ಪಂಚಮಸಾಲಿ ಸಮಾಜದ ಮುಖಂಡರ ಮೇಲೆ ಲಾಠಿ ಚಾರ್ಜ್ ನವೀನ್ ಕುಮಾರ್ ಗುಳ್ಳಗಣ್ಣನವರ್ ಆಕ್ರೋಶ
Koppal
ಬೆಳಗಾವಿಯ ಸುವರ್ಣಸೌಧದ ಬಳಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಪಂಚಮಸಾಲಿ ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಹಾಗೂ ಪಂಚಮಸಾಲಿ ಸಮಾಜದ ಮುಖಂಡರ ಮೇಲೆ ಲಾಠಿ ಚಾರ್ಜ್ ಮಾಡಿದ್ದಕ್ಕೆ ಕೊಪ್ಪಳ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳ್ಳಗಣ್ಣನವರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣ ವಿಧಾನಸೌಧಕ್ಕೆ ತೆರಳುತ್ತಿದ್ದ ಸಾವಿರಾರು ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಮೆರವಣಿಗೆ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪಂಚಮಸಾಲಿ ಸಮುದಾಯದ ಹೋರಾಟವನ್ನು ಹತ್ತಿಕ್ಕಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಡಾಲ್ಫ್ ಹಿಟ್ಲರ್ ರೀತಿ ವರ್ತಿಸಿರುವುದು ಅತ್ಯಂತ ದುರದೃಷ್ಟಕರ.
ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಅವರಂತಹ ಪೂಜ್ಯ ಶ್ರೀಗಳ ಅವಮಾನಕರ ಮೇಲೆ ನಡೆದ ವರ್ತನೆ ನಮಗೆ ತೀವ್ರ ನೋವುಂಟು ಮಾಡಿದೆ, ಇದು ಶಿಲಾಯುಗದ ಮನಸ್ಥಿತಿಯ ಸರ್ಕಾರ, ಇದನ್ನು ಬಿಜೆಪಿಯು ತೀವ್ರವಾಗಿ ಖಂಡಿಸುತ್ತೇದೆ.
ಪೂಜ್ಯ ಶ್ರೀಗಳು ಮತ್ತು ಸಮಾಜದ ಮುಖಂಡರು ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಪದೇ ಪದೇ ಮನವಿ ಸಲ್ಲಿಸಿದರೂ ಸರ್ಕಾರ ಕಿವುಡ ಮತ್ತು ನಿರ್ಲಕ್ಷ್ಯ ವಹಿಸಿದೆ. ಶಾಂತಿಯುತ ಪ್ರತಿಭಟನಾಕಾರರು, ಧರ್ಮದರ್ಶಿಗಳು, ಸಮಾಜದ ಮುಖಂಡರು, ಜನರು ಸೇರಿದಂತೆ ಕ್ರೂರ ಪೊಲೀಸರ ದಬ್ಬಾಳಿಕೆ ಸ್ವೀಕಾರಾರ್ಹವಲ್ಲ ಮತ್ತು ಖಂಡನೀಯ.”ಘಟನೆಯಲ್ಲಿ ಹಲವಾರು ಪೊಲೀಸರಿಗೂ ಗಾಯಗಳಾಗಿವೆ.
‘ಶಾಂತಿ ಕದಡಲು ಮುಂದಾದರೆ ಸರ್ಕಾರವೇ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ’
ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಗಲಾಟೆಯಿಂದಾಗಿ ಪ್ರತಿಭಟನಾಕಾರರೊಬ್ಬರು ಅಸ್ವಸ್ಥಗೊಂಡಿದ್ದಾರೆ. ಕೂಡಲೆ ಸರ್ಕಾರ ಸಮಾಜದ ಕ್ಷಮೆ ಕೋರಬೇಕು, ಈಗಾಗಲೇ ಪ್ರತಿಭಟನಕಾರರ ಮೇಲೆ ದಾಖಲಿಸಿದ ದೂರುಗಳನ್ನು ಕೈಬಿಡಬೇಕು, ಪಂಚಮಸಾಲಿ ಸಮಾಜದ ಹೋರಾಟಕ್ಕೆ ಪಕ್ಷದ ಬೆಂಬಲವಿದ್ದು ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನವೀನಕುಮಾರ್ ಗುಳಗಣ್ಣನರ ಆಗ್ರಹಿಸಿದ್ದಾರೆ.
ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮಾಡುತ್ತಿರುವ ಪಂಚಮಸಾಲಿ ಸಮಾಜದ ಬೇಡಿಕೆಯ ಮನವಿಯನ್ನು ಸ್ವೀಕರಿಸದೆ. ಸಿಎಂ ಸಿದ್ದರಾಮಯ್ಯನವರು ಅಹಂಕಾರದಿಂದ ಹೊರಟು ಹೋಗಿದ್ದಾರೆ. ಪೊಲೀಸ್ ಮುಖಾoತರ ಪ್ರತಿಭಟನೆ ಮಾಡುತ್ತಿರುವ ನಾಯಕರನ್ನು ಬಂಧಿಸಿ ಪ್ರತಿಭಟನಕಾರರಿಗೆ ಲಾಠಿಚಾರ್ಜ್ ಮಾಡಿ ಗಾಯಗೊಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ರವರು 2D ಮೀಸಲಾತಿಯನ್ನು ನೀಡಿದ್ದರು. ಆಗ ಜಯ ಮೃತ್ಯುಂಜಯ ಸ್ವಾಮೀಜಿಗಳು ಸ್ವಾಗತಿಸಿದ್ದರು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2D ಮತ್ತು 2A ಮೀಸಲಾತಿಯನ್ನು ನೀಡದೆ.ಪಂಚಮಸಾಲಿ ಸಮಾಜವನ್ನು ಹತ್ತಿಕ್ಕುವ ಕಾರ್ಯ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿರುವ 34 ಲಿಂಗಾಯತ ಶಾಸಕರು ಮೀಸಲಾತಿಯ ಪರ ಧ್ವನಿ ಎತ್ತದೆ ಪoಚಮಸಾಲಿ ಪ್ರತಿಭಟನಾಕಾರರಿಗೆ ಲಾಠಿಚಾರ್ಜ್ ಮಾಡಿದನು ಖಂಡಿಸದೆ ಪಂಚಮಸಾಲಿ ಸಮಾಜವನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ.
ಕಾಂಗ್ರೆಸ್ ನಲ್ಲಿರುವ ಲಿಂಗಾಯತ ಶಾಸಕರಿಗೆ ಲಿಂಗಾಯತ ಸಮಾಜದ ಜನರ ಮುಂದೆ ಒಂದು ದಿನ ತಕ್ಕ ಪಾಠ ಕಲಿಸುತ್ತಾರೆ. *ಎಂದು ನವೀನ್ ಈ ಗುಳಗಣ್ಣವರ್* ಆಗ್ರಹಿಸಿದ್ದಾರೆ.