ನಾನು ಮೊದಲ ಬಾರಿಗೆ ಯಲಬುರ್ಗಾ ಶಾಸಕನಾದಾಗ ಕೇವಲ 7 ಹೈಸ್ಕೂಲ್, 4 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 80 ಕ್ಕಿಂತ ಹೆಚ್ಚು ಹಳ್ಳಿಗಳಿಗೆ ನಮ್ಮ ತಾಲ್ಲೂಕಿನಲ್ಲಿ ಕರೆಂಟ್ ಇರಲಿಲ್ಲ. ನಾನು ಬಹಳಷ್ಟು ಹಳ್ಳಿಗಳಿಗೆ ಅಂದು ನಡೆದುಕೊಂಡು ಹೋಗಿದ್ದೆನೆ. ಆದರೆ ಈಗ ಹಾಗಿಲ್ಲ ನಮ್ಮ ತಾಲೂಕಿನಲ್ಲಿ 17 ವಸತಿ ಶಾಲೆಗಳಿವೆ. ಯಲಬುರ್ಗಾ ಮತ್ತು ಕುಕನೂರಿನಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳಾಗಿವೆ. ರಾಷ್ಟ್ರೀಯ ಹೆದ್ದಾರಿ, ರೈಲು, ಕೆರೆತುಂಬಿಸುವ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ತಾಲ್ಲೂಕಿನಲ್ಲಿ ಆಗಿದೆ. ಅದರ ಸವಿವರವಾದ ಮಾಹಿತಿಯನ್ನು ಯಲಬುರ್ಗಾ ಅಭಿವೃದ್ಧಿ ಸುವರ್ಣಯುಗ ಪುಸ್ತಕದಲ್ಲಿದ್ದು, ಎಲ್ಲರೂ ಈ ಪುಸ್ತಕವನ್ನು ಓದಬೇಕೆಂದು ಹೇಳಿದರು.
ಯಲಬುರ್ಗಾ ತಾಲ್ಲೂಕು ಮತ್ತು ಇಲ್ಲಿಯ ಜನರನ್ನು ಪ್ರೀತಿಸುತ್ತೆನೆ ಅದಕ್ಕಾಗಿ ನಾನು ರಾಜಕೀಯದಲ್ಲಿ ಇದ್ದೆನೆ. ನಾನು ನೇರವಾಗಿ ಮತ್ತು ಸತ್ಯವಾಗಿ ಮಾತನಾಡುತ್ತೆನೆ. ಜನ ನನ್ನ ಮಾಲೀಕರು ನಾನು ಜನ ಸೇವಕ ಜನರ ಸಹಕಾರ ಮತ್ತು ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಹೇಳಿದರು.
ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರು ಹಾಗೂ ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಅವರು ಯಲಬುರ್ಗಾ-ಅಭಿವೃದ್ಧಿ ಸುವರ್ಣಯುಗ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಈ ಪುಸ್ತಕವನ್ನು ಅಭಿಮಾನದಿಂದ ಬಿಡುಗಡೆ ಮಾಡಿದ್ದೆನೆ. ರಾಯರೆಡ್ಡಿ ಕರ್ನಾಟಕದ ದೊಡ್ಡ ಆಸ್ತಿ. ಯಲಬುರ್ಗಾ ಸುವರ್ಣಯುಗ ಮಾಡಿದಂತೆ ಕರ್ನಾಟಕವನ್ನು ಮಾಡಬೇಕು. ಅವರು ಯಾವುದೇ ಜಾತಿ ಧರ್ಮದ ಆಧಾರದ ಮೇಲೆ ಕೆಲಸ ಮಾಡಿದವರಲ್ಲ. ವಿಧಾನಸಭೆಗೆ 6 ಸಲ ಗೆದ್ದಿದ್ದಾರೆ ಇದು ಸಾಮಾನ್ಯವಲ್ಲ ಬಹಳ ಕಷ್ಟದ ಕೆಲಸ. ಇಂದಿನ ಚುನಾವಣೆಗಳು ಹಣ, ತೋಳ್ಬಲ, ಜಾತಿ, ಧರ್ಮದ ಮೇಲೆ ನಡೆಯುತ್ತಿವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದರು.
