Sign in
Sign in
Recover your password.
A password will be e-mailed to you.
ಗಂಗಾವತಿ: ಇಂದು ಲಯನ್ಸ್ ಕ್ಲಬ್‌ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ ಸಂವಾದ ಅತ್ಯಂತ ಯಶಸ್ವಿಯಾಯಿತು. ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರಾದ ಮಾಧವನ್ ಸಿ.ಪಿ ಹಾಗೂ ರಾಘವ್ ಗೋ-ಸಿರಿ ಅವರು ತುಂಗಭದ್ರಾ ಅಭಿಯಾನದ ಪಾದಯಾತ್ರೆ ಬಗ್ಗೆ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರು, ಪರಿಸರವಾದಿಗಳಾದ ಡಾ|| ಎ. ಸೋಮರಾಜು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ|| ಜಿ. ಚಂದ್ರಪ್ಪ ಅವರು ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು.
ಗಂಗಾವತಿಯ ಪ್ರಮುಖ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಸುಬ್ರಹ್ಮಣ್ಯೇಶ್ವರರಾವ್, ರೋಟರಿ ಕ್ಲಬ್ ಅಧ್ಯಕ್ಷರಾದ ಟಿ. ಆಂಜನೇಯ, ಸ್ನೇಹಬಳಗದ ಅಧ್ಯಕ್ಷರಾದ ಶ್ಯಾಮಮೂರ್ತಿ ಐಲಿ, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ನೂಲ್ವಿ, ದಲಿತ ಸಾಹಿತ್ಯ ಪರಿಷತ್ತಿನ ಛತ್ರಪ್ಪ ತಂಬೂರಿ, ಶರಣ ಸಾಹಿತ್ಯ ಪರಿಷತ್ತಿನ ಜೆ. ನಾಗರಾಜ, ಜೈನ ಸಮಾಜದ ಉಗಮರಾಜ ಬಂಬ್, ಆಯುಷ್ ಅಧ್ಯಕ್ಷರಾದ ಡಾ|| ಬಸವರಾಜ, ಕಾರ್ಯದರ್ಶಿ ಡಾ|| ಸುನೀಲ್ ಅರಳಿ, ಬಸವಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ, ಸೌಹಾರ್ಧ ಸಹಕಾರಿ ಒಕ್ಕೂಟದ ಸುಧಾಕರ, ಸತೀಶ್, ಕ್ಲೀನ್ ಗ್ರೀನ್ ಶ್ರೀರಾಮನಗರದ ಎಂ.ಡಿ ರಫಿ, ಮೌಲಾಸಾಬ್, ನೌಕರ ಸಂಘದ ಅಧ್ಯಕ್ಷರಾದ ಶಿವಶಂಕರ ಹಾಗೂ ನಿವೃತ್ತ ನೌಕರರ ಸಂಘದ ಶರಭಣ್ಣ, ಅಲೆಮಾರಿ ಸಮುದಾಯದ ಅಧ್ಯಕ್ಷ ಆರ್. ಕೃಷ್ಣ, ಭಾರತೀಯ ಪ್ರಜಾಸೇನೆಯ ಬಸವರಾಜ ಮ್ಯಾಗಳಮನಿ, ಭಾರತೀಯ ವಿಕಾಸ ಪರಿಷತ್ ಅಧ್ಯಕ್ಷರಾದ ಜಂಬಣ್ಣ ಐಲಿ, ಸೇಂಟ್ ಫಾಲ್ಸ್ ಶಿಕ್ಷಣ ಸಂಸ್ಥೆಯ ಸರ್ವೇಶ್ ವಸ್ತ್ರದ್, ಶರಣ ಕಲಾಬಳಗದ ರಮೇಶ ಗಬ್ಬೂರು, ಹೀಗೆ ೩೫ ಕ್ಕಿಂತ ಹೆಚ್ಚಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಡಾ|| ಶಿವಕುಮಾರ ಮಾಲಿಪಾಟೀಲ್ ಸ್ವಾಗತಿಸಿದರು. ಪವನಕುಮಾರ ಗುಂಡೂರು ವಂದನಾರ್ಪಣೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ
Get real time updates directly on you device, subscribe now.