ಸ್ವಚ್ಛ, ಹಸಿರು ಗ್ರಾಮಗಳ ಉಸಿರಾಗಲಿ: ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

Get real time updates directly on you device, subscribe now.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಾಮನೂರು ದತ್ತು ಗ್ರಾಮ   ಅಡಿಗಲ್ಲು ಸಮಾರಂಭ

ಕೊಪ್ಪಳ:- ಭಾರತ ದೇಶ ಉನ್ನತ ದೇಶವಾಗಬೇಕಾದರೆ ಸ್ವಚ್ಛ, ಹಸಿರು ಗ್ರಾಮಗಳ ಉಸಿರಾಗಬೇಕೆಂದು ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕರೆ ನೀಡಿದರು.

ದಿನಾಂಕ:30-11-2024ರಂದು ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೇಬಗೆರಿ ಗ್ರಾಮ ಪಂಚಾಯತಿಯ ಕಾಮನೂರು ಗ್ರಾಮದಲ್ಲಿ ಜರುಗಿದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ದತ್ತು ಗ್ರಾಮದ ಅಡಿಗಲ್ಲು ಸಮಾರಂಭದ ಉದ್ಘಾಟನೆ ನೇರವೇರಿಸಿ ಆರ್ಶಿವಚನ ನೀಡಿದರು.


ಕೇವಲ ಅನುದಾನದಿಂದ ಗ್ರಾಮ ಅಭಿವೃದ್ದಿ ಆಗುವದಿಲ್ಲ. ನಮ್ಮೂರು ಎನ್ನುವ ಅಭಿಮಾನದಿಂದ ಗ್ರಾಮ ಅಭಿವೃದ್ಧಿ ಆಗುತ್ತದೆ ಎನ್ನುವ ಮನದಾಳದ ಮಾತು ಬಿಚ್ಚಿಟ್ಟರು. ಮದ್ಯ ಪಾನ ಮುಕ್ತ, ಗುಟ್ಕಾ ಮುಕ್ತ ಕಾಮನೂರು ಗ್ರಾಮ ದತ್ತು ಗ್ರಾಮ ಅಯ್ಕೆ ಮಾಡಿಕೊಂಡುರುವದಕ್ಕೆ ಹರ್ಷವ್ಯಕ್ತಪಡಿಸಿದರು.

ಸಂಸದರಾದ ರಾಜಶೇಖರ ಹಿಟ್ನಾಳ ಮಾತನಾಡಿ ದತ್ತು ಗ್ರಾಮಕ್ಕೆ ಅನುದಾನವನ್ನು ಗ್ರಾಮದ ಯುವಕರು ಕಾಮಗಾರಿ ಗುಣಮಟ್ಟ ಅಗುತ್ತಿರುವ ಬಗ್ಗೆ ಮುಂದೆ ನಿಂತು ಕಾಳಜಿವಹಿಸಬೇಕೆಂದರೂ. ಪ್ರತಿ ವಿಧನಸಭಾ ಕ್ಷೇತ್ರಕ್ಕೆ 5 ಗ್ರಾಮಗಳನ್ನು ದತ್ತು ಗ್ರಾಮಗಳನ್ನ ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದರು.

ಗಂಗಾವತಿ ಶಾಸಕರಾದ ಗಾಲಿ ಜನಾರ್ಧನರೆಡ್ಡಿ ಮಾತನಾಡಿ ಗ್ರಾಮದ ಅಭಿವೃದ್ಧಿಯ ಪರ್ವದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ನಂತರ ಸಂಸದರಿಗೆ, ಶಾಸಕರಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ದತ್ತು ತೆಗೆದುಕೊಳ್ಳುವ ಸಾಂಪ್ರದಾಯಿಕ ಪದ್ದತಿ ನೆರವೇರಿಸಿದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಜಿಲ್ಲಾ ಪಂಚಾಯತಿಯ ಮಾನ್ಯ ಯೋಜನಾ ನಿರ್ದೇಶಕರಾದ ಪ್ರಕಾಶ್ ವಿ ಮಾತನಾಡಿ ಯೋಜನೆಯಡಿ ಅನುಷ್ಟಾನಿಸಬಹುದಾದ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಶಾಲಾ ಶೌಚಾಲಯ, ಗ್ರಾಮೀಣ ಗೊದಾಮು, ಗ್ರಾಮೀಣ ಸಂತೆಕಟ್ಟೆ, ಸಿಸಿ ರಸ್ತೆ, ಚರಂಡಿ, ಅಂಗನವಾಡಿ ಕಟ್ಟಡ, ಕಂದಕ ಬದು ನಿರ್ಮಾಣ, NRLM ಶೆಡ್, ತೆಂಗು ಸಸಿ ನೆಡುವ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ದಿಶಾ ಸಮಿತಿ ಸದಸ್ಯರಾದ ದೊಡ್ಡಬಸವ ಬಯ್ಯಾಪುರ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ತಹಶಿಲ್ದಾರ ವಿಠಲ್ ಚೌಗಲಾ, ಗ್ರಾ.ಪಂ ಅಧ್ಯಕ್ಷೆ ದೇವಮ್ಮ ಮಹಾದೇವಪ್ಪ ಕುರಿ, ಉಪಾಧ್ಯಕ್ಷ ಪಾರಮ್ಮ ಭೋವಿ, ಸಹಾಯಕ‌ ನಿರ್ದೇಶಕ(ಗ್ರಾಉ)ಯಂಕಪ್ಪ, ಪಿಎಸ್ ಐ ಅಶೋಕ ಬೆವೂರು, ಗ್ರಾ.ಪಂ ಸದಸ್ಯರು, ತಾಲೂಕ ಮಟ್ಟದ ಅಧಿಕಾರಿಗಳು, ಲೇಬಗೇರಿ ಗ್ರಾಮ ಪಂಚಾಯತಿ ಪಿಡಿಓ ಸಂಗಮೇಶ್ ತೇರಿನ, ಬೆಟಗೇರಿ ಗ್ರಾ.ಪಂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಜಿ.ಪಂ, ತಾ.ಪಂ‌ ಹಾಗು ತಾಲೂಕಿನ ಎಲ್ಲಾ ನರೇಗಾ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು, ಶಾಲಾ ಮಕ್ಕಳು, ಸಂಜೀವಿನಿ ಯೋಜನೆಯ ಮಹಿಳೆಯರು, ಗ್ರಾಮಸ್ಥರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!