ಅಂಬೇಡ್ಕರ್ ಎಲ್ಲ ಕಾಲಕ್ಕೂ ಎಲ್ಲ ವರ್ಗಕ್ಕೂ ಪ್ರಸ್ತುತ-ಟಿ.ಎಸ್. ಶಂಕರಯ್ಯ
ಕೊಪ್ಪಳ : ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಶುಕ್ರವಾರದಂದು ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದಿಂದ ಆಚರಿಸಲಾಯಿತು. ಡಾ . ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದೀಪ ಬೆಳಗುವುರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಂಬೇಡ್ಕರ್ ಅವರೊಬ್ಬರು ಶಕ್ತಿ. ಅವರು ಭೂಮಿ ಮೇಲಿನ ಎಲ್ಲ ಮನುಷ್ಯರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಶ್ರಮಿಸಿದವರು ಬಾಬಾಸಾಹೇಬ ಅಂಬೇಡ್ಕರ್ ಅವರು. ಅವರು ಎಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದವರಿಗಷ್ಟೇ ಅಲ್ಲದೇ, ಇತ ಹಿಂದುಳಿದ ವರ್ಗ ಹಾಗೂ ಮಹಿಳಾ, ವಿಕಲಚೇತನ, ಮಾಜಿ ಸೈನಿಕ, ಇದರ ಮುಂದುವರಿದ ಭಾಗವಾಗಿಯೇ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಶೇಕಡಾ ಹತ್ತರಷ್ಟು ಮೀಸಲಾತಿ ದೊರೆತಿರುವುದು ಬಾಬಾಸಾಹೇಬ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಆಶಯವಾಗಿದೆ. ಇದನ್ನು ಅರಿಯದ ಇತಿಹಾಸವನ್ನು ತಿಳಿಯದವರು ಅವರನ್ನು ಜಾತಿಗೆ ಸೀಮಿತ ಗೊಳಿಸುತ್ತಿದ್ದಾರೆ. ಇತಿಹಾಸವನ್ನು ಅರಿತರೆ, ಓದಿದಾಗ ಮಾತ್ರ ಬಾಬಾಸಾಹೇಬ ಡಾ ಬಿ.ಆರ್ ಅಂಬೇಡ್ಕರ್ ಅವರು ತೆಗೆದುಕೊಂಡ ನಿರ್ಧಾರಗಳು, ಸಾಮಾಜಿಕ ನ್ಯಾಯದ ಪರಿಕಲ್ಪನೆ ಅರ್ಥವಾಗುತ್ತದೆ ಎಂದು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ, ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಮಾತನಾಡಿದರು.
ಕಾನೂನು ತಜ್ಞರಾಗಿ, ಕ್ರಿಯಾಶೀಲ ಸಮಾಜಿಕ ಕಾರ್ಯಕರ್ತನಾಗಿ ಖ್ಯಾತ ಅರ್ಥಶಾಸ್ತ್ರಜ್ಞನಾಗಿ, ಸಮಾಜಶಾಸ್ತ್ರಜ್ಞನಾಗಿ ಮಹಾನ್ ಮಾನವತಾವಾದಿಯಾಗಿ ಅಂಬೇಡ್ಕರ್ ಅವರ ಹಾಕಿಕೊಟ್ಟ ಮಾರ್ಗ ಪ್ರಸ್ತುತವಾಗುತ್ತಲೇ ಇರುತ್ತದೆ. ಎಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ ಪ್ರಭುರಾಜನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ ನೌಕರರ ಸಂಘದ ನಿರ್ದೇಶಕ ಪ್ರಾಣೇಶ ಪೂಜಾರ ಮಾತನಾಡಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಚಲವಾದಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಮಹಾವೀರ, ನಾಗರಾಜನಾಯಕ ಡಿ.ಡೊಳ್ಳಿನ, ಹೇಮಣ್ಣ ಕವಲೂರ, ಬಾಳಪ್ಪ ಕಾಳೆ, ಮಂಜುನಾಥ ಬುಲ್ಟಿ, ಶಿವಪ್ಪ ಜೋಗಿ ಉಪಸ್ಥಿತರಿದ್ದರು. ಗವಿಸಿದ್ಧಪ್ಪ ಮುತ್ತಾಳ ನಿರೂಪಿಸಿದರು.
Comments are closed.