Sign in
Sign in
Recover your password.
A password will be e-mailed to you.
ಶ್ರೀ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ : .
ಕೊಪ್ಪಳ : ನಗರಸಭೆಯ 11ನೇ ವಾರ್ಡಿನ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ರಾಜಶೇಖರಗೌಡ ಆಡೂರ ಹಾಗೂ ಬ್ಯಾಂಕಿನ ನಿರ್ದೇಶಕರಾದ ಬಸವರಾಜ್ ಶಹಾಪುರ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿದ್ದರಿಂದ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದಿಂದ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ ಮೂರನೇ ಬಾರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ.
ಕಾರ್ಯಕ್ರಮ ಅಧ್ಯಕ್ಷತೆ ಯನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಎಚ್ ಜೋಶಿ ವಹಿಸಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ವಿಶ್ವನಾಥ ಅಗಡಿ, ಬಸವರಾಜ್ ಶಹಪೂರು, ರಾಜೇಂದ್ರ ಕುಮಾರ ಶೆಟ್ಟರ್, ಶಿವಕುಮಾರ ಪಾವಲಿ ಶೆಟ್ಟರ್, ಶಿವರಡ್ಡಿ ಭೂಮಕ್ಕನವರ್, ಗವಿಸಿದಪ್ಪ ತಳಕಲ್, ರಮೇಶ ಕವಲೂರು, ನಾಗರಾಜ್ ಅರಕೇರಿ, ಸುಮಂಗಲಾ ಸೋ ಮಲಾಪೂರ, ಸೈಯದಾ ಶೈನಾಜಬೇಗಂ, ಜಯಶ್ರೀ ಬಬಲಿ, ಬ್ಯಾಂಕಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ದೆಕೊಪ್ಪ, ಲೆಕ್ಕಿಗ ಶ್ರೀಮತಿ ವೀರಮ್ಮ ನರಗುಂದ ಅಧಿಕಾರಿ ರಾಘವೇಂದ್ರ ಜಮಖಂಡಿಕರ್, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
Get real time updates directly on you device, subscribe now.
Comments are closed.