ಕೌಶಲ್ಯಗಳು ಜೀವನಕ್ಕೆ ಬಹಳ ಅಗತ್ಯ : ಡಾ. ಗಣಪತಿ ಲಮಾಣಿ

0

Get real time updates directly on you device, subscribe now.


ಕೊಪ್ಪಳ  : ಕೌಶಲ್ಯಗಳು ಜೀವನಕ್ಕೆ ಬಹಳ ಅಗತ್ಯ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ ಪ್ಲೇಸ್ ಮೆಂಟ್ ಸೆಲ್ ಮತ್ತು ದೇಶಪಾಂಡೆ ಸ್ಕಿಲಿಂಗ್, ಹುಬ್ಬಳ್ಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳಿಗೆ ಸ್ಕಿಲಿಂಗ್ ಪ್ಲಸ್ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ ಸರಕಾರಿ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳು ಹೆಚ್ಚು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ತರಬೇತಿ ಕಾರ್ಯಕ್ರಮಗಳು ಬಹಳ ಅನುಕೂಲ ಆಗುತ್ತವೆ. ನಿಮಗೆ ಪದವಿ ಜೊತೆಗೆ ಈ ರೀತಿ ತರಬೇತಿ ಗಳು ಅವಶ್ಯಕತೆ ಇದೆ. ಕೌಶಲ್ಯಗಳು ನಮ್ಮ ಜೀವನಕ್ಕೆ ಬಹಳ ಅಗತ್ಯ ಇದೆ. ಇಂತಹ ಯುಗದಲ್ಲಿ ನಿಮಲ್ಲಿ ಕೌಶಲ್ಯಗಳು ಇದ್ದರೇ ಖಾಸಗಿಯಲ್ಲಿ ಉದ್ಯೋಗ ಮಾಡಬಹುದು. ನೀವು ಪದವಿ ಮುಗಿದ ನಂತರ ಈ ತರಬೇತಿ ಪಡೆದುಕೊಳ್ಳಬೇಕಾದರೆ ಹೆಚ್ಚು ಹಣ ಬೇಕಾಗಯುತ್ತದೆ. ನೀವು ಕಲಿತಿರುವ ಕೌಶಲ್ಯಗಳು ಜೀವನದಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ಲೇಸ್ ಮೆಂಟ್ ಸೆಲ್ ಸಂಚಾಲಕರಾದ ಡಾ. ಪ್ರದೀಪ್ ಕುಮಾರ್ ಅವರು ಮಾತನಾಡಿ ದೇಶಪಾಂಡೆ ಸ್ಕಿಲಿಂಗ್ ಫೌಂಡೇಶನ್ ವಿಭಾಗವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿನಿಯರು ಈಗಾಗಲೇ ಹಲವಾರು ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಇದಕ್ಕೆ ಸಹಕಾರಿಯಾಗಿ ದೇಶಪಾಂಡೆ ಫೌಂಡೇಶನ್ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ನಮ್ಮ ವಿದ್ಯಾರ್ಥಿನಿಯರಿಗೆ ಬೆನ್ನೆಲುಬಾಗಿ ನಿಂತು ಕೆಲಸ ಕೊಡಿಸುವವರೆಗೂ ಅವರನ್ನು ಕೈ ಬಿಡದೆ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದೆ ಅಂತಿಮ ವರ್ಷದ ವಿದ್ಯಾರ್ಥಿನಿಯರು ಇನ್ನು ಹೆಚ್ಚು ಕ್ರಿಯಾಶೀಲರಾಗಿ ಹೆಚ್ಚು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು ಪದವಿ ಓದುವಾಗಲೇ ನೀವು ಈ ತರಹದ ತರಬೇತಿಗಳನ್ನು ಪಡೆದುಕೊಂಡರೆ ಅದು ಮುಂದಿನ ನಿಮ್ಮ ನೌಕರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ವಿಠೋಬ ಎಸ್ ಅವರು ಮಾತನಾಡುತ್ತಾ ಇನ್ನೂ ಹೆಚ್ಚಿನ ಕೌಶಲ್ಯಗಳನ್ನು ಕಲಿಯುವ ಉದ್ದೇಶದಿಂದ ಈ ತರಬೇತಿಯನ್ನು ಮಾಡಲಾಗುತ್ತದೆ. ಇಂದು ಕಾಪೋರೆಟ್ ಕಂಪನಿಗಳ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಅಗತ್ಯಕ್ಕೆ ತಕಂತೆ ನೀವು ಕೌಶಲ್ಯ ಮತ್ತು ಜ್ಞಾನ ವನ್ನು ಬೆಳಿಸಿಕೊಳ್ಳಿ. ಇದರಿಂದ ನಿಮಗೆ ಬಹಳ ಉಪಯೋಗವಾಗುತ್ತದೆ. ನಿಮಗೆ ಇಲ್ಲಿ ದೇಶಪಾಂಡೆ ಫೌಂದೇಶನ ಅವರು ನಿಮಗೆ ಕಡಿಮೆ ವೆಚ್ಚದಲ್ಲಿ ಉತ್ತಮ ತರಬೇತಿಯನ್ನು ನೀಡುತ್ತಿದ್ದಾರೆ. ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ದೇಶಪಾಂಡೆ ಸ್ಕಿಲಿಂಗ್ ಸಿಬ್ಬಂದಿಗಳಾದ ಶ್ರೀ ಮತಿ ಶಾರದಾ, ಸಾನಿಯಾ ಹಾಗೂ ಕಾಲೇಜಿನ ಉಪನ್ಯಾಸಕರರಾದ ಡಾ. ಹುಲಿಗೆಮ್ಮ, ಡಾ. ನರಸಿಂಹ, ಡಾ. ಅಶೋಕ ಕುಮಾರ್, ಶಿವಪ್ರಸಾದ್ ಹಾದಿಮನಿ, ಶ್ರೀಕಾಂತ್, ವಿದ್ಯಾ ಜಂಗಿನು, ಡಾ. ಸೂರಪ್ಪ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕೃತಿಕಾ ಸ್ವಾಗತಿಸಿದರು, ಮಾಮ್ತಾಜ್ ಬೇಗಂ ನಿರೂಪಿಸಿದರು. ಸುಹಾನಾ ವಂದಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!