ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಲು ಆಗ್ರಹಿಸಿ ಪ್ರತಿಭಟನೆ: ಶಿವಪ್ಪ ಯಲಬುರ್ಗಿ
ಬೆಳಗಾವಿಯ ಸುವರ್ಣಸೌಧದಲ್ಲಿ
ಗಂಗಾವತಿ: ಬೆಳಗಾವಿಯಲ್ಲಿ ಜಗದ್ಗುರುಗಳಾದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಜಿಯವರ ನೇತ್ರತ್ವದಲ್ಲಿ ಡಿಸೆಂಬರ್-೧೦ ರಂದು ಸಮಾಜವನ್ನು ೨ಎ ಪ್ರವರ್ಗಕ್ಕೆ ಸೇರಿಸಲು ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಿಗ್ಗೆ ೧೦:೦೦ ಗಂಟೆಗೆ ಸರಕಾರದ ವಿರುದ್ದ ೭ನೇ ಹಂತದ ಹಕ್ಕೊತ್ತಾಯ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಗಂಗಾವತಿ ತಾಲೂಕಿನ ಸುಮಾರು ೩-೪ ಸಾವಿರ ಸಮಾಜಬಾಂಧವರು ಪಾಲ್ಗೊಳ್ಳಬೇಕೆಂದು ಗಂಗಾವತಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಶಿವಪ್ಪ ಯಲಬುರ್ಗಿ ವಕೀಲರು ಪತ್ರಿಕಾಗೋಷ್ಠಿ ನಡೆಸಿ ಕರೆಕೊಟ್ಟರು.
ಈ ಪತ್ರಿಕಾ ಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಪದಾಧಿಕಾರಿಗಳಾದ ಎಸ್. ವೀರೆಶಪ್ಪ ಹಣವಾಳ, ಜಿ. ವೀರೆಶಪ್ಪ ಹಣವಾಳ, ದೇವರಾಜ್ ಕತ್ತಿ, ನಾಗರಾಜ ಬರಗೂರು, ಮಂಜುನಾಥ ಗೂಡ್ಲಾನೂರು, ಮಹೇಶಪ್ಪ ಕೆ.ಎಸ್.ಆರ್.ಟಿ.ಸಿ,. ಸೇರಿದಂತೆ ಇತರರು ಭಾಗವಹಿಸಿದ್ದರು.
Comments are closed.