ಹನುಮಮಾಲ ಕಾರ್ಯಕ್ರಮ: ಮೂಲಭೂತ ಸೌಕರ್ಯಕ್ಕೆ ಕೊಪ್ಪಳ ಜಿಲ್ಲಾಡಳಿತದ ಕ್ರಮ

0

Get real time updates directly on you device, subscribe now.

ಕೊಪ್ಪಳ  ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 12 ಮತ್ತು 13 ರಂದು ನಡೆಯಲಿರುವ ಹನುಮಮಾಲ ವಿಸರ್ಜನಾ ಕಾರ್ಯಕ್ರಮಕ್ಕಾಗಿ ಭಕ್ತಾಧಿಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೊಪ್ಪಳ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗಿದೆ.
ಹನುಮಮಾಲ ವಿಸರ್ಜನಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗಾಗಿ ಶೌಚಾಲಯ ವ್ಯವಸ್ಥೆ, ಸ್ನಾನದ ವ್ಯವಸ್ಥೆ, ಪೆಂಡಾಲ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದು, ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ.
ಸ್ನಾನದ ಸ್ಥಳಗಳು: ಭಕ್ತಾಧಿಗಳಿ ಸ್ನಾನಕ್ಕಾಗಿ ದೇವಸ್ಥಾನದ ಪಾರ್ಕಿಂಗ್ ಬಳಿ 50 ತಾತ್ಕಾಲಿ ಶಾವರ್, ಆನೇಗುಂದಿ ಪಾರ್ಕಿಂಗ್-25, ದುರ್ಗಾದೇವಿ ಬೆಟ್ಟದ ಹತ್ತಿರ-20, ಪಂಪಾಸರೋವರ-25, ಹನುಮನಹಳ್ಳಿಯ ಹತ್ತಿರ-20 ಸೇರಿ ಒಟ್ಟು 140 ತಾತ್ಕಾಲಿ ಶಾವರ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಪೆಂಡಾಲ ಸೌಕರ್ಯ: ವೇದ ಪಾಠಶಾಲೆಯ ಹತ್ತಿರ, ದೇವಸ್ಥಾನದ ಪಾರ್ಕಿಂಗ್ ಸ್ಥಳ, ಬೆಟ್ಟದ ಮೇಲೆ ದೇವಸ್ಥಾನದ ಹತ್ತಿರ, ಆನೇಗುಂದಿ ಉತ್ಸವ ಪಾರ್ಕಿಂಗ್ ಹಾಗೂ 6 ಕಡೆ ವಿವಿಧ ಪಾರ್ಕಿಂಗ ಸ್ಥಳಗಳಲ್ಲಿ ಪೆಂಡಾಲ ಸೌಕರ್ಯ ಕಲ್ಪಿಸಲಾಗಿದೆ.
ಶೌಚಾಲಯ ವ್ಯವಸ್ಥೆ: ಈಗಾಗಲೇ ಇರುವ 13 ಶೌಚಾಲಯಗಳ ಜೊತೆಗೆ ಚಿಂತಾಮಣಿ, ದೇವಸ್ಥಾನದ ಪಾರ್ಕಿಂಗ್, ಆನೇಗುಂದಿ ಪಾರ್ಕಿಂಗ್, ದುರ್ಗಾದೇವಿ ಬೆಟ್ಟದ ಹತ್ತಿರ, ಪಂಪಾಸರೋವರ, ಹನುಮನಹಳ್ಳಿಯ ಹತ್ತಿರ, ವೇದಪಾಠ ಶಾಲೆ ಹತ್ತಿರ 60 ತಾತ್ಕಾಲಿಕ ಶೌಚಾಲಯ ಸೇರಿ ಒಟ್ಟು 73 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.
ಪಾರ್ಕಿಂಗ ವ್ಯವಸ್ಥೆ: ಡಿ. 12 ಮತ್ತು 13ರಂದು ಸರಕಾರಿ ವಾಹನ ನಿಲುಗಡೆಯ ಸ್ಥಳವನ್ನು ಗುಡಿಯ ಮುಂಬಾಗದಲ್ಲಿ ನಿಗದಿಪಡಿಸಿದೆ. ಸಾರ್ವಜನಿಕರ ವಾಹನಗಳು ಗಂಗಾವತಿ, ಹೊಸಪೇಟೆ, ಹುಲಗಿಯ ಮಾರ್ಗವಾಗಿ ಬರುವ ವಾಹನಗಳಿಗೆ ಆನೇಗುಂದಿ ಉತ್ಸವ ಸ್ಥಳ, ಹನುಮನಹಳ್ಳಿಯ ಹತ್ತಿರ, ದೇವಸ್ಥಾನ ಹಿಂಬಾಗದಲ್ಲಿ, ಪಂಪಾಸರೋವರ ಹತ್ತಿರ ಹಾಗೂ ಇತರೆ ಕಡೆಗಳಲ್ಲಿ ಸೇರಿದಂತೆ ಪಾರ್ಕಿಂಗ್‌ಗಾಗಿ ಒಟ್ಟು 15 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!