ಸಮಾಜ ವಿಜ್ಞಾನ ವಸ್ತು ಪ್ರದರ್ಶನ
ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆಯ 2024-25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಸಮಾಜ ವಿಜ್ಞಾನ ವಿಷಯದ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ನಗರದ ಖ್ಯಾತ ಉದ್ಯಮಿ ಶ್ರೀನಿವಾಸ ಗುಪ್ತಾ ಹಾಗೂ ಶಾಲೆಯ ಆಡಳಿತಾಧಿಕಾರಿ ಗವಿಸಿದ್ದಪ್ಪ ಎ. ಕೊಪ್ಪಳ ಇವರುಗಳಿಂದ ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ವಸ್ತು ಪ್ರದರ್ಶನದಲ್ಲಿ ವಿಧ್ಯಾರ್ಥಿಗಳು ತಯಾರಿಸಿದ ಮಾದರಿಗಳು ಪ್ರಶಂಸನೀಯವಾಗಿದ್ದವು. ಅಯೋಧ್ಯೆಯ ರಾಮ ಮೂರ್ತಿ ನಿರ್ಮಾಣನ್ನು ಮಾಡಿದವರು ಆರುಣ ಯೋಗಿಯವರಾದರೆ, ನಮ್ಮ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾದ ಸುನೀಲಕುಮಾರ ಥರ್ಮಕೂಲ್‌ನಲ್ಲಿ ಅಯೋಧ್ಯಯ ರಾಮ ಮಂದಿರ ಮಾದರಿಯು ಎಲ್ಲರ ಕಣ್ಮನ ಸೆಳೆಯುವಂತಿತ್ತು ಹಾಗೂ ಇತಿಹಾಸದ ಘಟನೆಗಳನ್ನು ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿಗಳೊಂದಿಗೆ ವಿವರಣೆಗಳನ್ನು ಸವಿಸ್ತಾರವಾಗಿ ನೀಡಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಅಮರೇಶ ಎ.ಕರಡಿಯವರು ವಹಿಸಿದ್ದರು.
ಚನ್ನಬಸಪ್ಪ ಹೊಳೆಯಪ್ಪನವರ ಹಾಗೂ ಲಲಿತ್ ಜೈನ್ ಅತಿಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೇವಪ್ಪ ಜಿ ಇವರು ಸ್ವಾಗತಿಸಿದರೆ, ಹೆಚ್.ಎಂ.ವಂದಾಲಿ ಶಿಕ್ಷಕರು ಅತಿಥಿಗಳ ಪರಿಚಯ ನೀಡಿದರು. ರವಿ ಎನ್.ರಂಜಣಗಿ ಶಿಕ್ಷಕರು ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಹೆಚ್.ಎಂ.ಗಾಳಿ ಯವರು ವಂದಿಸಿದರು ಹಾಗೂ ಗವಿಸಿದ್ದಪ್ಪ ಹತ್ತಿ ಶಿಕ್ಷಕರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.