ಭೀಮಣ್ಣ ಹೂಗಾರ ಆರೋಪ ಶುದ್ಧ ಸುಳ್ಳು : ರಮೇಶ್ ನಾಯಕ
ಕೊಪ್ಪಳ : ಹುಲಿಹೈದರ ಗ್ರಾಮದ ಭೀಮಣ್ಣ ಹೂಗಾರ ನಮ್ಮ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಇದು ಶುದ್ಧ ಸುಳ್ಳು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಹುಲಿಹೈದರ ಗ್ರಾಮದ ರಮೇಶ್ ನಾಯಕ ಹೇಳಿದರು.
ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಆತನು ಸರ್ವೇ ಮಾಡಲು ಅವಕಾಶ ನೀಡುತ್ತಿಲ್ಲ,ಭೀಮಣ್ಣನ ಮೇಲೆ ನಾವು ಯಾವುದೇ ಜೀವ ಬೆದರಿಕೆ, ದೌರ್ಜನ್ಯವೆಸಗಿಲ್ಲ,ಆತ ಯಾರೋ ಮಾತು ಕೇಳಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು,ನಾವು ಖರೀದಿ ಮಾಡಿದ ಭೂಮಿ ಇದ್ದು,ಈಗ ನಮಗೆ ಬೇರೆ ಕಡೆ ತೋರಿಸುತ್ತಿದ್ದು,ಅದನ್ನು ಸರ್ವೆ ಮಾಡಲು ಅವಕಾಶ ನೀಡುತ್ತಿಲ್ಲ,ನಾವು ಇದಕ್ಕಾಗಿ ಪೊಲೀಸರ ಸಮ್ಮುಖದಲ್ಲೇ ಸರ್ವೆ ಮಾಡಲು ಮುಂದಾದರೆ ಪೊಲೀಸರಿಂದ ನಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ ಈ ಆರೋಪದಲ್ಲಿ ಯಾವುದೇ ಉರುಳಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡ ಹನುಮೇಶ್ ನಾಯಕ ಉಪಸ್ಥಿತರಿದ್ದರು.