ಅಭ್ಯರ್ಥಿಯ ಗೆಲವು ಕಾರ್ಯಕರ್ತರ ಗೆಲವು – ಡಾ.ಬಸವರಾಜ್ ಕ್ಯಾವಟರ್ ಸಂತಸ
![]()
ಕೊಪ್ಪಳ: ಜನರು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಧೂಳು ಮುಕ್ತ ನಗರ ಮಾಡಲು ಆಡಳಿತದ ವೈಫಲ್ಯತೆ ಎದ್ದು ಕಾಣುತ್ತಿದೆ. ನಗರಸಭೆಯ ಅಧ್ಯಕ್ಷರು ಮತ್ತು ಶಾಸಕರು, ಸಂಸದರ ಆಡಳಿತಕ್ಕೆ ಬೇಸತ್ತು ಕೊಪ್ಪಳದ ಜನರು ಬದಲಾವಣೆಯನ್ನು ತರಲು ಬಯುಸುತ್ತಿದ್ದಾರೆ ಎನ್ನುವುದಕ್ಕೆ ನಗರಸಭೆಯ ಉಪ ಚುನಾವಣೆಯಲ್ಲಿ 8 ನೇ ವಾರ್ಡ್ ನಲ್ಲಿ ಜನರು ಬಿಜೆಪಿ ಅಭ್ಯರ್ಥಿ ಬೆಂಬಲಿಸಿರುವುದು ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವೈದ್ಯ ಬಸವರಾಜ ಕ್ಯಾವಟರ್ ಬಣ್ಣಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊಪ್ಪಳ ನಗರಸಭೆಯ 8ನೇ ವಾರ್ಡ್ ಉಪಚುನಾವಣೆಯಲ್ಲಿ ವಿಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ಕವಿತಾ ಬಸವರಾಜ ಗಾಳಿ ಅವರಿಗೆ ಮತ್ತು ಮತದಾರರಿಗೂ ಧನ್ಯವಾದಗಳು ಹಾಗೂ ಅಭಿನಂದನೆಗಳು.
ನಗರದಲ್ಲಿ ಎಂಟನೇ ವಾರ್ಡಿನ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಮಹಿಳೆಯರು ಸಾಕಷ್ಟು ಮೂಲಭೂತ ಸೌಕರ್ಯ ವಂಚಿತರಾಗಿದ್ದಾರೆ ಎಂದು ಜನರೆ ನಮಗೆ ತಿಳಿಸಿದರು ಹಾಗೂ ಸಾರ್ವಜನಿಕ ಶೌಚಾಲಯದ ಸ್ಥಿತಿಗತಿಯನ್ನು ತಿಳಿಸಿದ್ದು ಕಂಡರೆ ನಗರದ ಜನರು ಎಷ್ಟರಮಟ್ಟಿಗೆ ಮೂಲ ಸೌಕರ್ಯಗಳಿಂದ ವಂಚಿತರಾಗ್ತಿದ್ದಾರೆ ಎಂದು ತಿಳಿಯುತ್ತದೆ. ಈ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ನಗರದ ಜನತೆ ತಕ್ಕ ಪಾಠ ಕಲಿಸುತ್ತಾರೆ. ಇದು ಎಚ್ಚರಿಕೆಯ ಗಂಟೆ ನೆನಪಿರಲಿ. ಪರಭಾವ ಗೊಂಡಿರುವ ಹನ್ನೊಂದನೆ ವಾರ್ಡಿನ ಚನ್ನಬಸವಗಾಳಿ ಅವರು ಮುಂದಿನ ದಿನಮಾನಗಳಲ್ಲಿ ನಮ್ಮ ಜೊತೆಯಲ್ಲಿ ಪಕ್ಷ ಸಂಘಟನೆಯ ಮಾಡಿ ವಾರ್ಡಿನ ಜನರ ಜೊತೆಯಲ್ಲಿರುತ್ತಾರೆ. ಮುಂದಿನ ದಿನಗಳಲ್ಲಿ ಸಹ ನಮ್ಮ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಮತ್ತು ಗೆಲವು ಪಡೆಯುತ್ತಾರೆ ಎಂಬ ವಿಶ್ವಾಸವಿದೆ.
ನಮ್ಮದು ಪಕ್ಷ ಸಂಘಟನೆ ಮೂಲ ಮಂತ್ರ ಎಂದು ತಿಳಿಸಿದ್ದಾರೆ. ಎಂಟನೆಯ ವಾರ್ಡಿನ ಗೆದ್ದಿರುವ ನಮ್ಮ ಪಾರ್ಟಿಯ ಕವಿತಾ ಅವರೇ ಮೊದಲು ವಾರ್ಡಿನ ಮೂಲ ಸೌಕರ್ಯಕ್ಕೆ ಒತ್ತು ನೀಡಿ, ನಿಮ್ಮ ಜೊತೆಯಲ್ಲಿ ನಮ್ಮ ಪಾರ್ಟಿಯವರು ಮತ್ತು ವಾರ್ಡಿನ ಜನರು ನಿಮ್ಮ ಜತೆಯಲ್ಲಿರುತ್ತೇವೆ ಎಂದು ಇದೇ ವೇಳೆ ಗೆದ್ದ ಅಭ್ಯರ್ಥಿಗೆ ಕ್ಯಾವಟರ್ ಅವರು ಸಲಹೆ ನೀಡಿದ್ದಾರೆ
Comments are closed.