`ಝೇಂಕಾರ’ ಬ್ರ್ಯಾಂಡ್ ಹೆಸರಿನಲ್ಲಿ ಜೇನುತುಪ್ಪ, ಉತ್ಪನ್ನಗಳ ಮಾರಾಟ: ಸದುಪಯೋಗಕ್ಕೆ ಮನವಿ
![](https://kannadanet.com/wp-content/uploads/2023/08/krishna_ukkund-300x194.jpg)
ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನು ತುಪ್ಪಕ್ಕೆ ಝೇಂಕಾರ ಎಂಬ ಬ್ರ್ಯಾಂಡ್ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೊಗಳು ಟ್ರೇಡ್ ಮರ್ಕ್ ರೆಜಿಸ್ಟರಿ (Trade Mark Registry) ಯಲ್ಲಿ ಕಾನೂನಾತ್ಮಕವಾಗಿ ನೋಂದಣಿಯಾಗಿದ್ದು, ತೋಟಗಾರಿಕೆ ಇಲಾಖಾ ವತಿಯಿಂದ ನೋಂದಣಿ ಪ್ರಮಾಣ ಪತ್ರ ಪಡೆಯಲಾಗಿರುತ್ತದೆ. ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ತೋಟಗಾರಿಕೆ ಇಲಾಖೆಯ ಮಾರ್ಗಸೂಚಿಯನ್ವಯ “ಝೇಂಕಾರ” ಬ್ರ್ಯಾಂಡ್ ಹೆಸರನ್ನು ಉಪಯೋಗಿಸಿಕೊಂಡು ಜೇನು ತುಪ್ಪ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದ್ದು, ಜೇನು ಕೃಷಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ www.horticulturedirkarnataka. gov.in ಜಾಲತಾಣದಲ್ಲಿ ವೀಕ್ಷಿಸಿ ಅಥವಾ ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿ.ಪಂ.) ಕೊಪ್ಪಳ ಹಾಗೂ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂರ್ಪಕಿಸುವಂತೆ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ www.horticulturedirkarnataka.