ಕೇಂದ್ರಿಯ ವಿದ್ಯಾಲಯ ಮಂಜೂರು – ಮುಖಂಡ ಬಸವರಾಜ ಕ್ಯಾವಟರ್ ಸಂತಸ

Get real time updates directly on you device, subscribe now.

ಕೊಪ್ಪಳ: ಕೊಪ್ಪಳ ಲೋಕಸಭಾ ವ್ಯಾಪ್ತಿಯ ಸಿಂಧನೂರು ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಪ್ರಾರಂಭಿಸಲು ಕೇಂದ್ರ ಬಿಜೆಪಿ ಸರ್ಕಾರ ಅನುಮೋದನೆ  ನೀಡಿರುವುದಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕದ ಮೂರು ಹೊಸ ಕೇಂದ್ರೀಯ ವಿದ್ಯಾಲಯಗಳು ಯಾದಗಿರಿ, ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಯಲ್ಲಿ ಸ್ಥಾಪನೆಯಾಗಲಿದೆ.  ಕೊಪ್ಪಳ ಲೋಕಸಭಾ ವ್ಯಾಪ್ತಿಗೆ ಬರುವ  ರಾಯಚೂರು ಜಿಲ್ಲೆಯ  ಸಿಂಧನೂರು ತಾಲೂಕಿನ ಜನರು ಕೇಂದ್ರೀಯ ವಿದ್ಯಾಲಯ ನಮ್ಮ ಭಾಗಕ್ಕೂ ಬೇಕೆಂದು ಹಲವು ದಿನಗಳಿಂದ ಮನವಿ ಮಾಡಿಕೊಂಡಿದ್ದರು. ಈ ಭಾಗದ  ಮಕ್ಕಳು ಉತ್ತಮ ಶಿಕ್ಷಣವಂತಾರಗಬೇಕು ಎಂಬುದು ಅವರ ಮನದಾಸೆಯಾಗಿತ್ತು.

ಇವರೆಲ್ಲರ ಒತ್ತಾಸೆಯ ಭಾಗವಾಗಿ ನಾಲ್ಕೈದು ತಿಂಗಳ ಹಿಂದೆ ನೀಡಿದ್ದ ಮನವಿಯನ್ನು ಪರಿಗಣಿಸಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಿಂಧನೂರು ನಗರದಲ್ಲಿ ಕೇಂದ್ರೀಯ ವಿದ್ಯಾಲಯ  ಶೈಕ್ಷಣಿಕ ಪ್ರಾರಂಭವಾಗಲು ಅನುಮೋದನೆ ನೀಡಿದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರಿಗೂ ಹಾಗೂ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ದೇವೇಂದ್ರ ಪ್ರಧಾನ್  ಮತ್ತು ಕೇಂದ್ರೀಯ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರಿಗೂ ಧನ್ಯವಾದ ತಿಳಿಸುತ್ತೇನೆ.

ಕೇಂದ್ರಿಯ ವಿದ್ಯಾಲಯಗಳಿಂದ ಈ ಭಾಗದ ಸಾಕ್ಷರತೆ ಪ್ರಮಾಣ ಹೆಚ್ಚಳವಾಗಲಿದೆ. ಬಡ- ಮಧ್ಯಮ ವರ್ಗದ ಮಕ್ಕಳ ಗುಣಮಟ್ಟದ ಶಿಕ್ಷಣ ಕಲಿಯುವ ಆಸೆಗೆ ಕೇಂದ್ರಿಯ ವಿದ್ಯಾಲಯಗಳು ಪೂರಕವಾಗಲಿವೆ. ಹೀಗಾಗಿ ಸಿಂಧನೂರಿಗೆ ಕೇಂದ್ರಿಯ ವಿದ್ಯಾಲಯ ಮಂಜೂರು ಮಾಡಬೇಕೆಂಬ ಅಪೇಕ್ಷೆಯೊಂದಿಗೆ ಕೇಂದ್ರ ಸರಕಾರದ ಶಿಕ್ಷಣ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಕೊನೆಗೂ ಜನರ ಒತ್ತಾಸೆಯಂತೆ ಕೇಂದ್ರಿಯ ವಿದ್ಯಾಲಯ ಮಂಜೂರಾಗಿರುವುದು ಸಂತಸ ತಂದಿದೆ ಎಂದು ವೈದ್ಯ ಬಸವರಾಜ ಕ್ಯಾವಟರ್ ಅವರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!