ಹನುಮೇಶ ನಾಯಕ ಕುಟುಂಬದಿಂದ ಜೀವ ಬೆದರಿಕೆಯಿದೆ : ಹೂಗಾರ
ಕೊಪ್ಪಳ : ಹುಲಿಹೈದರ ಗ್ರಾಮದ ಹನುಮೇಶ ನಾಯಕನ ಕುಟುಂಬದಿಂದ ನನಗೆ ಜೀವ ಬೆದರಿಕೆ ಇದೆ ಎಂದು ಹುಲಿಹೈದರ ಗ್ರಾಮದ ಭೀಮಣ್ಣ ಹೂಗಾರ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರ ಭೂಮಿಗೂ ನಮ್ಮ ಭೂಮಿಗೆ ಯಾವುದೇ ಸಂಬಂಧವಿಲ್ಲ ಆದರೂ ವಿನಾ ಕಾರಣ ನಮ್ಮ ಮೇಲೆ ದೌರ್ಜನ್ಯವೆಸಗಿ ನಮಗೆ ಭೂಮಿ ಕೊಡುವಂತೆ ಒತ್ತಡ ಏರುತ್ತಿದ್ದು, ನಮ್ಮ ಭೂಮಿ ರಾಜ್ಯ ಹೆದ್ದಾರಿಗೆ ಹತ್ತಿಕೊಂಡಿದ್ದು,ಅದು ಸಾಕಷ್ಟು ಬೆಲೆ ಬಾಳುತ್ತದೆ,ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ನಮಗೆ ಪದೇ ಪದೇ ತೊಂದರೆ ಕೊಡುತ್ತಿದ್ದು ಸರ್ವೇದಾರರ ಕರಿಸದೆ,ಪೊಲೀಸರನ್ನು ಕರೆಸಿ ನಮ್ಮನ್ನು ಬೆದರಿಸುತ್ತಿದ್ದು,ಇವರಿಂದ ನಾವು ಭಯಭೀತರಾಗಿದ್ದು ನಮಗೆ ನ್ಯಾಯ ಸಿಗುತ್ತಿಲ್ಲ ನಮಗೆ ಜೀವ ಬೆದರಿಕೆ ಹಾಕುತ್ತಿದ್ದು,ನ್ಯಾಯಕ್ಕಾಗಿ ಹಾಗೂ ರಕ್ಷಣೆಗಾಗಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಸಂಬಂಧಿಸಿದವರು ನಮಗೆ ನ್ಯಾಯ ಮತ್ತು ರಕ್ಷಣೆ ಒದಗಿಸಿ ಕೊಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಹೂಗಾರ್ ಹುಲಿಹೈದರ,ಗಂಗಮ್ಮ ಹೂಗಾರ್ ಉಪಸ್ಥಿತರಿದ್ದರು.