ವಿಜಯಕುಮಾರ ಕೆಂಚಪ್ಪಗೆ ಡಾಕ್ಟರೇಟ್ ಪದವಿ
ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ವಿಜಯಕುಮಾರ ಕೆಂಚಪ್ಪ ತೋಟದ ಇವರಿಗೆ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದಿಂದ ಪಿಎಚ್.ಡಿ ಪದವಿ ದೊರೆತಿದೆ. ಮೂಲತಃ ಕೊಪ್ಪಳ ತಾಲೂಕಿನ ತಾಳಕನಕಾಪುರ ಗ್ರಾಮದವರಾದ ಇವರು ಪ್ರಾಧ್ಯಾಪಕರಾದ ಡಾ. ಅಬ್ದುಲ್ ಗಫಾರ್ ಖಾನ್ ಇವರ ಮಾರ್ಗದರ್ಶನದಲ್ಲಿ “ಪ್ರಿಸ್ಕ್ರಿಪ್ಷನ್ ಅಬೌಟ್ ಫ್ಯಾಮಿಲಿ ಲೈಫ್ ಎಜುಕೇಷನ್ ಫಾರ್ ಚಿಲ್ಡ್ರನ್: ಎ ಸೋಶಿಯಾಲಾಜಿಕಲ್ ಸ್ಟಡಿ” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದರು.ಈ ಕುರಿತು ವಿಶ್ವವಿದ್ಯಾಲಯವು ದಿನಾಂಕ 11-12-2024 ರಂದು ಅಧಿಸೂಚನೆ ಹೊರಡಿಸಿದೆ.