Koppal ರೈಲು ನಿಲ್ದಾಣಕ್ಕೆ ಕುಮಾರ ರಾಮನ ಹೆಸರಿಡಿ : ಬೆಟ್ಟದೂರು
ಕೊಪ್ಪಳ: ಕೊಪ್ಪಳದ ರೈಲು ನಿಲ್ದಾಣಕ್ಕೆ ಐತಿಹಾಸಿಕ ವೀರಪುರರುಷ, ಪರನಾರಿ ಸಹೋದರ, ಗಂಡುಗಲಿ ಕುಮಾರರಾಮನ ಹೆಸರಿಡಲು ಪ್ರಗತಿಪರರ ಸಂಘಟನೆಗಳ ಒಕ್ಕೂಟ ಮುಖಂಡರು ಹಾಗೂ ರಾಜ್ಯೋತ್ಸ ವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಅವರು, ಮುಖ್ಯಮಂತ್ರಿ,ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಅವರನ್ನು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಕನ್ನಡವನ್ನು ಕಟ್ಟಿದ ಹೆಗ್ಗಳಿಕೆ ಇರುವ ಮತ್ತು ವಿಜಯನಗರ ಸಾಮ್ರಾಜ್ಯವನ್ನು ಕಟ್ಟುವ ಕುರಿತು ಕನಸು ಕಂಡು ಮತ್ತು ಅದಕ್ಕೆ ಬಲತಂದಿದ್ದ ಕುಮ್ಮಟದುರ್ಗದ ದೊರೆ ಕುಮಾರರಾಮ ಮಾತ್ರ, ಆದಕ್ಕೂ ಮಿಗಿಲಾಗಿ ಆತ ಪರನಾರಿ ಸಹೋದರ ಬಿರುದಾಂಕಿತನಾಗಿದ್ದು, ಇಡೀ ಮಹಿಳಾ ಕುಲಕ್ಕೆ ಆತ ಆದರ್ಶ, ರಾಜ ಮತ್ತು ರಾಜರ ಆಳ್ವಿಕೆಗೂ ಸಹಿತ ಆತ
ಆದರ್ಶನಾಗಿದ್ದಾನೆ, ಆತನ ಹೆಸರನ್ನು ಇಡುವದು ಅತ್ಯಂತ ಸೂಕ್ತ ಮತ್ತು ನಿಜವಾದ ನ್ಯಾಯವನ್ನು ಕೊಟ್ಟಂತಾಗುತ್ತದೆ,ಕೊಪ್ಪಳದಲ್ಲಿ ಅಶೋಕನ ಶಿಲಾ ಶಾಸನಗಳಿದ್ದು ಯುದ್ಧವನ್ನು ತಿರಸ್ಕರಿಸಿ ಬುದ್ಧನಿಗೆ ಶರಣಾಗಿ ಶಾಂತಿ ಪ್ರಿಯನಾದ ಸಾಮ್ರಾಟ್ ಅಶೋಕ ಎರಡು ಹೆಸರುಗಳಲ್ಲಿ ಒಂದನ್ನು ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಇಡಬೇಕೆಂದು ಆಗ್ರಹಿಸಿದರು.
ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ , ಅಂದಪ್ಪ ಬೆಣಕಲ್ , ಶುಕರಾಜ್ ತಾಳಕೇರಿ, ರಾಮಣ್ಣ ಕಲ್ಲನವರ್ , ಟಿ.ರತ್ನಾಕರ,ಶಿವಪ್ಪ ಹಡಪದ,ಗಾಳೆಪ್ಪ ಮುಂಗೋಲಿ ಉಪಸ್ಥಿತರಿದ್ದರು.