ನAಜುಡಪ್ಪ ವರದಿ ಪ್ರಕಾರ ಯಲಬುರ್ಗಾ ತಾಲ್ಲೂಕು ಅತಿ ಹಿಂದುಳಿದಿದೆ ಎಂದು ವರದಿ ನೀಡಿದ್ದರು. ಬದಲಾವಣೆ ಆಗಬೇಕು. ಎಲ್ಲರೂ ನಮ್ಮವರೆ ಅನ್ನಬೇಕು. ಬಸವಣ್ಣನವರ ವಚನಗಳನ್ನು ಎಲ್ಲರೂ ಹೇಳಬಹುದು ಆದರೆ ಅದನ್ನು ತಮ್ಮ ನಿಜ ಜೀವನದಲ್ಲಿ ಜಾರಿಗೆ ತರುವುದು ಕಷ್ಟ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ನಿವೃತ್ತ ಡಿ.ಜಿ.ಪಿ ಶಂಕರ ಬಿದರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಯರೆಡ್ಟಿ ಇತರರಿಗೆ ಮಾದರಿ ಶಾಸಕರಾಗಿದ್ದಾರೆ. ಅವರು ಶಿಸ್ತು, ಪ್ರಾಮಾಣಿಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಗದಗ- ವಾಡಿ ಮತ್ತು ಮುನಿರಾಬಾದ ಗದ್ವಾಲ್ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಈ ತಾಲ್ಲೂಕಿನಲ್ಲಿ ಮಾಡಿದ್ದಾರೆ. ನಿಜವಾದ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಅವರು ಎಂದಿಗೂ ಜಾತೀಯತೆ ಮಾಡಿದವರಲ.್ಲ ನಮಗೆ ಪ್ರೀತಿ, ಭಾತೃತ್ವ. ಸೌಹಾರ್ದತೆ ಮತ್ತು ಶಾಂತಿಯನ್ನು ಹರಡಿಸುವ ಇಂಥ ನಾಯಕರು ಬೇಕಾಗಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ರಾಜ್ಯದ ಎಲ್ಲಾ ಶಾಸಕರಲ್ಲಿ ರಾಯರೆಡ್ಟಿ ಅವರು ಮಾದರಿ ಶಾಸಕರಾಗಿದ್ದಾರೆ. ಅವರು ಎಂಥ ಕೆಲಸಗಳಿರಲಿ ಮುಖ್ಯಮಂತ್ರಿಗಳಿಗೆ ಮನ ಒಲಿಸಿಯಾದರು ಕೆಲಸ ತರುತ್ತಾರೆ. ಯಲಬುರ್ಗಾ ಜೊತೆಗೆ ಕೊಪ್ಪಳ ಜಿಲ್ಲೆಯು ಬೆಳೆಯಬೇಕು. ಅಂದಾಗ ಎಲ್ಲರೂ ಬೆಳೆಯುತ್ತೆವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಬೆಳಗಾವಿ ವಿಭಾಗದ ಭೂದಾಖಲೆಗಳ ಜಂಟಿ ನಿರ್ದೇಶಕಿ ನಜ್ಮಾ ಫೀರಜಾದೆ, ಯಲಬುರ್ಗಾ ತಹಶೀಲ್ದಾರ ಬಸವರಾಜ ಚನ್ನಳ್ಳಿ, ಕುಕನೂರು ತಹಶೀಲ್ದಾರ ಪ್ರಾಣೇಶ ಎಲ್., ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಯಲಬುರ್ಗಾ-ಕುಕನೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್, ಗಣ್ಯರಾದ ಶ್ರೀನಿವಾಸರೆಡ್ಡಿ, ಪಟ್ಟಣ ಪಂಚಾಯತ್ ಸದ್ಯಸರು, ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರೆ ಹಲವಾರು ಜನರು ಉಪಸ್ಥಿತರಿದ್ದರು.
Comments are closed.