ಭಾಗ್ಯನಗದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

0

Get real time updates directly on you device, subscribe now.

ಕೊಪ್ಪಳ  : ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಭಾರತೀಯ ವಿಜ್ಞಾನ ಸಂಸ್ಥೆ ಆವರಣ, ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತಿ, ಕೊಪ್ಪಳ ರವರ ಸಹಯೋಗದೊಂದಿಗೆ ಸೋಮವಾರ ಭಾಗ್ಯನಗರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ ಪ್ರಯುಕ್ತ ಗಣಿತ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಂಜುನಾಥ ಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಗಣಿತ ಕಲಿಕೆಯಿಂದ ಮಕ್ಕಳು ವೈಜ್ಞಾನಿಕವಾಗಿ ಬೆಳೆಯಲು ಪ್ರಮುಖ ಪತ್ರವಹಿಸುತ್ತದೆ. ಎಂದು ತಿಳಿಸಿದರು.
ಕಾರ್ಯಕ್ರಮದ ನಿಮಿತ್ತ ಸಂಪನ್ಮೂಲ ವ್ಯಕ್ತಿಗಳಾಗಿ ಗಿಣಿಗೇರದ ಮುಖ್ಯ ಶಿಕ್ಷಕರು ಸದಾನಂದ ಕುಮಾರ ಮತ್ತು ಭಾನಾಪುರ್ ಗಣಿತ ಶಿಕ್ಷಕ ಕಾಶಿ ವಿಶ್ವನಾಥ್ ಅವರು ಶಾಲಾ ಮಕ್ಕಳಿಗೆ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಅತ್ಯಂತ ಸುಲಭ ಹಾಗೂ ಸರಳ ವಿಧಾನದಲ್ಲಿ ಭೋದನೆ ಮಾಡಿದರು.
ಈ ಸಂದರ್ಭದಲ್ಲಿ ಡಯಟ್‌ನ ಉಪನ್ಯಾಸಕರು ಹಾಗೂ ಶಾಲಾ ಉಪ ಪ್ರಾಂಶುಪಾಲರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಜಿಲ್ಲಾ ಎನ್.ಆರ್.ಡಿ.ಎಮ್.ಎಸ್. ಕೇಂದ್ರದ ಗುರುಸ್ವಾಮಿ ಪಿ ಸೇರಿದಂತೆ ಮತ್ತಿತರರಿದ್ದರು. ಶಿಕ್ಷಕ ಮಂಜುನಾಥ ತಿಮ್ಮಕ್ಕನವರ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!