ವಿಶ್ವಕರ್ಮ ಸಮಾಜದ ಮೌನೇಶ್ವರ ದೇವಸ್ಥನದಲ್ಲಿ ಪಲ್ಲಕ್ಕಿ ಸೇವೆ -ನೂತನ ಕಾರ್ಯಕಾರಿ ಮಂಡಳಿ ರಚನೆ

0

Get real time updates directly on you device, subscribe now.

ಗಂಗಾವತಿ: ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀಗುರು ಮೌನೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್-೯ ಸೋಮವಾರ ಸಂಜೆ ೭:೩೦ ಕ್ಕೆ ಪಲ್ಲಕ್ಕಿ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲ ರವರ ನೇತೃತ್ವದಲ್ಲಿ ಗಂಗಾವತಿ ತಾಲೂಕ ವಿಶ್ವಕರ್ಮ ಸಮಾಜದ ಕಾರ್ಯಕಾರಿ ಮಂಡಳಿ ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಕಾರ್ಯಕಾರಿ ಮಂಡಳಿ ರಚನೆ ಮಾಡಿ ಮಾತನಾಡಿದ ನಾಗೇಶಕುಮಾರ ಕಂಸಾಲರವರು ನಮ್ಮ ವಿಶ್ವಕರ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಸಮಾಜವನ್ನು ಬಲಪಡಿಸಿ ಶ್ರೇಯೋಭಿವೃದ್ದಿಗೊಳಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು, ಮುಖಂಡರು, ಕಾರ್ಯಕಾರಿ ಮಂಡಳಿಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಕಲಾವಿದರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜವನ್ನು ಒಗ್ಗೂಡಿಸಿ ಬಲಪಡಿಸಬೇಕೆಂದು ಕರೆಕೊಟ್ಟರು.

ನೂತನ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷರಾಗಿ ಜಿ. ಮಂಜುನಾಥ ಸರಾಫ್, ಅಧ್ಯಕ್ಷರಾಗಿ ಕಾಳೇಶ ಬಡಿಗೇರ, ಉಪಾಧ್ಯಕ್ಷರುಗಳಾಗಿ ಮನೋಹರ ವಿಶ್ವಕರ್ಮ ಮಲಕನಮರಡಿ, ಗುರುನಾಥ ಬಡಿಗೇರ ಗಂಗಾವತಿ, ಕಾರ್ಯದರ್ಶಿಯಾಗಿ ಚಿದಂಬರ ದಿಕ್ಷಿತ್, ಸಹಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ ಪತ್ತಾರ, ಖಜಾಂಚಿಯಾಗಿ ದೇವೆಂದ್ರಪ್ಪ ಬಡಿಗೇರ ಹಣವಾಳ, ನಿರ್ದೇಶಕರುಗಳಾಗಿ ಗುರಪ್ಪ ಬಡಿಗೇರ ಹೊಸಳ್ಳಿ, ಬಸವರಾಜ ಬಡಿಗೇರ, ಸಣ್ಣೆಪ್ಪ ಕಮ್ಮಾರ, ವೀರೇಶ ಮಾಚಳ್ಳಿ, ಪ್ರಶಾಂತ ಸುತಾರ, ಪ್ರಶಾಂತ ಸೋನಾರ ಶಿಲ್ಪಿ, ರುದ್ರೇಶ ಬಡಿಗೇರ ಆರ‍್ಹಾಳ, ಮಲ್ಲಿಕಾರ್ಜುನ ಆಚಾರ ಇವರುಗಳನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿ.ವಿ ಸರ್ವಜ್ಞ ಆಚಾರ್, ಶಂಕ್ರಪ್ಪ ಮನವಾಚಾರ ಸೇರಿದಂತೆ ಸಮಾಜದ ಅನೇಕ ಹಿರಿಯ ಮುಖಂಡರು, ಮಹಿಳಾ ಮಂಡಳಿ ಸದಸ್ಯರು, ಯುವಕರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!