ್ಸ್ ತರಬೇತಿದಾರ ವಿಶ್ವನಾಥ, ಕೊಪ್ಪಳದ ಸಣ್ಣ ವಾಲಿಬಾಲ್ ತರಬೇತಿ ಕೇಂದ್ರದ ಮೊ.ಸಂ: 8088143003, ಇವರಿಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!