ಕರ್ನಾಟಕದ ಸಂವಿಧಾನ ಜಾಗೃತಿಯ ಅಭಿಯಾನದಿಂದ ದೇಶದಲ್ಲಿ ಆಂತರಿಕ ಕ್ರಾಂತಿಯಾಗಿದೆ : ಡಾ ಹೆಚ್ ಸಿ ಮಹದೇವಪ್ಪ

Get real time updates directly on you device, subscribe now.

ಬೆಂಗಳೂರು ನವೆಂಬರ್ 26:ಇದು ಭಾರತೀಯರಾದ ನಮಗೆಲ್ಲ ಐತಿಹಾಸಿಕ ಮತ್ತು ಅಷ್ಟೇ ಹೆಮ್ಮೆಯ ದಿನ.ಈ ಸಂವಿಧಾನ ದಿನಕ್ಕೆ 75 ವರ್ಷ ತುಂಬಿದೆ. ಈ ದಿನ 75 ವರ್ಷಗಳ ಈ ಅವಧಿಯಲ್ಲಿ ನಾವು ಸಾಗಿ ಬಂದ ಹಾದಿಯನ್ನು ಈ ದಿನ ನಾವು ಅವಲೋಕನ ಮಾಡಬೇಕಾದ ಕ್ಷಣ ಇದಾಗಿದೆ. ನಾವು ಸಂವಿಧಾನದ ಪೀಠಿಕೆಯ ಓದನ್ನು ಕಡ್ಡಾಯಗೊಳಿಸಿದ ನಂತರದಲ್ಲಿ ಜನರು ನಿಧಾನಕ್ಕೆ ಅರ್ಥ ಮಾಡಿಕೊಳ್ಳಲು ಆರಂಭಿಸಿದರು. ಸಮಾನತೆಯ ಸೂಚಕವಾದ ಸಂವಿಧಾನ ಬದಲಾವಣೆಯ ಕುರಿತಂತೆ ಹಲವು ಜನರು ಹಲವು ರೀತಿಯಲ್ಲಿ ಮಾತನಾಡಿದ್ದರು. ಆದರೆ ನಮ್ಮ ಸರ್ಕಾರವು ಬಂದ ನಂತರ ಸಂವಿಧಾನ ಪೀಠಿಕೆ ಓದು, ಜಾಗೃತಿ ಜಾಥಾ ಮತ್ತು ಮಾನವ ಸರಪಳಿಯಂತಹ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ ಸಂವಿಧಾನದ ಕುರಿತು ಜಾಗೃತಿ‌ ಮೂಡಿತು. ಇದು ರಾಜಕೀಯವಾಗಿಯೂ ಕೋಮುವಾದಿ‌ ಪಕ್ಷಗಳಿಗೆ ಪ್ರಬಲ ಸವಾಲನ್ನು ಒಡ್ಡಿತು ಎಂದು  ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ತಿಳಿಸಿದರು.

ಇಂದು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ 75 ನೇ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುದರು,

ಹಿಂದೆ ಬುಡಕಟ್ಟು ಕಾಲದಲ್ಲಿ ಮೆಲ್ಲಗೆ ಚಲನೆಗೆ ಬಂದ ಪ್ರಜಾಪ್ರಭುತ್ವವು ಬುದ್ಧನ ಕಾಲದಲ್ಲಿ ಬಿಕ್ಕುಗಳ ಮೂಲಕ ಮತ್ತು 12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದ ರೂಪದಲ್ಲಿ ಪ್ರಜಾಪ್ರಭುತ್ವವು ಮುನ್ನಲೆಗೆ ಬಂದಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಜನಪ್ರತಿನಿಧಿಗಳಿಗೆ ಅವಕಾಶ ಕೊಟ್ಟು ಅವರು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಮುನ್ನುಡಿ ಬರೆದರು.

ಸಂವಿಧಾನವನ್ನು ರಚನೆ ಮಾಡುವ ಹಿಂದೆ ಅದಕ್ಕೆ ದೊಡ್ಡ ಚರಿತ್ರೆ ಇದೆ.

