ಜಿಲ್ಲಾ ಆಸ್ಪತ್ರೆ, ಸಖಿ ಒನ್ ಸ್ಟಾಪ್ ಸೆಂಟರ್‌ಗೆ ನ್ಯಾ. ಮಹಾಂತೇಶ್ ದರಗದ್ ಅನೀರಿಕ್ಷಿತ ಭೇಟಿ: ಪರಿಶೀಲನೆ

0

Get real time updates directly on you device, subscribe now.

 

: ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಮಹಾಂತೇಶ್ ಎಸ್ ದರಗದ್ ಅವರು ಗುರುವಾರ ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ಫಾರ್ಮಸಿ, ಆಸ್ಪತ್ರೆಯ ಊಟದ ಕೊಠಡಿಗೆ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಅನೀರಿಕ್ಷಿತ ಭೇಟಿ ನೀಡಿದರು.

ನ್ಯಾಯಾಧೀಶರ ಭೇಟಿ ಸಮಯದಲ್ಲಿ ಫಾರ್ಮಸಿಯಲ್ಲಿನ ಔಷಧದ ಬಗ್ಗೆ ಸಿಬ್ಬಂದಿಗಳೊಂದಿಗೆ ವಿಚಾರಿಸಿ ಔಷಧಿಗಳು ಸರಿಯಾಗಿ ಜಾರಿಯಾಗಿವೆ ಇಲ್ಲ ಎಂದು ಪರಿಶೀಲನೆ ಮಾಡಿದರು. ನಂತರ ಸಖಿ ಒನ್ ಸ್ಟಾಪ್ ಸೆಂಟರಿನಲ್ಲಿರುವ ರೋಗಿಗಳನ್ನು ವಿಚಾರಿಸಿ ಸರಿಯಾದ ಚಿಕಿತ್ಸೆ ಬಗ್ಗೆ ವೈದ್ಯರೊಂದಿಗೆ ಸಂವಹನ ನಡೆಸಿದರು. ಆಸ್ಪತ್ರೆಯ ಊಟದ ಕೊಠಡಿಯಲ್ಲಿ ದಿನಕ್ಕೆ ಎಷ್ಟು ರೋಗಿಗಳಿಗೆ ಊಟ ಕೊಡಲಾಗುವುದು ಎಂದು ವಿಚಾರಿಸಿ, ಮೊಟ್ಟೆ ಹಾಲು ಹಾಗೂ ಕಾಳುಗಳನ್ನು ಪರಿಶೀಲಿಸಿ ಒಳ್ಳೆಯ ಆಹಾರವಿದೆ ಎಂದು ಖಚಿತಪಡಿಸಿಕೊಂಡು. ಆಸ್ಪತ್ರೆಗೆ 300 ಕ್ಕಿಂತ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಬರುವುದರಿಂದ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂರ್ದಭದಲ್ಲಿ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ, ಆಸ್ಪತ್ರೆಯಲ್ಲಿನ ವಿವಿಧ ಕೆಲಸ ಕಾರ್ಯಗಳ ಕುರಿತು ಪರಿಶೀಲಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!