ಕೊಪ್ಪಳದ ಭಾಗ್ಯನಗರದಲ್ಲಿ ರವಿವಾರ ಸಂವಿಧಾನ ಅರಿವು ಅಭಿಯಾನ
ಕೊಪ್ಪಳ : ಭಾಗ್ಯನಗರದ ಪಟ್ಟಣ ಪಂಚಾಯತ್ ಹಿಂದಿರುವ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಭ್ರಾತೃತ್ವ ಸಮಿತಿ, ಪ್ರಕ್ರಿಯೆ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕ ಎಸ್.ಎ.ಗಫಾರ್ ಹಾಗೂ ತುಕಾರಾಮ್ ಬಿ. ಪಾತ್ರೋಟಿ ಜಂಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಅರಿವು ಅಭಿಯಾನ ಕಾರ್ಯಕ್ರಮವನ್ನು ರವಿವಾರ ಬೆಳ್ಳಿಗೆ 10.30 ಕ್ಕೆ ಕಟ್ಟಡ ಕಾರ್ಮಿಕರು,ಯುವಕರಿಗೆ ಹಮ್ಮಿಕೊಳ್ಳಲಾಗಿದೆ,
ಮಧ್ಯಾಹ್ನ 2 ಗಂಟೆಗೆ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಮಹಿಳಾ ಸದಸ್ಯರಿಗೆ ಸಂವಿಧಾನ ಅರಿವು ಅಭಿಯಾನ ಕಾರ್ಯಕ್ರಮ ನಡೆಯಲಿದೆ, ಸಂವಿಧಾನ ಕುರಿತು ಹೈಕೋರ್ಟ್ ನ್ಯಾಯವಾದಿಗಳಾದ ಮಂಜುನಾಥ್ ಬಾಗೇಪಲ್ಲಿ ಸರಳವಾಗಿ ತಿಳಿಸಿಕೊಡಲಿದ್ದಾರೆ, ಸಂವಿಧಾನ ಕುರಿತು ತಿಳಿದುಕೊಳ್ಳವ ಆಸಕ್ತಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ.ಪಾತ್ರೋಟಿ, ಮುನಿರಾಬಾದ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಹಾಂಗೀರ್ ಮುಂತಾದವರು ಕೋರಿದ್ದಾರೆ.
Comments are closed.