WIM   ಗಂಗಾವತಿಯಲ್ಲಿ ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ ರಾಷ್ಟ್ರೀಯ ಅಭಿಯಾನದ ಸಮಾರೋಪ ಸಮಾವೇಶ

Get real time updates directly on you device, subscribe now.

Gangavati :

ವಿಮೆನ್ ಇಂಡಿಯಾ ಮೂವ್ಮೆಂಟ್ ಅಕ್ಟೋಬರ್ 2 ರಿಂದ ಡಿಸೆಂಬರ್ 2 ರ ವರೆಗೆ ಹಮ್ಮಿಕೊಂಡಿದ್ದ ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ ಎಂಬ ಘೋಷಣೆಯಡಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಭಿಯಾನದ ರಾಷ್ಟ್ರೀಯ ಸಮರೋಪ ಸಮಾರಂಭವು ಡಿಸೆಂಬರ್ 2ರಂದು ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿದೆ. ಅಭಿಯಾನದ ಪ್ರಯುಕ್ತ ದೇಶದಾದ್ಯಂತ ವಿವಿಧ ಘೋಷ್ಠಿಗಳು, ಪ್ರತಿಭಟನೆಗಳು,ಜಾಗೃತಿ ಕಾರ್ಯಕ್ರಮಗಳು,ಆನ್ಲೈನ್ ತರಗತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿರೋಧಿಸುವುದು ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಇದೀಗ ಸಮಾರೋಪ ಸಮಾರಂಭದ ಅಂಗವಾಗಿ ಗಂಗಾವತಿಯ ಬೇರೂನಿ ಆಬಾದಿ ಮಸ್ಜಿದ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಷ್ಟ್ರಾಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಉದ್ಘಾಟಿಸಲಿರುವರು. ಜಿಲ್ಲಾಧ್ಯಕ್ಷೆ ಸುಹಾನರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಾದ್ಯಕ್ಷೆ ಫಾತಿಮಾ ನಸೀಮಾ ಸಮಾರೋಪ ಭಾಷಣ ಗೈಯ್ಯಲ್ಲಿರುವರು. ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸಮಿತಿ ಸದಸ್ಯೆ ಸಾದಿಯಾ ಸೈದಾರವರು ಭಾಗವಹಿಸಲಿದ್ದಾರೆ.. ಉಪನ್ಯಾಸಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಮತಿ ಕ್ಯಾಸಂಬಳ್ಳಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.. ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯೆ ಸಮೀನಾ ಕೌಸರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ರಾಜ್ಯ ಕೋಶಾಧಿಕಾರಿ ರಿಹಾನ, ರಾಜ್ಯ ಸಮಿತಿ ಸದಸ್ಯರುಗಳಾದ ಜಬೀನ, ಸಾನಿಯಾ ಹಾಗೂ ರಾಜ್ಯದ ಹಲವು ನಾಯಕಿಯರು ಪಾಲ್ಗೊಳ್ಳಲಿದ್ದಾರೆ ಎಂದು ರಾಷ್ಟ್ರೀಯ ಸಮಿತಿ ಸದಸ್ಯೆ ಸಮೀನಾ ಕೌಸರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!