ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸಂಜೀವಿನಿ ಮಾಸಿಕ ಸಂತೆ: ಶಿವರಾಜ್ ಎಸ್ ತಂಗಡಗಿ
ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ
ಕನಕಗಿರಿ: ಸಂಜೀವಿನಿ ಮಾಸಿಕ ಸಂತೆಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಲಾಭದಾಯಕ ಆದಾಯವಾಗಿದ್ದು, ಗ್ರಾಮೀಣ ಸ್ವ ಸಹಾಯ ಗುಂಪುಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
ಅವರು, ಪಟ್ಟಣದ ವಾರದ ಸಂತೆಯ ಮೈದಾನದಲ್ಲಿ ತಾ.ಪಂ ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಮಾಸಿಕ ಸಂತೆ ಆಯೋಜನೆಯಿಂದ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ವೇದಿಕೆ ಕಲ್ಪಿಸುವ ಜೊತೆಗೆ ಆದಾಯವನ್ನು ಹೆಚ್ಚಿಸಿದಂತಾಗಿದೆ ಎಂದರು.
ಸದರಿ ಮಾಸಿಕ ಸಂತೆಯಲ್ಲಿ ಮಹಿಳೆಯರೇ ತಯಾರಿಸಿದ ವಿವಿಧ ಉತ್ಪನ್ನಗಳಾದ ಸಿಹಿ ತಿನಿಸುಗಳು, ಬಟ್ಟೆ ವ್ಯಾಪಾರ, ಬಳೆ ವ್ಯಾಪಾರ, ಶೇಂಗಾ ಚಕ್ಕಿ ವ್ಯಾಪಾರ, ಖಾರದ ಪುಡಿ ವ್ಯಾಪಾರ, ಕಸೂತಿ ಸೇರಿದಂತೆ ಕರಕುಶಲ ವಸ್ತುಗಳು ಲಭ್ಯವಿದ್ದವು.
ಈ ಸಂದರ್ಭದಲ್ಲಿ, ರಾಜಶೇಖರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ.ಕನಕಗಿರಿ, ವಿಶ್ವನಾಥ ಮುರಡಿ ತಹಶೀಲ್ದಾರರು ಕನಕಗಿರಿ, ಕೆ,ಗಂಗಾಧರ್ ಸ್ವಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರಮೇಶ್ ನಾಯಕ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಎನ್.ಆರ್.ಎಲ್.ಎಂ ಸಂಯೋಜಕಿ ರೇಣುಕಾ, ತಾ.ಪಂ ವಿಷಯ ನಿರ್ವಾಹಕ ಕೊಟ್ರಯ್ಯ ಯಂಕೋಬ, ಕೆ.ಪವನ್ ಕುಮಾರ ರಾಕೇಶ್ KILP ಸಂಯೋಜಕರು, ಕಂಪ್ಯೂಟರ್ ಆಪರೇಟರ್ ಹುಲಿಗೇಶ್ ಸಂಜೀವಿನಿ ತಾಲೂಕು ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿಶಾಲಾಕ್ಷಿ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು, ಎಂಬಿಕೆ, ಎಲ್.ಸಿ.ಆರ್.ಪಿ, ಕೃಷಿ-ಪಶು ಸಖಿಯರು ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.