ಜನತೆ ಪ್ರೀತಿ ವಿಶ್ವಾಸದಿಂದ ಮತ್ತೊಮ್ಮೆ ಆಯ್ಕೆಗೊಳಿಸಿದ್ದಾರೆ : ರಾಜಶೇಖರಗೌಡ ಆಡೂರ್
ಕೊಪ್ಪಳ : ನಗರಸಭೆಯ ಉಪಚುನಾವಣೆಯಲ್ಲಿ 11ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಗೌಡ ಆಡೂರು ಅವರು ಅತ್ಯಧಿಕ ಮತಗಳಿಂದ ಆಯ್ಕೆಗೊಂಡ ನಂತರ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರನ್ನು ಸನ್ಮಾನಿಸಿದರು.
ನಂತರ ಮಾತನಾಡಿ 11ವಾರ್ಡಿನ ಜನತೆ ನಗರಸಭೆಯ ಉಪಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಪ್ರೀತಿ ವಿಶ್ವಾಸದಿಂದ ಮತ್ತೊಮ್ಮೆ ಗೆಲ್ಲಿಸಿದ್ದಾರೆ,ಆ ವಾರ್ಡಿನ ಗುರು ಹಿರಿಯರು,ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚೆನ್ನಪ್ಪ ದಿನ್ನಿ ,ಸಿದ್ದು ಮೈನಹಳ್ಳಿ , ಯುವ ಮುಖಂಡ ಬಸವ ರೆಡ್ಡಿ ಶಿವನಗೌಡರ, ನಗರ ಪ್ರಾಧಿಕಾರದ ಸದಸ್ಯರಾದ ಖತೀಬ್ ಭಾಷಾ ಸಾಹೇಬ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಿವಕುಮಾರ್ ಪಾವಲಿ ಶೆಟ್ಟರ್,ಬಾಬಾ ಅರಗಂಜಿ,ಮೆಹಬೂಬ್ ಅರಗಂಜಿ,ವಿಜಯಕುಮಾರ್ ಪಾಟೀಲ್ ಸೇರಿದಂತೆ ವಾರ್ಡಿನ ಹಿರಿಯರು ಉಪಸ್ಥಿತರಿದ್ದರು.