ನಮ್ಮ ದೇಶದಲ್ಲಿ ಇರುವ ಜಾತಿ ವ್ಯವಸ್ಥೆ ತೊಲಗಿಸಿ ನಾವೆಲ್ಲರೂ ಸಮಾನವಾಗಿ ಬಾಳೋಣ: ಬೋದಿದತ್ತ ಥೇರೋ ಬಂತೇಜಿ
ಗಂಗಾವತಿ: ಮನು?ನಿಗೆ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಇದ್ದರೆ ನಾವು ಅಂದುಕೊಂಡಿದ್ದೆಲ್ಲ ಸಾಧಿಸಲು ಸಾಧ್ಯ ಎಂದು ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ಬಂತೇಜಿ ಹೇಳಿದರು.
ಗಂಗಾವತಿ ನಗರದ ೨೮ನೇ ವಾರ್ಡ್ ಚಲವಾದಿ ಓಣಿ, ಹಿರೇಜಂತಕಲ್ ಬೌದ್ಧ ಅನುಯಾಯಿಗಳು ಹಮ್ಮಿಕೊಂಡಿದ್ದ ಸನ್ನತಿ ಪಂಚಶೀಲ ಪಾದಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿ ಬಂತೇಜಿ ಪಂಚಶೀಲ ಪಠಣ ಮಾಡಿ ಅದರ ಮಹತ್ವವನ್ನು ತಿಳಿಸಿದರು. ಯಾವುದೇ ವ್ಯಕ್ತಿ ಕಳ್ಳತನ ಮಾಡಬಾರದು. ಮೋಸ, ವಂಚನೆ ಇಂತಹ ಕೆಟ್ಟ ದುಶ್ಚಟಗಳನ್ನು ಮಾಡಬಾರದೆಂದು ಬೌದ್ಧ ಬಂತೇಜಿ ಹೇಳಿದರು. ಈ ಪಂಚಶೀಲಯಾತ್ರೆಯ ಉದ್ದೇಶ ಬೌದ್ಧ ಧರ್ಮ ಪ್ರಚಾರ ಮಾಡುವುದರ ಜೊತೆಗೆ ಬೌದ್ಧ ಬಂತೇಜಿಯವರು ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಕರ್ನಾಟಕದ ಕಲಬುರಗಿ ಜಿಲ್ಲೆಯ ಸನ್ನತ್ತಿ ಗ್ರಾಮದಿಂದ ಬೆಂಗಳೂರು ವಿಧಾನಸೌಧದವರೆಗೆ, ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ಕೈಗೊಂಡಿರುವ ಪಂಚಶೀಲ ಉದ್ದೇಶವು ವಿಶೇ?ವಾಗಿ ಸಾಮ್ರಾಟ ಆಶೋಕ ಚಕ್ರವರ್ತಿಯ ಕಾಲದಲ್ಲಿ ಕೆತ್ತನೆಯಾಗಿರುವ ಶಿಲಾ ಶಾಸನಗಳು ಇರುವ ಸ್ಥಳಗಳಿಗೆ ಕಡ್ಡಾಯವಾಗಿ ಬೇಟಿಕೊಟ್ಟು, ದಾರಿಯುದ್ದಕ್ಕೂ ನಿಗದಿತ ಗ್ರಾಮಗಳಲ್ಲಿ ರಾತ್ರಿಹೊತ್ತು ವಸತಿ ಇದ್ದು, ಸಾಗುತ್ತಿರುವ ಪಾದಯಾತ್ರೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಅಭೂತಪೂರ್ವ ಸ್ಪಂದನೆ ಸಿಗುತ್ತಿದೆ. ಉದ್ದೇಶಿತ ಸನ್ನತ್ತಿ ಗ್ರಾಮದಲ್ಲಿ ಬೌದ್ಧ ನಿಗಮ ವಿಹಾರ ಸ್ಥಾಪನೆ, ಕರ್ನಾಟಕದಲ್ಲಿನ ಶಿಲಾಶಾಸನಗಳನ್ನು ಆಭಿವೃದ್ಧಿಪಡಿಸಿವುದು, ಬೌದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಪಾದಯಾತ್ರೆ ಕೈಗೊಳ್ಳಲಾಗಿದೆ. ಪಾದಯಾತ್ರೆಯುದ್ದಕ್ಕೂ ಇರುವ ಹಳ್ಳಿಗಳ, ಗ್ರಾಮಗಳ, ತಾಲೂಕುಗಳ, ಜಿಲ್ಲಾ ನಗರಗಳ ಬೌದ್ಧ ಉಪಾಸಕರು, ಅನುಯಾಯಿಗಳು, ರಾಜಕಾರಣಿಗಳಿಂದ ಉತ್ತಮವಾದ ಸ್ಪಂದನೆ ಸಿಗುತ್ತಿದೆ ಎಂದು ಪಾದಯಾತ್ರೆ ಕೈಗೊಂಡಿರುವ ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ನಗರದ ಪಂಚಶೀಲ ಪಾದಯಾತ್ರೆಯಲ್ಲಿ ತಿಳಿಸಿದರು. ಮುಂದಿನ ಪಾದಯಾತ್ರೆಯಲ್ಲಿ ಕೊಪ್ಪಳ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿನ ಶಿಲಾ ಶಾಸನಗಳನ್ನು ನೋಡಿಕೊಂಡು ಜನವರಿ-೨೪ ರಂದು ವಿಧಾನಸೌಧಕ್ಕೆ ತಲುಪಿ ಮಾನ್ಯ ಮುಖ್ಯಮಂತ್ರಿಗಳಿಗೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಗುವುದು, ಅಂದಿನ ದಿನ ೫೦ ಸಾವಿರಕ್ಕೂ ಹೆಚ್ಚು ಜನ ಬೌದ್ಧ ಉಪಾಸಕರು, ಅನುಯಾಯಿಗಳು ಬೆಂಗಳೂರಿನಲ್ಲಿ ಸೇರಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಲವಾದಿ ಸಮಾಜದ ಅಧ್ಯಕ್ಷರಾದ ಹ?ಪ್ಪ ಕೋರಿ, ಚಲವಾದಿ ಸಮಾಜದ ಗೌರವಾಧ್ಯಕ್ಷ ಹುಲುಗಪ್ಪ ಮಾಗಿ, ಹುಸೇನಪ್ಪ ಹಂಚಿನಾಳ ವಕೀಲರು, ಲೋಕಪ್ಪ, ರಮೇಶ್ ಗೊಬ್ಬೂರು, ಬಸಪ್ಪ ಆಗೋಲಿ, ಲಿಂಗಣ್ಣ ಜಂಗಮರಹಳ್ಳಿ, ಭೀಮೇಶ್ ಕರಿಮೂತಿ, ಮರಿಸ್ವಾಮಿ ಬರಗೂರು, ತಿಮ್ಮಣ್ಣ ವಕೀಲರು ಮುಂಡೋಸ್, ರಾಮಣ್ಣ ಕಿರಿಕಿರಿ, ರವಿ ಆರತಿ, ಮಲ್ಲಿಕಾರ್ಜುನ್ ಗೋಟೂರು, ವೀರೇಶ್ ಆರತಿ, ಆಂಜನೇಯ ಸೋಮನಾಳ, ಹುಲ್ಲೇಶ್ ಬಂಡಿ ಸೇರಿದಂತೆ ಅನೇಕ ಬೌದ್ದ ಅನುಯಾಯಿಗಳು ಭಾಗವಹಿಸಿದ್ದರು.