ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ಅರಸನಕೇರಿ  ನೇಮಿಸಲು  ಒತ್ತಾಯ

Get real time updates directly on you device, subscribe now.

 

ಕೊಪ್ಪಳ : ತಾಲೂಕಿನ ವಣಬಳ್ಳಾರಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡ ಹಾಗೂ ತಾ.ಪಂ ಮಾಜಿ ಸದಸ್ಯ ಹನುಮಂತಪ್ಪ ಅರಸನಕೇರಿರನ್ನು ರಾಜ್ಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಅವರ ಬೆಂಬಲಿಗರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇರಕಲ್ಲಗಡ ಜಿ.ಪಂ ಮಾಜಿ ಸದಸ್ಯ ರಾಮಣ್ಣ ಚೌಡ್ಕಿ, ಹನುಮಂತಪ್ಪ ಅರಸನಕೇರಿ ಅವರು ಸತತ 20 ವರ್ಷಗಳ ಕಾಲ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಬಹುಮುಖವಾಗಿ ಜನರ ಸೇವೆ ಮತ್ತು ಪಕ್ಷ ನಿಷ್ಠೆಯನ್ನು ಮಾಡುತ್ತಾ ಬಂದಿದ್ದಾರೆ.  ಬಡವರ, ಜನಸಾಮಾನ್ಯರಿಗೆ ನೀಡಿದ ಸಹಾಯ ಎಂದು ಮರೆಯಲಾಗದು. ಅವರ ನಿಸ್ವಾರ್ಥ ಸೇವೆಯನ್ನು ಜನ ಇಂದಿಗೂ ಮರೆಯುವುದಿಲ್ಲ. ಕೇವಲ ಒಂದೇ ಸಮುದಾಯದ ಜನರಿಗೆ ಬೇಕಾದವರಲ್ಲ, ಅನೇಕ ಸಮುದಾಯಗಳ ಯುವ ನಾಯಕನಾಗಿ ಹೊರ ಹೊಮ್ಮಿದ್ದಾನೆ. ಹೀಗಾಗಿ ಹನುಮಂತಪ್ಪ ಅರಸನಕೇರಿಯವರ ಸೇವೆ ಅನನ್ಯವಾದದ್ದು. ಅವರ ಸೇವೆಯನ್ನು ಜನತೆ ಇಂದಿಗೂ ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಇಂತಹ ಯುವ ನಾಯಕನಿಗೆ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ಮಾಜಿ ಕೊಪ್ಪಳ ತಾ.ಪಂ ಮಾಜಿ ಅಧ್ಯಕ್ಷ ಅಮರೇಶ ಉಪಲಾಪುರ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆಗೊಳಿಸುವಲ್ಲಿ ಇವರ ಪಾತ್ರ ಅತ್ಯಮೂಲ್ಯವಾಗಿದೆ. ಗಂಗಾವತಿ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಹಗಲಿರುಳು ಪಕ್ಷ ಸಂಘಟಿಸುವಲ್ಲಿ ಹನುಮಂತಪ್ಪ ಅರಸನಕೇರಿ ಮುಂಚೂಣಿಯಲ್ಲಿದ್ದು ಕೆಲಸವನ್ನು ಮಾಡಿದ್ದಾರೆ. ಜನ ಸೇವಾ ಕಾಯಕಗಳನ್ನು ಮಾಡಿದ್ದು ಇಂದಿಗೂ ಜನರು ಸ್ಮರಿಸುತ್ತಿದ್ದಾರೆ. ಇನ್ನು ಹೆಚ್ಚಿನ ಅಭಿವೃದ್ಧಿ ಪಡಿಸುವ ಚಿಂತನೆಗಳು ಅವರಲ್ಲಿ ಇವೆ. ಆದರೆ ರಾಜ್ಯ ಸರ್ಕಾರ ಇವರಿಗೆ ಅವಕಾಶ ನೀಡಬೇಕು ಎಂದರು. ಮುಂಬರುವ ತಾ.ಪಂ, ಜಿ.ಪಂ, ಮತ್ತು ಲೋಕಸಭಾ ಚುನಾವಣೆಗೆ ಸಂಘಟಿಸುವ ಹಿನ್ನಲೆಯಲ್ಲಿ ಹನುಮಂತಪ್ಪ ಅರಸನಕೇರಿ ಅವರನ್ನು ರಾಜ್ಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷ ಹೆಚ್ಚಿನ ರೀತಿಯಲ್ಲಿ ಸಂಘಟಿತವಾಗಲು ಅನುಕೂಲವಾಗುತ್ತದೆ. ಹೀಗಾಗಿ ಇವರನ್ನು ಈ ಕೂಡಲೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಮಾರುತಿ ಚಾಮಲಾಪುರ್, ಮಲ್ಲಪ್ಪ ತುಬಾಕಿ, ಶಿವಣ್ಣ ಚರಾರಿ, ಗಾಳೆಪ್ಪ ಹಿಟ್ನಾಳ, ನರಸಪ್ಪ ಹಾಸಗಲ್, ದ್ಯಾಮಣ್ಣ ಲೇಬಗೇರಿ, ಬಸಣ್ಣ ವೆಂಕಟಾಪುರ, ಸೋಮಣ್ಣ ಮೇಟಿ, ನಿಂಗಪ್ಪ ಹೊಸೂರು, ಮಂಜುನಾಥ ಮ್ಯಾಗಳಮನಿ, ರಮೇಶ ಅರಸನಕೇರಿ, ಶ್ರೀಕಾಂತ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: