ಹೆಚ್.ಐ.ವಿ., ಏಡ್ಸ್ ಕುರಿತು ಜಾಗೃತಿ ಅತ್ಯವಶ್ಯಕ: ಮಹಾತೇಂಶ ದರಗದ್

Get real time updates directly on you device, subscribe now.

: ಹೆಚ್.ಐ.ವಿ., ಏಡ್ಸ್ ನಿಯಂತ್ರಣಕ್ಕೆ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧಿಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಗಳಾದ ಮಹಾತೇಂಶ ಎಸ್ ದರಗದ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಏಡ್ಸ್ ನಿಯಂತ್ರಣ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕ ಆರೋಗ್ಯ ಅಧಿಕಾರಿಗಳ ಕಛೇರಿ, ಸ್ನೇಹ ಮಹಿಳಾ ಸಂಘ, ಚೈತನ್ಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸುರಕ್ಷ ಸಿ.ಎಸ್.ಸಿ, ಹೊಸ ಬೆಳಕು ಸಂಪರ್ಕ ಕಾರ್ಯಕರ್ತರ ಯೋಜನೆ, ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಙಾನ ಹಾಗೂ ವಿವಿಧ ಸರ್ಕಾರೆತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಐ.ವಿ., ಏಡ್ಸ್ ಅರಿವಿನ ಕೊರತೆಯಿಂದ ಯುವಕರಲ್ಲಿ ರೋಗ ಹೆಚ್ಚಾಗಲು ಕಾರಣವಾಗಿದೆ. ನಮ್ಮ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 1ರಂದು “ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ” ಕಾರ್ಯಕ್ರಮ ಆಚರಿಸಲಾಗುತ್ತದೆ. ಆದರೂ ಕೂಡ ಅರಿವಿನ ಕೊರತೆಯಿಂದ ಏಡ್ಸ್ ರೋಗಕ್ಕೆ ತುತ್ತಾಗುವವರು ಹೆಚ್ಚಾಗಿದ್ದಾರೆ. ಮದುವೆಯಾಗುವ ವರೆಗೂ ಯುವಕ, ಯುವತಿಯರು ಬ್ರಹ್ಮಚಾರ್ಯ ಮಾಡಬೇಕು. ಮದ್ದಿಲ್ಲದ ಮಾರಕರೋಗ ಇದಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಸಮಸ್ಯಾತ್ಮಕ ಗುಂಪಿನವರಿಗೆ ಅರಿವು ಮುಡಿಸಿ ರೋಗಗಳ ಸಂಖ್ಯೆ ಸೊನ್ನೆಗೆ ತರಬೇಕಾಗಿದೆ. ನಮ್ಮ ನಮ್ಮ ಕುಟುಂಬಗಳನ್ನ ರಕ್ಷಣೆ ಮಾಡಲು ಪ್ರತಿಯೊಬ್ಬರು ಮೌನ ಮುರಿದು ಮಾತನಾಡಬೇಕು. ಹೆಚ್.ಐ.ವಿ ಹರಡುವ ಮಾರ್ಗಗಳ ಬಗ್ಗೆ ಎಲ್ಲಾ ಯುವಕರು ತಿಳಿದುಕೊಂಡು ಇತರರಿಗೂ ಜಾಗೃತಿ ಮೂಡಿಸಿ ಏಡ್ಸ್ ಮುಕ್ತ ಕೊಪ್ಪಳ ಜಿಲ್ಲೆ ಮಾಡಲು ಸಹಕರಿಸಬೇಕು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಏಡ್ಸ ನಿಯಂತ್ರಣಧಿಕಾರಿ ಡಾ.ಶಶಿದರ್ ಎ ಅವರು ಜಿಲ್ಲೆಯಲ್ಲಿ ಹೆಚ್.ಐ.ವಿ./ಏಡ್ಸ್ ನಿಯಂತ್ರಣದ ಸ್ಥಿತಿಗತಿ ಕುರಿತು ತಿಳಿಸಿ, 14 ಐ.ಸಿ.ಟಿ.ಸಿ ಕೇಂದ್ರಗಳು, 2 ಎ.ಆರ್.ಟಿ ಕೇಂದ್ರಗಳು ಕೆಲಸ ನಿರ್ವಹಿಸುತಿದ್ದು, ಎಲ್ಲಾ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ವೈಧ್ಯಾಧಿಕಾರಿಗಳು ವiತ್ತು ಇತರ ಸಿಬ್ಬಂದಿಗಳು ಈ ಕಾಯಿಲೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವುದರ ಜೊತೆಗೆ ಅನುಸರಣೆ ಮಾಡುತ್ತಿದ್ದರೆ, ಏಡ್ಸ್ ರೋಗ ತಡೆಗಟ್ಟಲು ಜಿಲ್ಲೆಯಲ್ಲಿ ವಿವಿಧ ರೀತಿಯ ಐಇಸಿ ಚಟುವಟುಕೆಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತದೆ. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, ಕಾಲೇಜು ವಿದ್ಯಾರ್ಥಿಗಳಿಗೆ ಮ್ಯಾರಥ್ಯನ್, ಕಬ್ಬಡಿ ಪಂದ್ಯಾವಳಿ, ಸೈಕಲ್ ಜಾಥ, ರಂಗೋಲಿ ಸ್ಪರ್ಧೆ ಪೋಸ್ಟರ್ ಮೇಕಿಂಗ್ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. 2017 ಏಡ್ಸ್ ನಿಯಂತ್ರಣ ತಡೆಗಟ್ಟುವಲ್ಲಿ ಕಾಯ್ದೆ ಪ್ರಕಾರ ಎಚ್..ವಿ ರೋಗಿಗಳಿಗೆ ಸರ್ಕಾರದ ಯಾವುದೆ ಸೌಲ್ಯಭ್ಯ ನೀಡುವಲ್ಲಿ ತಾರತಾಮ್ಮ ಮಾಡಬಾರದು. ಒಂದು ವೇಳೆ ತಾರತಾಮ್ಮ ಮಾಡಿದರೆ ಕಾನೂನು ಪ್ರಕಾರ ದಂಡ ಮತ್ತು ಜೈಲು ಶಿಕ್ಷೆವಿಧಿಸಲಾಗುತ್ತದೆ ಎಂದರು.
“ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ. ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಘೋಷ್ಯ ವಾಕ್ಯದೊಂದಿಗೆ ಈ ವರ್ಷದ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
*ಸನ್ಮಾನ ಹಾಗೂ ರಕ್ತದಾನ ಶಿಬಿರ:* ಹೆಚ್.ಐ.ವಿ./ಏಡ್ಸ್ ತಡೆಗಟ್ಟುವ ಕಾರ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಅಧಿಕಾರಿ, ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು. ವಿಶ್ವ ಏಡ್ಸ್ ದಿನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸಮುದಾಯ ಆರೋಗ್ಯ ಅಧಿಕಾರಿಗಳು ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಂಗಾವತಿಯ ಅಂಜನಾದ್ರಿ ರಕ್ತ ಭಂಡಾರ ಸಂಸ್ಥೆಯವರು ಶಿಬಿರವನ್ನು ನಡೆಸಿದ್ದು, ಈ ಶಿಬಿರದಲ್ಲಿ ಒಟ್ಟು 22 ರಕ್ತ ಸಂಗ್ರಹಣೆಯಾಗಿರುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಪ್ರಕಾಶ, ಗವಿಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಮಾರೆಗೌಡ, ಪ್ರಾಂಶುಪಾಲರಾದ ಡಾ ಕರಿಬಸವೇಶ್ವರ, ಆರೋಗ್ಯ ಇಲಾಖೆ ಯಲಬುರ್ಗಾ ತಾಲ್ಲೂಕಾ ಅಧಿಕಾರಿ ಡಾ.ಅಮರೇಶ, ಡಾ.ರಚನ ಸೇರಿದಂತೆ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಿಬ್ಬಂದಿಗಳು ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಸಿಬ್ಬಂದಿಗಳು, ಆಪ್ತ ಸಮಾಲೋಚಕರು, ಸಮುದಾಯ ಆರೋಗ್ಯ ಅಧಿಕಾರಿಗಳು, ಎನ್.ಎಸ್.ಎಸ್/ಎನ್.ಸಿ.ಸಿ ಅಧಿಕಾರಿಗಳು, ಸಹ ಉಪಾನ್ಯಾಸಕರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಸರ್ಕಾರೆತರ ಸಂಘ ಸಂಸ್ಥೆಯ ಪದಾಧಿಕರಿಗಳು ಉಪಸ್ಥಿತರಿದ್ದರು.
*ಜನ ಜಾಗೃತಿ ಜಾಥಾ ಮತ್ತು ಮಹಿಳಾ ವಿಶೇಷ ದ್ವಿಚಕ್ರ ವಾಹನ ರ‍್ಯಾಲಿ:* ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಏಡ್ಸ ನಿಯಂತ್ರಣಧಿಕಾರಿ ಡಾ.ಶಶಿದರ್ ಎ., ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಪ್ರಕಾಶ, ಕೊಪ್ಪಳ ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ.ರಾಮಾಂಜನೇಯ ಹಾಗೂ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಕರಿಬಸವೇಶ್ವರ ಅವರು ಸೇರಿ ಚಾಲನೆ ನೀಡಿದರು. ಜಾಗೃತಿ ಜಾಥವು ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಿಂದ ಆರಂಭಗೊಂಡು, ಅಲ್ಲಿಂದ ಗಡಿಯಾರ ಕಂಬದ ಮಾರ್ಗವಾಗಿ ಜವಹಾರ ರಸ್ತೆ ಮುಖಾಂತರ ಅಶೋಕ ಸರ್ಕಲ್ ನಿಂದ ಗಂಜ್ ಸರ್ಕಲ್‌ನ ಮೂಲಕ ಪುನಃ ಗವಿಸಿದ್ದೇಶ್ವರ ಮಹಾವಿದ್ಯಾಲಯದ ವರೆಗೆ ನಡೆಯಿತು.
ಮಹಿಳಾ ವಿಶೇಷ ದ್ವಿಚಕ್ರ ವಾಹನ ರ‍್ಯಾಲಿಗೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!