ಆಯಾ ರಾಜ್ಯದ ಭಾಷೆಯನ್ನೇ ಶಿಕ್ಷಣ ಮಾಧ್ಯಮವಾಗಿ ಮಾಡಬೇಕಿದೆ-ಅಲ್ಲಮಪ್ರಭು ಬೆಟ್ಟದೂರು

Get real time updates directly on you device, subscribe now.


ಕೊಪ್ಪಳ ನ, 28, ಆಯಾ ರಾಜ್ಯದ ಭಾಷೆಯಲ್ಲಿ ಒಂದರಿಂದ ಹತ್ತನೆಯ ತರಗತಿಯವರಿಗೆ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜರೂರತ್ತಿದೆ. ಹಾಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅವಶ್ಯಕತೆ ಇದೆಯೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯ ಪಟ್ಟರು.

ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರದಂದು ಕಾಲೇಜಿನ ಕನ್ನಡ ವಿಭಾಗ ಆಯೋಜನೆ ಮಾಡಿದ್ದ ‘ ಕನ್ನಡ ಕ್ರಿಯಾ ವೇದಿಕೆ’ ವಿದ್ಯಾರ್ಥಿ ಘಟಕ ಉದ್ಘಾಟನೆ ಮತ್ತು ರಾಜತ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಮಾತೃಭಾಷೆ ಶಿಕ್ಷಣ ಬಲಶಾಲಿಯಾದದ್ದು. ಅದರಲ್ಲೇ ಮಕ್ಕಳು ಕಲಿತರೆ ವಿಷಯ ಚೆನ್ನಾಗಿ ಅರ್ಥವಾಗುತ್ತದೆ. ಹಾಗಾಗಿ ಎಲ್ಲ ರಾಜ್ಯಗಳು ಈ ದಿಶೆಯಲ್ಲಿ ಆಲೋಚಿಸುವ ಅಗತ್ಯ ವಿದೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಮನಸ್ಸು ಕೊಟ್ಟು ಓದಬೇಕು. ಓದಿದ್ದು ಮನನವಾದರೆ ಅವರ ಭವಿಷ್ಯ ಚೆನ್ನಾಗಿ ಇರಬಲ್ಲುದು.
ಕಲೆ, ಸಾಹಿತ್ಯ ಮತ್ತು ಸಂಗೀತ ಇಲ್ಲದೇ ಇರುವ ನಮ್ಮ ಮನಸ್ಸು ಜಡವಾಗಿರುತ್ತದೆ. ಸಾವಿತ್ರಿ ಬಾ ಪುಲೆ ಯವರು ದೇಶದಲ್ಲಿ ಮೊದಲು ಬಾರಿಗೆ ಮಹಿಳೆಯರಿಗೆ ಶಿಕ್ಷಣ ಕೊಟ್ಟಿದ್ದಾರೆ. ಈ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಸುಲಭವಾಗಿ ಶಿಕ್ಷಣ ದೊರೆತಿಲ್ಲ. ಬಾರತದ ಎಲ್ಲ ಭಾಷೆಗಳು ನಶಿಸುತ್ತಿವೆ. ಜಾಗತಿಕರಣದಿಂದ ಇಂಗ್ಲಿಷ್ ಭಾಷೆಗೆ ಹೆಚ್ಚು ಮನ್ನಣೆ ಬಂದಿದೆ. ಭಾರತದ ಎಲ್ಲ ಭಾಷೆಗಳು ಇಂಗ್ಲಿಷ್ ನಿಂದ ಕಷ್ಟ ಅನುಭವಿಸುತ್ತವೆ. ಕನ್ನಡ ಭಾಷೆ ಬಹಳ ಪ್ರಾಚಿನವಾದ ಭಾಷೆ. ಕನ್ನಡ ವೈಚಾರಿಕತೆ ಭಾಷೆ, ಕನ್ನಡ ವಿಜ್ಞಾನ ಭಾಷೆ. ಇದು ದಕ್ಷಿಣ ಭಾರತದ ದ್ರಾವಿಡ್ ಭಾಷೆಗಳಲ್ಲಿ ಒಂದು. ಕನ್ನಡಿಗರು ವಿವಿಧ ಕ್ಷೆತ್ರಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು. ನಾವೆಲ್ಲರೂ ದೇಶೀ ಬಾಷೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುವ ಶಿಕ್ಷಣ ಪ್ರೇಮಿ ಬಿ. ಜಿ ಕರಿಗಾರ ಅವರು ಮಾತನಾಡುತ್ತ ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ ಇನ್ನಿತರ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ನಮ್ಮ ಹಿರಿಯರ ಪ್ರತಿಫಲವಾಗಿ ಕರ್ನಾಟಕ ರಾಜ್ಯ ಉದಯವವಾಗಿದೆ. ಕನ್ನಡ ಮಾದ್ಯಮದಲ್ಲಿ ಓದಿದವರು ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಮಾತನಾಡುತ್ತ ನಾವು ಸೇವಿಸುವ ಗಾಳಿ ಮತ್ತು ತಿನ್ನುವ ಅನ್ನದ ಭಾಷೆಯಾದ ಕನ್ನಡವನ್ನು ನಾವು ಮರೆಯಬಾರದು. ಕನ್ನಡವನ್ನು ಪ್ರೀತಿಸಬೇಕು. ಕನ್ನಡ ಭಾಷೆಯನ್ನು ಬೆಳೆಸಬೇಕು. ಸಾಹಿತ್ಯವು ಸಮಾಜದ ಕನ್ನಡಿಯಾಗಿದೆ. ಸಾಹಿತ್ಯದ ಮೂಲಕ ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ನಾವು ವರ್ಷವಿಡಿ ಕನ್ನಡ ಕಾರ್ಯಕ್ರಮ ಗಳನ್ನು ಮಾಡಬೇಕು. ಕನ್ನಡದ ಕ್ರಿಯಾಶೀಲತೆಗೆ ನಾವು ಹೆಚ್ಚು ಒತ್ತು ಕೊಡಬೇಕು. ನಾವು ಎಲ್ಲ ಭಾಷೆಗಳನ್ನು ಪ್ರೀತಿಸೋಣ. ಕನ್ನಡ ಬಾಷೆ ಕುರಿತು ಹೆಚ್ಚು ಅಭಿಮಾನ ಇಟ್ಟುಕೊಳ್ಳೋಣ ಎಂದು ತಿಳಿಸಿದರು.

ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಡಾ. ಅಶೋಕ ಕುಮಾರ್,ಸುಮಿತ್ರ, ಶುಭ, ಶಿವ ಪ್ರಸಾದ್ ಹಾದಿಮನಿ, ಡಾ. ಮಂಜಪ್ಪ, ಡಾ. ಸೂರಪ್ಪ, ವಿರೂಪಾಕ್ಷಪ್ಪ, ಮುತ್ತಾಳ ಹಾಗೂ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

ಕಾವೇರಿ, ನೇತ್ರ ಮತ್ತು ಸಬಿಹಾ ಪ್ರಾರ್ಥನೆ ಗೀತೆ ಹಾಡಿದರು. ಗೀತಾ ಬಜೇಂತ್ರಿ ಸ್ವಾಗತಿಸಿದರು.. ಗಂಗಮ್ಮ ವಂದಿಸಿದರು, ಭೂಮಿಕಾ ಹೂಗಾರ ನಿರೂಪಣೆ ಮಾಡಿದರು.

Get real time updates directly on you device, subscribe now.

Comments are closed.

error: Content is protected !!