ಬಡಜನರು ಮತ್ತು ಕೆಳ ವರ್ಗದವರು ಜೀವನದಲ್ಲಿ ಮುಂದೆ ಬರಲು ಸಂವಿಧಾನ ಕಾರಣವಾಗಿದೆ : ಡಾ. ಗಣಪತಿ ಲಮಾಣಿ 

Get real time updates directly on you device, subscribe now.

ಬಡಜನರು ಮತ್ತು ಕೆಲವರ್ಗದವರು ಜೀವನದಲ್ಲಿ ಮುಂದೆ ಬರಲು ಸಂವಿಧಾನ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿ ಅವರು ತಿಳಿಸಿದರು.
 ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ರಾಜ್ಯಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ  ಸಂವಿಧಾನ ಅಂಗಿಕಾರ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
 ಅವರು ಮುಂದುವರೆದು ಮಾತನಾಡುತ್ತ ನಮ್ಮ ಸಂವಿಧಾನದ ಮತ್ತು ಕಾನೂನು ಪ್ರಕಾರ ನಾವೆಲ್ಲರೂ ಸಮಾನರು. ಭಾರತ ಬಹಳ ವಿಶಾಲವಾದ ದೇಶ. ಈ ದೇಶಕ್ಕೆ ಅನುಕೂಲವಾದ ಸಂವಿಧಾನ ಡಾ. ಬಿ ಆರ್ ಅಂಬೇಡ್ಕರ್ ಅವರು ಕೊಟ್ಟಿದ್ದಾರೆ. ಸಂವಿಧಾನದಿಂದ ಕೆಲವರ್ಗದ ಜನರು ಶಿಕ್ಷಣ ಪಡೆಯಲು ಕಾರಣ ವಾಗಿದೆ. ಸಂವಿಧಾನದ ಪರಿಚಯವನ್ನು ಎಲ್ಲ ಹಳ್ಳಿಗಳಲ್ಲಿ ಪ್ರಾಸರವಾಗಬೇಕು ಎಂದು ತಿಳಿಸಿದರು.
 ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡುತ್ತ ಸಂವಿಧಾನವೆಂದರೆ ಕಾನೂನ ದಾಖಲೆಗಳ ಪುಸ್ತಕ. ಸಂವಿಧಾನವು ಸರಿಯಾಗಿ ಜಾರಿಗೆಯಾದರೆ ನಮ್ಮ ದೇಶ ಅಭಿವೃದ್ಧಿ ಆಗುತ್ತದೆ. ಸಂವಿಧಾನ ನಮಗೆ ಮೂಲಭೂತ ಹಕ್ಕುಗಳು ಕೊಟ್ಟಿವೆ. ನಮ್ಮದು ಜಾತ್ಯತೀತ ರಾಷ್ಟ್ರ. ನಾವು ಸಮಾನವಾಗಿ ಬದಕಲು ಸಂವಿಧಾನ ಅವಕಾಶ ಕೊಟ್ಟಿದೆ. ಸಂವಿಧಾನವನ್ನು ಎಲ್ಲರೂ ಓದಬೇಕು. ನೀವು ಓದಿದ ನಂತರ ಅದನ್ನು ಇನ್ನೊಬ್ಬರಿಗೆ ತಿಳಿಸಿ ಹೇಳಬೇಕು ಎಂದು ಹೇಳಿದರು.
ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ವಿಠೋಬ ಎಸ್ ಅವರು ಸಂವಿಧಾನ ದಿನವನ್ನು ಅತ್ಯಂತ ಸಂತೋಷದಿಂದ ಆಚರಣೆ ಮಾಡಬೇಕು. ನಾವು ಉನ್ನತ ಶಿಕ್ಷಣಕ್ಕೆ ಪಡೆಯಲು ಪ್ರಮುಖ ಕಾರಣ ನಮ್ಮ ಸಂವಿಧಾನ. ಈ ಸಂವಿಧಾನ ಇರುವುದರಿಂದ ನಾವೆಲ್ಲರೂ ಒಗ್ಗಟ್ಟು ಮತ್ತು ಏಕತೆಯಿಂದ ಇದ್ದೇವೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥಾರಾದ ಡಾ. ಹುಲಿಗೆಮ್ಮ ಬಿ ಅವರು ಮಾತನಾಡುತ್ತ ಸಂವಿಧಾನದಿಂದ ದೇಶದ ತಳ ಸಮುದಾಯಗಳಿಗೆ ಸಾರ್ವಜನಿಕವಾಗಿ ಮಾತನಾಡುವ ಅವಕಾಶ ಸಿಕ್ಕಿದೆ. ನಮಗೆ ವಾಕ್ ಸ್ವಾತಂತ್ರ ಇದೆ. ಸಂವಿಧಾನದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇದೆ ಎಂದು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಅವರು ಮಾತನಾಡುತ್ತ ಇವತ್ತು ಸಂವಿಧಾನ ಇರುವುದರಿಂದ ಎಲ್ಲರಿಗೂ ಶಿಕ್ಷಣ ಸಿಕ್ಕಿದೆ. ಇದರಿಂದ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿವೆ. ಮಹಿಳೆಯರ ಅಸ್ತಿಯಲ್ಲಿ ಹಕ್ಕುಗಾಗಿ ಅಂಬೇಡ್ಕರ್ ಅವರು ಹೊರಾಡದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ನಿಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಅಶೋಕ ಕುಮಾರ್, ಶ್ರೀ ಮತಿ ಸುಮಿತ್ರ ಎಸ್. ವಿ, ಶುಭ, ಜಾಫರ್ ಸಾದಿಕ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಾಫರ್ ನಿರೂಪಿದರು. ಯಲ್ಲಮ್ಮ, ಮಹಾದೇವಿ, ಭವ್ಯ ಪ್ರಾರ್ಥನೆ ಗೀತೆ ಹಾಡಿದರು. ತಸ್ಲೀಮ್ ಸ್ವಾಗತಿಸಿದರು. ಭವ್ಯ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!