ಹನುಮಮಾಲ ವಿಸರ್ಜನಾ ಕಾರ್ಯಕ್ರಮ: ವಿವಿಧೆಡೆ ಕುಡಿಯುವ ನೀರಿನ ವ್ಯವಸ್ಥೆ

0

Get real time updates directly on you device, subscribe now.

ಕೊಪ್ಪಳ ಡಿ  ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 12 ಮತ್ತು 13 ರಂದು ನಡೆಯಲಿರುವ ಹನುಮಮಾಲ ವಿಸರ್ಜನಾ ಕಾರ್ಯಕ್ರಮಕ್ಕಾಗಿ ಕೊಪ್ಪಳ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ವಿವಿಧ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಹನುಮಮಾಲ ವಿಸರ್ಜನಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗಾಗಿ ಓ.ಹೆಚ್.ಟಿ ಯಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ವೇದ ಪಾಠಶಾಲೆಯ ಹತ್ತಿರ 430 ನಳಗಳು ಮತ್ತು 15 ಟ್ಯಾಂಕರಗಳ ಮೂಲಕ ಕುಡಿಯುವ ನೀರಿಗಾಗಿ ವ್ಯವಸ್ಥೆಯನ್ನು ಮಾಡಲಗಿದೆ. ಆನೆಗುಂದಿ ಪಾರ್ಕಿಂಗ ಸ್ಥಳದಲ್ಲಿ 50 ನಳಗಳು, ಪಂಪಾಸರೋವರದಲ್ಲಿ 10 ನಳಗಳು, ಹನುಮನಹಳ್ಳಿಯ ಹತ್ತಿರ 20 ನಳಗಳು, ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ 50 ನಳಗಳು, ದೇವಸ್ಥಾನದ ಪ್ರದಕ್ಷಣೆ ಪ್ರದಕ್ಷಣೆ ಸುತ್ತಲು 4 ಕಡೆ ಮತ್ತು ಭಕ್ತಾದಿಗಳು ಬೆಟ್ಟ ಹತ್ತುವ ಮಾರ್ಗದಲ್ಲಿ ಭಕ್ತಾದಿಗಳಿಗೆ 4 ಕಡೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಂಗಾವತಿಯಿಂದ ಬರುವ ಭಕ್ತಾಧಿಗಳಿಗೆ ಸಂಗಾಪೂರ ಮತ್ತು ಆನೇಗೊಂದಿ ಗ್ರಾ.ಪಂ.ಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!