4ರಂದು ರಘುವೀರ ತೀರ್ಥರ ಆರಾಧನೆ
ಕೊಪ್ಪಳ: ಇಲ್ಲಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ನ. 4ರಂದು ರಘುವೀರತೀರ್ಥರ ಆರಾಧನೆ ಮಹೋತ್ಸವ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಇಲ್ಲಿನ ರಾಯರ ಮಠದಲ್ಲಿ ವೃಂದಾವನ ಪ್ರತಿಷ್ಠಾಪಿಸಿದ ರಘುವೀರತೀರ್ಥರ ಆರಾಧನೆ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯಕ್ರಮಗಳು ಆರಂಭವಾಗಿದ್ದು, ಗುರುವಾರ ವೇದವ್ಯಾಸಾಚಾರ್ಯ ಜೋಶಿ ಅವರಿಂದ ಪ್ರವಚನ ನಡೆಯಿತು.
29ರಂದು ಹನುಮಸಾಗರದ ಪ್ರಲ್ಹಾದಾಚಾರ್ ಪೂಜಾರ, 30ರಂದು ಹುಬ್ಬಳ್ಳಿಯ ಸತ್ಯಮೂರ್ತಿ, ಡಿ. 1ರಂದು ಫಣೀಶಾಚಾರ್, 2ರಂದು ಶ್ರೀಪಾದಾಚಾರ್ಯ ಜಾಲಿಹಾಳ ಹಾಗೂ 3ರಂದು ರಘೋತ್ತಮಚಾರ್ ನಾಗಸಂಪಿಗೆ ಅವರಿಂದ ನಿತ್ಯ ಸಂಜೆ 6 ಗಂಟೆಗೆ ಮಠದ ಆವರಣದಲ್ಲಿ ಪ್ರವಚನ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಅನುಗ್ರಹ ಆಶೀರ್ವಚನ ನಡೆಯಲಿದೆ.
4ರಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ, ಲಕ್ಷ ತುಳಸಿ ಅರ್ಚನೆ, ವಿಷ್ಣುಸಹಸ್ರನಾಮ ಪಾರಾಯಣ, 6.30ಕ್ಕೆ ಮಹಿಳೆಯರಿಂದ ಶ್ರೀನಿವಾಸ ಕಲ್ಯಾಣ ಪಾರಾಯಣ, ಗ್ರಾಮ ಪ್ರದಕ್ಷಣೆ, ಹಸ್ತೋದಕ ನಡೆಯಲಿದೆ. ಸಂಜೆ 6ಕ್ಕೆ ಬೆಂಗಳೂರಿನ ಪಂಡಿತ್ ಅಂಬರೀಷಚಾರ್ ಅವರಿಂದ ಪ್ರವಚನ, ಬಳಿಕ ಕಲಬುರಗಿಯ ರಮೇಶ ಕುಲಕರ್ಣಿ (ಭಕ್ತಿ ಸಂಗೀತ), ಮತ್ತು ದೀಪೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ಪ್ರಕಟಣೆ ಕೋರಿದೆ.