ವಿದ್ಯಾರ್ಥಿಗಳ ಬಸ್ ಸಮಸ್ಯೆಗಳಿಗೆ ಬೇಗನೆ ಪರಿಹಾರ ನೀಡಲು ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹ.

0

Get real time updates directly on you device, subscribe now.

ಮುನಿರಾಬಾದ್ ಗ್ರಾಮಕ್ಕೆ ಮತ್ತು ಹೊಸಪೇಟೆಗೆ ವಿದ್ಯಾಭ್ಯಾಸಕ್ಕೆ ಹೋಗುವ

ಹುಲಿಗಿ ಚರ್ಚ್ ಏರಿಯ ಮತ್ತು ಹೊಸ ಲಿಂಗಪುರ ಗ್ರಾಮಗಳಿಂದ ಮುನಿರಾಬಾದ್ ಮತ್ತು ಹೊಸಪೇಟೆಗೆ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಇರುವ ಬಸ್ ಗಳ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದರು ಎಐಡಿಎಸ್‌ಓ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಮಾತನಾಡಿ ಹುಲಿಗಿ ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೈ ಓವರ್ ನಿರ್ಮಾಣವಾಗುತ್ತಿದ್ದು ಈ ಕಾರಣದಿಂದಾಗಿ ಮುನಿರಾಬಾದ್ ಗ್ರಾಮದೊಳಗೆ ಯಾವುದೇ ಬಸ್ಸುಗಳು ಹೋಗದೆ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ
ನೇರವಾಗಿ ಚಲಿಸುತ್ತಿವೆ. ಹಾಗಾಗಿ ಮುನಿರಾಬಾದ್ ಗೆ ಹೋಗುವಂತ ವಿದ್ಯಾರ್ಥಿಗಳಿಗೆ ಸಾಕಷ್ಟು ಬಸ್ಸುಗಳು ಒಳಗೆ ಹೋಗದೆ ಇರುವುದರಿಂದ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ತರಗತಿಗಳನ್ನು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಕುರಿತು ಈಗಾಗಲೇ ಡಿಪೋ ಮುಖ್ಯಸ್ಥರಿಗೆ ವಿದ್ಯಾರ್ಥಿಗಳು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು ಸಹ ಸರಿಯಾದಂತಹ ಸ್ಪಂದನೆ ಬರುತ್ತಿಲ್ಲ. ಬಸ್ಸುಗಳನ್ನು ಕ್ರಾಸ್ ನಲ್ಲಿ ನಿಲ್ಲಿಸಲು ಮತ್ತು ಮುನಿರಾಬಾದ್ ಗ್ರಾಮದ ಒಳಗಡೆ ಹೋಗಲು ಕಟ್ಟುನಿಟ್ಟಿನ ಕ್ರಮವನ್ನು
ತೆಗೆದುಕೊಂಡಿಲ್ಲ. ಹಾಗೆಯೇ ಬೇರೆ ಜಿಲ್ಲೆಯ ವಿಭಾಗದ ಬಸ್ಸುಗಳು ಕೂಡ ನಮಗೆ ಆದೇಶ ಬಂದಿಲ್ಲ ಎನ್ನುವ ಕಾರಣದಿಂದಾಗಿ ಮುನಿರಾಬಾದ್ ಒಳಗಡೆ ಹೋಗುತ್ತಿಲ್ಲ. ಹಾಗೆಯೇ ಶಾಲಾ ಕಾಲೇಜುಗಳಿಗೆ ತೆರಳುವ ಸಮಯದಲ್ಲಿ ಹುಲಿಗಿ ಚರ್ಚ್ ಏರಿಯ ಮತ್ತು ಹೊಸಲಿಂಗಪುರ ಗ್ರಾಮದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ಸು ಕೂಡ ಅವಶ್ಯಕತೆ ಇದೆ.
ಹಾಗಾಗಿ ತಾವುಗಳು ವಿದ್ಯಾರ್ಥಿಗಳ ಈ ಸಮಸ್ಯೆಗಳನ್ನ ಮನಗೊಂಡು ದಯಮಾಡಿ ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ನೀಡಲು, ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಬೇಕೆಂದು ತಮ್ಮಲ್ಲಿ ವಿದ್ಯಾರ್ಥಿಗಳ ಪರವಾಗಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಅಗ್ರಹಿಸುತ್ತದೆ. ಈಗಾಗಲೇ ಬೇಸತ್ತಿರುವ ವಿದ್ಯಾರ್ಥಿಗಳು ಮುಂದೆ ಬೃಹತ್ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದರು. ನಂತರ ಮಾನ್ಯ ಅಪಾರ ಜಿಲ್ಲಾಧಿಕಾರಿಗಳಿಗೆ ಮತ್ತು ಡಿಪೋ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಐಡಿಎಸ್‌ಓ ಕಾರ್ಯಕರ್ತರಾದ ಸದಾಶಿವ,ಬಾನು,ಸಂಜನಾ, ರೇಣುಕಾ, ನಂದಿನಿ, ರುದ್ರೇಶ್, ಆಶ್ರದ್ ಅಲಿ, ಪ್ರವೀಣ್, ಸಾಹಿಲ್, ವಾಣಿಶ್ರೀ, ಅರ್ಚನಾ ಸೇರಿದಂತೆ ಮುಂತಾದವರು ಭಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!