ಯುವಕರು ಕೇವಲ ಉದ್ಯೋಗಸ್ಥರಾಗದೆ ಉದ್ಯೋಗದಾತರಾಗಬೇಕು- ಶ್ರೀನಿವಾಸ್ ಗುಪ್ತಾ
ಕೊಪ್ಪಳ : ರೈತ ದೇಶದ ಬೆನ್ನೆಲುಬು ಅದೇ ರೀತಿ ಕೈಗಾರಿಕೆಗಳು ಸಹ ದೇಶದ ಅಭಿವೃದ್ಧಿಗೆ ಮುಖ್ಯ, ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತವೆ. ಕೈಗಾರಿಕೆಗಳಿಗೂ ಸಹ ಸಾಕಷ್ಟು ಮಹತ್ವವನ್ನು ನೀಡಬೇಕು ನಮ್ಮ ಪಕ್ಕದ ರಾಷ್ಟ್ರವಾಗಿರುವ ಚೀನಾದಲ್ಲಿ ಕೃಷಿಗೆ ನೀಡಿದಷ್ಟೇ ಪ್ರಾಧಾನ್ಯತೆ ಕೈಗಾರಿಕೆಗು ನೀಡಿರುವುದರಿಂದ ಸಾಕಷ್ಟು ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಾಗೂ ಕೊಪ್ಪಳ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಶ್ರೀನಿವಾಸ್ ಗುಪ್ತ ಹೇಳಿದರು.
ಅವರು ನಗರದ ಡಿಐಸಿ ಸಭಾಭವನದಲ್ಲಿ ಎಂಎಸ್ಎಂಇ ಕಾಂಪಿಟೇಟಿವ್ ಸ್ಕೀಮ್ ಬಗ್ಗೆ ಎಂಎಸ್ಎಂಇ ಹಾಗೂ ಡಿಐಸಿ ಜೊತೆಗೆ ರಿಫಾ ಚೇಂಬರ್ ಆಫ್ ಕಾಮರ್ಸ್ ನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹ ಇದೆ ಯುವಕರು ಕೇವಲ ಉದ್ಯೋಗವನ್ನು ಅರಿಸಿಕೊಂಡು ಹೋಗುವವರಾಗದೆ ಉದ್ಯೋಗವನ್ನು ನೀಡುವಂತವರಾಗಬೇಕು ಉದ್ಯಮಶೀಲರಾಗಬೇಕು ಸರ್ಕಾರವು ಸಹ ಕಚ್ಚಾ ವಸ್ತುಗಳನ್ನು ರಫ್ತು ಮಾಡಲು ಅವಕಾಶ ನೀಡದೆ ಕಚ್ಚಾ ವಸ್ತುಗಳಿಂದ ಪ್ರೊಡಕ್ಟ್ ಅನ್ನು ತಯಾರಿಸಿ ಮಾರಾಟ ಮಾಡಲು ಅವಕಾಶ ನೀಡಿದರೆ ಇಲ್ಲಿಯೇ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಬಹುದು. ನಮ್ಮಲ್ಲಿ ಸಾಕಷ್ಟು ಯುವಶಕ್ತಿ ಇದೆ ಜೊತೆಗೆ ತಾಂತ್ರಿಕತೆ ಸೇರಿಕೊಂಡರೆ ನಿಜವಾಗಿಯೂ ಉತ್ತಮವಾದ ಪ್ರೊಡಕ್ಟ್ ಗಳನ್ನು ತಯಾರಿಸಬಹುದು ಈ ನಿಟ್ಟಿನಲ್ಲಿ ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಂಎಸ್ಎಂಇ ಸಹಾಯಕ ನಿರ್ದೇಶಕ ದೋಣಿ ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್ ಹಾಗೂ ಸಹಾಯಕ ನಿರ್ದೇಶಕ ಎಸ್ ಎಂ. ಚವಾಣ್ , ಚೇಂಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಶಾಹಿದ್ ಕವಲೂರ್ , ರುದ್ಸೆಟ್ನ ನ ರಾಯೇ ಶ್ವರ್ ಪೈ., ಪವಿತ್ರಾ ಮತ್ತು ಕಾವ್ಯ ನಗರದ ಉದ್ಯಮಿಗಳು ಪಾಲ್ಗೊಂಡಿದ್ದರು. ಶ್ರೀಮತಿ ಇಂದಿರಾ ಸ್ವಾಗತಿಸಿದರು. ಶ್ರೀಮತಿ ಪ್ರಮೀಳಾ ಬಾಯಿ ವಂದನಾರ್ಪಣೆ ಮಾಡಿದರು.