ಗಂಗಾವತಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶಿವಶಂಕರ್‌ ಕಲ್ಮಠ ಆಯ್ಕೆ

0

Get real time updates directly on you device, subscribe now.

:

ಗಂಗಾವತಿ: 17 ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ಗಂಗಾವತಿ ತಾಲೂಕು ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವ ಶಂಕರ್ ಕಲ್ಮಠ, ರಾಜ್ಯ ಪರಿಷತ್ ಗೆ ಉಮೇಶ್.ಎಸ್ ಹಾಗೂ ಖಜಾಂಚಿ ಯಾಗಿ ಶ್ರೀನಿವಾಸ್‌ ವೆಂಕಟರಾವ್ ಆಯ್ಕೆಯಾದರು. ಶನಿವಾರ ಸಂಘದ ಕಚೇರಿ ಆವರಣದಲ್ಲಿ ಅಧ್ಯಕ್ಷ ಮತ್ತು ರಾಜ್ಯ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 22 ಮತ ಪಡೆದು ಶಿವಶಂಕರ್ ಕಲ್ಮಠ, ವಿಜಯಶಾಲಿಯಾದರು. ರಾಜ್ಯ ಪರಿಷತ್‌ಗೆ ನಡೆದ ಚುನಾವ ಣೆಯಲ್ಲಿ ಉಮೇಶ್.ಎಸ್ 18 ಮತ ಪಡೆದು ಆಯ್ಕೆಯಾದರು. ಇದೇ ವೇಳೆಯಲ್ಲಿ ಖಜಾಂಚಿಯಾಗಿ ಶ್ರೀನಿವಾಸ್ ವೆಂಕಟರಾವ್ -19 ಮತ ಪಡೆದು ಆಯ್ಕೆಯಾದರು. ನಂತರ ನೂತನ ಅಧ್ಯಕ್ಷ ಶಿವಶಂಕರ್
ಕಲ್ಮಠ ಮಾತನಾಡಿ ನಾನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗುವದಕ್ಕೆ ಪ್ರತ್ಯಕ್ಷವಾಗಿ ಗಂಗಾವತಿ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಧಿಕಾರಿ ಡಾ.ಈಶ್ವರ ಶಿ.ಸವಡಿ ಅವರ ಸಹಕಾರ, ಮಾರ್ಗದರ್ಶನ ನನ್ನ ಗೆಲುವಿಗೆ ಕಾರಣವಾಗಿದೆ. ನನ್ನ ಗೆಲುವಿಗೆ ಹಗಲಿರಳು ಡಾ. ಈಶ್ವರ ಸವಡಿ ಅವರ ಕೃಪಾ ಆಶೀರ್ವಾದವಿದ್ದು, ಅವರ ಪರಿಶ್ರಮ ಅವರ ಚಾಣಾಕ್ಷತನದಿಂದ ನಾನು ಈ ಸರ್ಕಾರಿ ನೌಕರರ ಚುನಾವಣೆಯ ಅಧ್ಯಕ್ಷ ಸ್ಥಾನದಲ್ಲಿ ಗೆದ್ದು ಬಂದಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ, ಮತ್ತು ಮುಂದಿನ ಅಧಿಕಾರ ಅವಧಿಯಲ್ಲಿ ಅವರ ಮಾರ್ಗದರ್ಶನದಿಂದ ಸರಕಾರಿ ನೌಕರರಿಗೆ ಸಿಗಬೇಕಾದ ಹಲವು ಸವಲತ್ತುಗಳನ್ನು ಪಡೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ನನ್ನ ಗೆಲುವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ವೈದ್ಯಕೀಯ ವೃಂದಕ್ಕೆ, ಸರ್ಕಾರಿ ನೌಕರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವೈದ್ಯಕೀಯ ಹಾಗೂ ಸರ್ಕಾರ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಕೆಲಸವನ್ನು ಮಾಡುತ್ತೇನೆ. ಸಂಘದ ಅಭಿವೃದ್ಧಿಗೆ ನಿಮ್ಮೆಲ್ಲರ ಸಲಹಾ ಸೂಚನೆ ಮೇರೆಗೆ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಚುನಾವಣೆ ಅಧಿಕಾರಿಯಾಗಿ ಚಂದ್ರ ಶೇಖರ್ ಅಡಿವಿ ಹಾಲ್, ಸಹಾಯಕ ಚುನಾವಣೆ ಅಧಿಕಾರಿ ಪಂಪಣ್ಣ ಬಾರಿಕಾಯಿ, ಕಾರ್ಯನಿರ್ವ ಹಿಸಿದರು. ಇದೇ ಸಂದರ್ಭ ದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!