ಸಂವಿಧಾನ ಸಮರ್ಪಣೆ ಆಗುವಾಗಲೇ ಭಾರತೀಯರಾದ ನಾವುಗಳು ಎಂದೇ ನಮೂದಿಸಿದೆಯೇ ಹೊರತು, ಅದರಲ್ಲಿ ಹಿಂದೂಗಳಾದ ನಾವು, ಮುಸ್ಲೀಮರಾದ ನಾವು ಅಥವಾ ಕ್ರೈಸ್ತರಾದ ನಾವು ಎಂದು ಎಲ್ಲೂ ಹೇಳಿಲ್ಲ.

ಸಂವಿಧಾನದ ಆಶಯಗಳಾದ ಸಮಾನತೆ,ಸೋದರತ್ವ ಮತ್ತು ಭ್ರಾತೃತ್ವದ ಅಡಿಯಲ್ಲಿ ಎಲ್ಲಾ ಜನರು ಬದುಕಬೇಕಿದ್ದು ಇದಕ್ಕೆ ಅಡ್ಡಿಯಾಗಿರುವ ಶಕ್ತಿಗಳನ್ನು ನಾವು ಒಟ್ಟಾಗಿ ಎದುರಿಸಬೇಕಿದೆ ಎಂದು ಅವರು ಹೇಳಿದರು.

ನಮ್ಮಲ್ಲಿ ಯಾವ ಧರ್ಮವೂ ಶ್ರೇಷ್ಠವಲ್ಲ, ಕನಿಷ್ಠವಲ್ಲ ಇಲ್ಲಿ ಎಲ್ಲರಿಗೂ ತಮ್ಮ ಆಚರಣೆಯನ್ನು ವೈಜ್ಞಾನಿಕತೆ ಮತ್ತು ವೈಚಾರಿಕತೆಯ ಆಧಾರದಲ್ಲಿ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆ.

ಇನ್ನು ಇಂದಿರಾ ಗಾಂಧಿ ಅವರ ಕಾಲದಲ್ಲಿ ಪ್ರಸ್ತಾಪಿಸಲಾದ, ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳನ್ನು ಅದರೊಳಗೆ ಅಡಗಿಸಿದ್ದು ಸುಪ್ರಿಂ ಕೋರ್ಟ್ ಈ ತತ್ವಗಳನ್ನು ಎತ್ತಿ ಹಿಡಿದಿದೆ.

ಲಾಹೋರ್ ಘೋಷಣೆಯ ಆದಿಯಾಗಿ ಬಹಳಷ್ಟು ಘೋಷಣೆಗಳನ್ನು ಸಂವಿಧಾನ ರಚನಾ ಸಭೆಯಲ್ಲಿ ಸೇರಿಸಿ, ಅದನ್ನು ನವಂಬರ್ 26 ರಂದು ಸಮರ್ಪಿಸಿದರು.

ಸರ್ವಾಧಿಕಾರಿ ಧೋರಣೆಗೆ ಎದುರಾಗಿ,ಬಹಳಷ್ಟು ಪ್ರಜಾಪ್ರಭುತ್ವ ದೇಶಗಳ ತತ್ವ ಅಳವಡಿಸಿಕೊಂಡು ಬಂದಂತಹ ಇಂತಹ ಸಂವಿಧಾನದ ರಕ್ಷಣೆಯು ನಮ್ಮೆಲ್ಲರ ಹೊಣೆ ಎಂದು ಸಚಿವರು ತಿಳಿಸಿದರು.

ಈ ಮಹತ್ತರವಾದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವ ಭೈರತಿ ಸುರೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಇದೇ ವೇಳೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಚಾಲನೆ ನೀಡಲಾಯಿತು ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಇತರೆ ಪ್ರವೇಶ ಪರೀಕ್ಷೆ ದೃಷ್ಟಿಯಿಂದ ಟ್ಯಾಬ್ ಗಳನ್ನು ವಿತರಿಸಲಾಯಿತು

Get real time updates directly on you device, subscribe now.

Comments are closed.

error: Content is protected !!