ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಮನೆಗಳನ್ನು ಪೂರ್ಣಗೊಳಿಸಿಕೊಳ್ಳಿ

0

Get real time updates directly on you device, subscribe now.

ಕೊಪ್ಪಳ: 
  ಡಾ ಬಿ.ಆರ್.ಅಂಬೇಡ್ಕರ್ ನಗರ ವಸತಿ, ವಾಜಪೇಯಿ ನಗರ ವಸತಿ ಯೋಜನೆಯ, ಪಿಎಂಎವೈ(ಯು) ನಗರ ವಸತಿ ಯೋಜನೆಯ ಹಾಗೂ ದೇವರಾಜ ಅರಸ ನಗರ ವಸತಿ ಯೋಜನೆಯಡಿಯ ಆಯ್ಕೆಯಾದ ಕೊಪ್ಪಳ ನಗರದ ಫಲಾನುಭವಿಗಳು ಮನೆಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಸನ್ 2015-16 ರಿಂದ 2021-22ನೇ ಸಾಲಿನಲ್ಲಿ ಡಾ ಬಿ.ಆರ್.ಅಂಬೇಡ್ಕರ್ ನಗರ ವಸತಿ, ವಾಜಪೇಯಿ ನಗರ ವಸತಿ ಯೋಜನೆಯ, ಪಿಎಂಎವೈ(ಯು) ನಗರ ವಸತಿ ಯೋಜನೆಯ ಹಾಗೂ ದೇವರಾಜ ಅರಸ ನಗರ ವಸತಿ ಯೋಜನೆಯಡಿಯ ಆಯ್ಕೆಯಾದ ಫಲಾನುಭವಿಗಳಿಗೆ ಈಗಾಗಲೇ ಹಲವು ಬಾರಿ ನೋಟಿಸ್ ಜಾರಿಮಾಡಲಾಗಿದೆ ಮತ್ತು ಫಲಾನುಭವಿಗಳಿಗೆ ಮೌಖಿವಾಗಿಯು ತಿಳಿಸಲಾಗಿದ್ದರು ಸಹ ಮನೆ ನಿರ್ಮಾಣ ಮಾಡಿಕೊಂಡಿರುವುದಿಲ್ಲ. ಆದಕಾರಣ ಈ ಫಲಾನುಭವಿಗಳು ವಿವಿಧ ಹಂತದಲ್ಲಿರುವ ಮನೆಗಳನ್ನು ತುರ್ತಾಗಿ ಪೂರ್ಣಗೊಳಿಸಿ ಕೊಪ್ಪಳ ನಗರಸಭೆ ಆಶ್ರಯ ಶಾಖೆಯ ಗಮನಕ್ಕೆ ತರಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಸಹಾಯಧನ ಬಿಡುಗಡೆಯಾಗುವುದಿಲ್ಲ. ಇದಕ್ಕೆ ಕೊಪ್ಪಳ ನಗರಸಭೆಯ ಹೊಣೆಯಾಗಿರುವುದಿಲ್ಲ ಮತ್ತು ರದ್ದು ಮಾಡಲು ಸರ್ಕಾರಕ್ಕೆ ನಿಯಮನುಸಾರ ಶಿಫಾರಸ್ಸು ಮಾಡಲಾಗುವುದು ಎಂದು ಕೊಪ್ಪಳ ನಗರಸಭೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!