ಅಭಿವೃದ್ಧಿ ನಿಗಮ ಮಂಡಳಿ, ವೃತ್ತ ಸ್ಥಾಪಿಸಲು ಹಾಗೂ ಶ್ರೀಸಹಸ್ರಾರ್ಜುನ ಜಯಂತಿ ಆಚರಿಸಲು ಮನವಿ
ಅಭಿವೃದ್ಧಿ ನಿಗಮ ಮಂಡಳಿ, ವೃತ್ತ ಸ್ಥಾಪಿಸಲು ಹಾಗೂ ಶ್ರೀಸಹಸ್ರಾರ್ಜುನ ಜಯಂತಿ ಸರಕಾರದಿಂದ ಆಚರಣೆ ಮಾಡಲು ಮನವಿ
ಕೊಪ್ಪಳ : ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಅಭಿವೃದ್ಧಿ ಗಾಗಿ ನಿಗಮ ಮಂಡಳಿ ಸ್ಥಾಪಿಸಲಬೇಕು ಹಾಗೂ ಪ್ರತಿ ಜಿಲ್ಲೆಯಲ್ಲಿ ಶ್ರೀ ಸಹಸ್ರಾರ್ಜುನ ವೃತ್ತ ಸ್ಥಾಪಿಸುವುದರ ಜೊತೆಗೆ ಸರಕಾರದಿಂದಲೇ ಶ್ರೀ ಸಹಸ್ರಾರ್ಜುನ ಜಯಂತಿ ಆಚರಿಸಬೇಕೆಂದು
ಭಾಗ್ಯನಗರದ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ (ರಿ)ದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ಭವನದಲ್ಲಿ ನಾಗರಾಜಸಾ ಪವಾರ ಹಾಗೂ ತರುಣ ಸಂಘದ ಅಧ್ಯಕ್ಷರಾದ ಪರಶುರಾಮ ಪವಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ವಂಶದವರಾಗಿದ್ದು (ಸರ್ಕಾರಿ ಗೆಜೆಟಲಿ ಪಟೆಗಾರ್ ಅಂತಾ ಇದೆ ಕರ್ನಾಟಕದಲ್ಲಿ ಅಂದಾಜು 16 ಲಕ್ಷ ಜನರಿದ್ದು ಶೇಕಡಾ 85% ಜನ ಕಡುಬಡವರಾಗಿದ್ದಾರೆ. ಸೋಡಾ, ಕೂಲ್ಡಿಂಗ್ಸ್, ಸಾವಜಿ ಹೋಟೆಲ್, ವಾಚ್ ರಿಪೇರಿ, ಅಟೋ, ಗ್ಯಾರೇಜ್, ಟೇಲ, ಬೀದಿಬದಿ ವ್ಯಾಪಾರ,ಮೋಬೈಲ ರಿಪೇರಿ, ಕಿರಾಣಿ ಹಲವಾರು ಚಿಕ್ಕ-ಪುಟ್ಟ ಕಸುಬು ದಿನಗೂಲಿ ಮಾಡುವ ಜನರಾಗಿದ್ದು ಕೆಲವೇ ಕೆಲವು ಬೆರಳಣಿಕೆ ಜನ ಶ್ರೀಮಂತರಿದ್ದಾರೆ. ಈ ರೀತಿ ಬದಕುತ್ತಿರುವ ಸಮುದಾಯಕ್ಕೆ ಅಭಿವೃದ್ಧಿಯ ಹಸ್ತವನ್ನು ನೀಡಬೇಕು ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ, ಆ ಮಂಡಳಿಯಿಂದ ಮುಂದಿನ ಪೀಳಿಗೆಗೆ ಆಸರೆಯಾಗಬೇಕು ಹಾಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಹಾಗೂ ರಾಜಕೀಯ ರಂಗದಲ್ಲಿಯೂ ಸಮುದಾಯ ಹಿಂದುಳಿದಿದ್ದು
ಪ್ರತಿಯೊಂದು ಜಿಲ್ಲೆಯ ಸಮುದಾಯ ಹೆಚ್ಚಿರುವ ಊರಲ್ಲಿ ಒಂದು ರಸ್ತೆಗೆ ಶ್ರೀಸಹಸ್ರಾರ್ಜುನರ ಹೆಸರು ಇಡಲು ಮತ್ತು ಸರ್ಕಾರದಿಂದ ಶ್ರೀಸಹಸ್ರಾರ್ಜುನ ಜಯಂತಿ ಯನ್ನು ಆಚರಿಸುವ ಆದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕೊಪ್ಪಳದ ಸಮಾಜದ ವತಿಯಿಂದಲೂ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ
ನಾಗರಾಜ ಡಿ ಪವಾರ್ ಎಚ್ ಕೆ ನಿರಂಜನ್ , ಸುನಿಲ್ ಮೇಘರಾಜ್, ರಾಘು ಕಠಾರೆ ಪರಶುರಾಮ್ ಪವಾರ್ ಲಕ್ಷ್ಮಣಸಾ ನಿರಂಜನ್ ಸಂತೋಷ್ ಪವಾರ್ ಶ್ರೀಕಾಂತ್ ದಲಬಂಜನ್ , ಡಿಕೂಸಾ ಮೇಘರಾಜ್ ಮೋಹನ್ ಪವಾರ್ ಲಕ್ಷ್ಮಣ್ ಸಾ ನಿರಂಜನ್ ನಾಗರಾಜ್ ಮೋಹನ್ ಪವಾರ್ ಶಂಕರ್ ಪವಾರ್ ಜವಾಹರ್ಲಾಲಸಾ ಅಂಟಾಳಮರದ, ಕುಮಾರಿ ಸರೋಜಾ ಬಾಕಳೆ ತಮ್ಮಣ್ಣಸಾ ಕಾಟವಾ ಮೋಹನ್ ಸಾ ಶಿದ್ಲಿಂಗ ಲಕ್ಷ್ಮಣ್ ಸಾ, ರಾಜು ಮಗಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು
Comments are closed.