ಚಪ್ಪಲಿ ಅಂಗಡಿಗೆ ಕನ್ನ : ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಕೊಪ್ಪಳ.ಅ.02; ನಗರದ ಜವಾಹರ ರಸ್ತೆ ಬಳಿಯ ದುರ್ಗಾದೇವಿ ಗುಡಿ ಹತ್ತಿರದ ಬರ್ಕತ್ ಮುಬಾರಕ್ ಫುಟ್ ವೇರ (ಚಪ್ಪಲಿ ಅಂಗಡಿ) ಮಂಗಳವಾರ ತಡರಾತ್ರಿ 3:00 ಗಂಟೆ ಸುಮಾರಿಗೆ ಕಳ್ಳತನವಾದ ಘಟನೆ ಜರುಗಿದೆ.
ಈ ಚಪ್ಪಲಿ ಅಂಗಡಿ ಸರ್ದಾರ್ ಗಲ್ಲಿಯ ನಿವಾಸಿ ಮರ್ದಾನ್ ಅಲಿ ಕಳ್ಳಿಮನಿ ಅವರಿಗೆ ಸೇರಿದ್ದು
ಸುಮಾರು ೩೦ಸಾವಿರ ರೂಪಾಯಿ ನಗದು ಹಣ ಹಾಗೂ 950 ರೂಪಾಯಿ ಬೆಲೆಯ ಎರಡು ಜೊತೆ ಚಪ್ಪಲಿಗಳು ಕಳ್ಳತನವಾಗಿವೆ ಎನ್ನಲಾಗಿದೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು
ಚಪ್ಪಲಿ ಅಂಗಡಿ ಕಳ್ಳತನ ಮಾಡಿದ ಚಾಲಾಕಿ ಕಳ್ಳರು ಸುಮಾರು 18 ವರ್ಷದ ಒಳಗಿನ ಯುವಕರು ಸಿಸಿಟಿವಿ ಪುಟೇಜ್ ಕಾಣುತ್ತಿದೆ.
ಕಳೆದ ಒಂದು ವಾರದ ಹಿಂದೆ ಅದೇ ಸ್ಥಳದಲ್ಲಿ ಸ್ವಾಮಿ ಪಾನ್ ಶಾಪ ಕಳ್ಳತನವಾಗಿ ಸಾಕಷ್ಟು ನಗದು ಹಣ ಕಳ್ಳತನವಾಗಿತ್ತು.
Comments are closed.