ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ ಎಡಗೈ ಸರಕಾರಿ ನೌಕರರ ಸಂಘ : ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಮ್ಯಾಗಳಮನಿ,ಪ್ರಧಾನ ಕಾರ್ಯದರ್ಶಿಗಳಾಗಿ ಮಾರುತಿ ಮ್ಯಾಗಳಮನಿ ಆಯ್ಕೆ
ಕೊಪ್ಪಳ:-ಕೊಪ್ಪಳ ನಗರದ ಎಂ ಪಿ ಪ್ಯಾಲೇಸ್ ನಲ್ಲಿ ದಿ 8 ರಂದು ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿ ಎಡಗೈ ಸರಕಾರಿ ನೌಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಲಾಯಿತು ಈ ಸಭೆಯಲ್ಲಿ ಮೈಸೂರಿನ ರಾಜ್ಯ ಸಂಚಾಲಕರಾದ ಶ್ರೀ ಮಂಜುನಾಥ್ ವಣಿಕೇರಿ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ನೌಕರರು ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಖುಷಿಯ ವಿಚಾರ ಜೊತೆಗೆ ಕೆಳಹಂತದ ಜನರನ್ನು, ದೀನ ದಲಿತರು, ಸಮುದಾಯದ,ಬಡವರ ಕೆಲಸ ಕಾರ್ಯಗಳನ್ನು ಮಾಡುವುದು ನಮ್ಮೆಲ್ಲರ ಪ್ರತಿಯೊಬ್ಬ ನೌಕರರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿಯ ಎಡಗೈ ಸರಕಾರಿ ನೌಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಗೌರವ ಅಧ್ಯಕ್ಷರು ಚಂದ್ರಪ್ಪ ರಾಜೂರು, ಜಿಲ್ಲಾಧ್ಯಕ್ಷರು ಮಂಜುನಾಥ ಮ್ಯಾಗಳಮನಿ ಕಂದಾಯ ಇಲಾಖೆ, ಪ್ರಧಾನ ಕಾರ್ಯದರ್ಶಿಗಳು ಮಾರುತಿ ಮ್ಯಾಗಳಮನಿ ಶಿಕ್ಷಣ ಇಲಾಖೆ, ಹಿರಿಯ ಉಪಾಧ್ಯಕ್ಷರು ಶಿವಬಸಪ್ಪ ಕಡೆಮನಿ, ಉಪಾಧ್ಯಕ್ಷರು ಹನುಮಂತಪ್ಪ ಹಾದಿಮನಿ, ಖಜಾಂಚಿ ರಾಮಣ್ಣ ಮೂರಮನಿ, ಸಂಘಟನಾ ಕಾರ್ಯದರ್ಶಿ ಆರೋಡಪ್ಪ ಮಾದರ, ಸಹ ಕಾರ್ಯದರ್ಶಿ ವೆಂಕಟೇಶ, ಸಾಂಸ್ಕೃತಿಕ ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ ರವರನ್ನು ಎಲ್ಲಾ ನೌಕರರು ಅವಿರೋಧವಾಗಿ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಮಂಜುನಾಥ ಮ್ಯಾಗಳಮನಿ ಪ್ರತಿಯೊಬ್ಬ ನೌಕರ ತಮ್ಮ ಸಮುದಾಯದ ಬಗ್ಗೆ ಗೌರವ ಕಾಳಜಿ ಹೊಂದಿರಬೇಕು ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಹೆಚ್ಚು ಹೆಚ್ಚು ಪಡೆಯುವಂತರಾಗಬೇಕೆಂದರು,
ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಮ್ಯಾಗಳಮನಿ ಮಾತನಾಡಿ ಶೈಕ್ಷಣಿಕವಾಗಿ ಪ್ರತಿಯೊಬ್ಬರು ಪ್ರಜ್ಞಾವಂತರಾಗಿ ಸಮಾಜಕ್ಕೆ ಸಮುದಾಯಕ್ಕೆ ಒಳ್ಳೆಯ ಕೊಡುಗೆ ನೀಡಬೇಕೆಂದರು.
ಖಜಾಂಚಿಯಾದ ರಾಮಣ್ಣ ಮೂರಮನಿ ಮಾತನಾಡಿದರು, ಹನುಮಂತಪ್ಪ ಎಚ್, ನಾಗಪ್ಪ ಕನಕಪುರ,ಮರಿಯಪ್ಪ ಹಾದಿಮನಿ ರಾಜಶೇಖರ್ ಬಾವಿಮನಿ,ನಾಗರಾಜ ನಡವಲಕೇರಿ, ಡಾ.ಶಂಕರ್ ಬಿನ್ನಾಳ, ಯಲ್ಲಪ್ಪ ಮಾದರ್, ಮುಂತಾದವರು ಉಪಸ್ಥಿತರಿದ್ದರು, ಎಂದು ಪ್ರಕಟಣೆಯಲ್ಲಿ ಮಾರುತಿ ಮ್ಯಾಗಳಮನಿ ತಿಳಿಸಿದ್ದಾರೆ.